More

    ಎಸ್‌ಟಿ ಸೇರ್ಪಡೆಗೆ ಒತ್ತಾಯಿಸಿ ಭಾವಸಾರ ಕ್ಷತ್ರೀಯ ಸಮಾಜದ ಮನವಿ

    ಚಿತ್ರದುರ್ಗ
    ಭಾವಸಾರ ಕ್ಷತ್ರೀಯ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಸೋಮವಾರ ಭಾವಸಾರ ಕ್ಷತ್ರೀಯ ಸಮುದಾಯದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಸಮುದಾಯ ಮೂಲ ದರ್ಜಿ ವೃತ್ತಿಯನ್ನು ಜೀವನ್ನು ಕಂಡುಕೊಂಡಿದ್ದು,ಆದರೆ ಈಚೆಗೆ ದೊಡ್ಡ ಕಾರ್ಖಾನೆಗಳ ಮುಖಾಂತರ ಸಿದ್ಧ ಉಡುಪು ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಇದರಿಂದ ನಮ್ಮ ವೃತ್ತಿ ಸಂಕಷ್ಟಕ್ಕೆ ಸಿಲುಕಿದೆ. ನಿತ್ಯದ ಜೀವನಕ್ಕೆ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಸಲು ಅತ್ಯಂತ ಕಷ್ಟವಾಗುತ್ತಿದೆ.
    ಭಾವಸಾರ ಕ್ಷತ್ರೀಯ ಸಮುದಾಯಕ್ಕೆ ಪ್ರಸ್ತುತ 2ಎ ಮೀಸಲು ಇದೆ. ಆದರೆ ಇದರಲ್ಲಿ ಸದ್ಯ 112 ಜಾತಿಗಳಿವೆ. ನಾವು ತೀರ ಹಿಂದುಳಿದವರಾಗಿ ರುವುದರಿಂದ ಸಮುದಾಯಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಅನುಕೂಲವಾಗುವಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು.

    ಸಮಾಜದ ಜಿಲ್ಲಾಧ್ಯಕ್ಷ ಆರ್.ಎಂ.ಶ್ಯಾಮ್‌ಮುಸಳೆ,ಬಿ.ಎಸ್.ನಾಗರಾಜ್‌ಬೇದ್ರೆ,ಜಯರಾಂರಾವ್‌ಗುಜರ್,ಶ್ರೀಧರ್ ಬೇದ್ರೆ,ರಾಜೇಶ್ ಬೇದ್ರೆ, ಶ್ರೀಧರ್ ಗುಜ್ಜರ್,ಮಮತಾ ಪರಶುರಾಮ್,ಲಾವಣ್ಯಬೇದ್ರೆ,ಶಾರದಾ ಗುಜ್ಜರ್,ಲಲಿತಾ ಬೇದ್ರೆ,ಚಂದ್ರಶೇಖರ್ ಗುಜ್ಜರ್,ಕೃಷ್ಣ ಪಟಿಗೆ,ಮುಧುಸೂಧನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts