More

    ಹೆಚ್ಚಾಗಲಿದೆ ಕರೆ ದರ, ಡೇಟಾ ಶುಲ್ಕ; ಬಳಕೆ ಹೆಚ್ಚಾದರೂ ನಷ್ಟದಲ್ಲಿವೆಯಂತೆ ಕಂಪನಿಗಳು…!

    ನವದೆಹಲಿ: ಭಾರತದಲ್ಲಿ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜತೆಗೆ, ಡೇಟಾ ಬಳಕೆ ಕೂಡ ಇನ್ನಿಲ್ಲದ ವೇಗದಲ್ಲಿ ಏರಿಕೆಯಾಗುತ್ತಿದೆ. ಹೀಗಿದ್ದರೂ ಟೆಲಿಕಾಂ ಕಂಪನಿಗಳು ನಷ್ಟದಲ್ಲಿವೆಯಂತೆ..! ಹೀಗಾಗಿ ಮತ್ತೊಂದು ಸುತ್ತಿನ ದರ ಹೆಚ್ಚಳಕ್ಕೆ ಸಜ್ಜಾಗಿವೆ.

    ಏರ್​ಟೆಲ್​ ಕಂಪನಿ ಜೂನ್​ ತ್ರೈಮಾಸಿಕದಲ್ಲಿ 15,933 ಕೋಟಿ ರೂ. ನಷ್ಟ ದಾಖಲಿಸಿದೆ. ಈ ಪೈಕಿ 11,746 ಕೋಟಿ ರೂ. ಕಾನೂನಾತ್ಮಕವಾಗಿ ಪಾವತಿಸಬೇಕಾದ ಮೊತ್ತ ಎಂದು ತೋರಿಸಿದೆ.

    ಇದನ್ನೂ ಓದಿ; ಆಗಸ್ಟ್​ನಲ್ಲಿ ಕರ್ನಾಟಕ ಶಿಕ್ಷಣ ನೀತಿ ಅಂತಿಮ: ಸಚಿವ ಸುರೇಶ್​ಕುಮಾರ್ ಮಾಹಿತಿ; ಸಮಿತಿ ರಚನೆ 

    ಈ ಕಾರಣಕ್ಕೆ, ಏರ್​ಟೆಲ್​ ಕಂಪನಿ ಮತ್ತೊಂದು ಸುತ್ತಿನ ಬೆಲೆಯೇರಿಕೆ ಮಾಡುತ್ತಿದೆ. ಸದ್ಯ ಕಂಪನಿಗೆ ಪ್ರತಿ ಬಳಕೆದಾರನಿಂದ ದೊರೆಯುತ್ತಿರುವ ಸರಾಸರಿ ಆದಾಯವನ್ನು 200 ರೂ., ನಂತರದ ಹಂತದಲ್ಲಿ 300 ರೂ. ಗಳಿಗೆ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಕಂಪನಿಯ ಸಿಇಒ ಗೋಪಾಲ್​ ವಿಠ್ಠಲ್​ ಹೇಳಿದ್ದಾರೆ. ಹೀಗಾಗಿ ಕರೆ ದರ ಹಾಗೂ ಡೇಟಾ ಶುಲ್ಕ ಹೆಚ್ಚಿಸಲಿದೆ. ಆದರೆ, ಯಾವಾಗ ಎಂಬುದನ್ನು ಬಹಿರಂಗ ಪಡಿಸಿಲ್ಲ.

    ಕಳೆದ ಡಿಸೆಂಬರ್​ನಲ್ಲಿ ಏರ್​ಟೆಲ್​ ಶೇ.42ರವರೆಗೆ ದರ ಹೆಚ್ಚಳ ಮಾಡಿತ್ತು. ಸದ್ಯ ಏರ್​ಟೆಲ್​ನ ಪ್ರತಿ ಗ್ರಾಹಕನ ಸರಾಸರಿ ಆದಾಯ (ಎಆರ್​ಪಿಯು) 157 ರೂ. ಆಗಿದೆ. ಕಳೆದ ಜನವರಿಯಲ್ಲಿ ಇದು 154 ರೂ. ಆಗಿತ್ತು.

    ಇದನ್ನೂ ಓದಿ; ಸುಶಾಂತ್​ ಸಿಂಗ್​ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್​; ಸಿಡಿದೆದ್ದ ಬಿಹಾರ ಸಚಿವ 

    ಈ ನಡುವೆ ಸರ್ಕಾರಕ್ಕೆ ಪಾವತಿಸಿರುವ ನಿವ್ವಳ ಆದಾಯ ಹೊಂದಾಣಿಕೆಯ ಪಾಲನ್ನು (ಎಜಿಆರ್​) ಪೂರ್ಣ ಪ್ರಮಾಣದ ಹಾಗೂ ಅಂತಿಮ ಎಂದು ಪರಿಗಣಿಸಬೇಕು ಎಂದು ಸಿಎಫ್​ಒ ಬಾದಲ್​ ಬಗ್ರಿ ಅಭಿಪ್ರಾಯವಾಗಿದೆ. ದೂರಸಂಪರ್ಕ ಇಲಾಖೆ ಪ್ರಕಾರ ಏರ್​ಟೆಲ್​ ಸರ್ಕಾರಕ್ಕೆ ಪಾವತಿಸಬೇಕಿರುವ ಎಜಿಆರ್​ ಮೊತ್ತ 43,780 ಕೋಟಿ ರೂ. ಆಗಿದೆ. ಈಗಾಗಲೇ 18,000 ಕೋಟಿ ರೂ.ಗಳನ್ನು ಪಾವತಿಸಿದೆ.
    ವಿವಿಧ ಕಂಪನಿಗಳು ಪಾವತಿಸಬೇಕಿರುವ ಎಜಿಆರ್​ ಮೊತ್ತಕ್ಕೆ 15 ವರ್ಷಗಳ ಕಾಲಾವಕಾಶ ಒದಗಿಸಬೇಕೆಂಬ ಕೂಗು ಕೂಡ ಕೇಳಿ ಬಂದಿದೆ.

    65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts