More

    VIDEO: ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ ಭವಿನಾಬೆನ್ ಪಟೇಲ್

    ಟೋಕಿಯೊ: ಭಾರತದ ವೀಲ್‌ಚೇರ್ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾಬೆನ್ ಪಟೇಲ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಕ್ಲಾಸ್-4 ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಭವಿನಾಬೆನ್ 3-2 ರಿಂದ ಹಾಲಿ ರನ್ನರ್‌ಅಪ್ ಚೀನಾದ ಮಿಯಾ ಜಾಂಗ್ ಅವರನ್ನು ಮಣಿಸಿ ಈ ಸಾಧನೆ ಮಾಡಿದರು. 34 ವರ್ಷದ ಭವಿನಾಬೆನ್ ಪಟೇಲ್, ಚೀನಾ ಆಟಗಾರ್ತಿಯಿಂದ ಪ್ರಬಲ ಪೈಪೋಟಿ ಎದುರಿಸಿದರೂ 7-11, 11-7, 11-4, 9-11, 11-8 ರಿಂದ ಕೇವಲ 34 ನಿಮಿಷಗಳಲ್ಲಿ ಜಯ ದಾಖಲಿಸಿದರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭವಿನಾಬೆನ್ ವಿಶ್ವ ನಂ.1 ಆಟಗಾರ್ತಿ ಚೀನಾದ ಯಿಂಗ್ ಝೌ ಅವರನ್ನು ಎದುರಿಸಲಿದ್ದಾರೆ.

    ಗುಜರಾತ್‌ನ ಮೆಸಾನಾ ಜಿಲ್ಲೆಯ ಸುನ್‌ಧಿಯಾ ಎಂಬ ಪುಟ್ಟ ಗ್ರಾಮದವರಾದ ಹಸ್ಮುಖ್‌ಭಾಯಿ ಪಟೇಲ್ ಎಂಬುವರ ಪುತ್ರಿಯಾದ ಭವಿನಾಬೆನ್ ಪಟೇಲ್, ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿಕೊಳ್ಳುವ ಮೂಲಕ ಕೋಟ್ಯಂತರ ಭಾರತೀಯರ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ‘ನಾನು ಟೋಕಿಯೊಗೆ ಆಗಮಿಸಿದಾಗ, ಉತ್ತಮ ನಿರ್ವಹಣೆ ನೀಡುವುದಷ್ಟೇ ನನ್ನ ಗುರಿಯಾಗಿತ್ತು. ಶೇಕಡ 100 ಶ್ರಮ ಹಾಕುವುದೇ ನನ್ನ ಮೊದಲ ಆಧ್ಯತೆಯಾಗಿತ್ತು’ ಎಂದು ಭವಿನಾಬೆನ್ ಹೇಳಿದ್ದಾರೆ. ಭವಿನಾಬೆನ್ 12 ತಿಂಗಳ ಮಗುವಿದ್ದಾಗ ಪೊಲೀಯೊಗೆ ತುತ್ತಾದ ಹಿನ್ನೆಲೆಯಲ್ಲಿ ಶಸಚಿಕಿತ್ಸೆಗೆ ಒಳಗಾಗಿದ್ದರು.

    ‘ನಾನು ದೇಶದ ಜನರ ಆಶೀರ್ವಾದದಿಂದಾಗಿ ಇದುವರೆಗೂ ಉತ್ತಮ ನಿರ್ವಹಣೆಯನ್ನೇ ತೋರಿರುವೆ, ಸ್ವರ್ಣ ಜಯಿಸುವುದೇ ನನ್ನ ಮುಂದಿರುವ ಗುರಿ. ಶೇಕಡ 100 ಪ್ರಯತ್ನ ಪಡುವೆ’ ಎಂದು ಹೇಳಿಕೊಂಡಿದ್ದಾರೆ. ಭವಿನಾಬೆನ್ ಪಟೇಲ್, ಮೊದಲ ಪಂದ್ಯದಲ್ಲಿ ಸೋಲನುಭವಿಸಿದರೂ ಎರಡನೇ ಪಂದ್ಯದಲ್ಲಿ ಭರ್ಜರಿ ನಿರ್ವಹಣೆ ತೋರಿದ್ದರು. ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts