More

    ಕಾಮ್ಯಕಾ ವನದಲ್ಲಿ ಭಾರತೀತೀರ್ಥ ಗೋಶಾಲೆ ಲೋಕಾರ್ಪಣೆ

    ಶಿವಮೊಗ್ಗ: ತಾಲೂಕಿನ ರಾಮೇನಕೊಪ್ಪದ ಕಾಮ್ಯಕಾವನದಲ್ಲಿ ಭಾನುವಾರ ಬೆಳಗ್ಗೆ ದೀಪಾವಳಿ ಗೋಪೂಜೆಯಂದು ಭಾರತೀತೀರ್ಥ ಗೋಶಾಲೆ ಲೋಕಾರ್ಪಣೆಗೊಂಡಿತು.

    ಬೆಂಗಳೂರಿನ ಆರಾಧನಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಗೋಶಾಲೆಯು 6 ಎಕರೆ ವಿಸ್ತೀರ್ಣ ಹೊಂದಿದ್ದು, ಶ್ರೀ ತೀರ್ಥ ಗೋಶಾಲೆಗೆ ಖ್ಯಾತ ಜ್ಯೋತಿಷಿ, ಗೋಶಾಲೆ ಸಂಸ್ಥಾಪಕರೂ ಆದ ಕಮಲಾಕರ್ ಭಟ್ ಗೋವುಗಳಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಕಮಲಾಕರ್ ಭಟ್, ಕಾಮ್ಯಕಾವನ ಆಶ್ರಮ ಶ್ರೀ ಕ್ಷೇತ್ರ ಹಾಗೂ ಆರಾಧನಾ ಸೇವಾ ಟ್ರಸ್ಟ್ ಆಶ್ರಯದಲ್ಲಿ 100 ಕೋಟಿ ರೂ. ವೆಚ್ಚದ ದೇವಸ್ಥಾನ ನಿರ್ವಿುಸುವ ಉದ್ದೇಶ ಹೊಂದಿದ್ದೇವೆ. ಗೋಶಾಲೆಯಲ್ಲಿ ಪ್ರಸ್ತುತ ಏಳು ಜಾನುವಾರುಗಳಿದ್ದು, ಮುಂದಿನ ದಿನಗಳಲ್ಲಿ ಇದೊಂದು ದಿವ್ಯಸ್ಥಾನವಾಗಲಿದೆ ಎಂದರು.

    ಪ್ರತ್ಯಂಗೀರ ದೇವಿಯ ದೇವಸ್ಥಾನ ಹಾಗೂ ಸ್ವರ್ಣಗರ್ಭ ಮಹಾಗಣಪತಿ ದೇವಸ್ಥಾನ ನಿರ್ವಿುಸಲಾಗುವುದು. ಸ್ವರ್ಣ ಗರ್ಭ ಮಹಾಗಣಪತಿ ದೇವಸ್ಥಾನವನ್ನು 30 ಅಡಿ ಆಳದಲ್ಲಿ ನಿರ್ವಿುಸಲಾಗುತ್ತಿದೆ. ಜನವರಿಯಿಂದ ದೇವಸ್ಥಾನದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶೃಂಗೇರಿಯ ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿದುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಶ್ರೀಮಠದ ಆಡಳಿತಾಧಿಕಾರಿ, ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರೀಶಂಕರ್ ಸಹಕಾರದಿಂದ ಗೋಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

    ನಾಗಾಲ್ಯಾಂಡ್ ಬಿಜೆಪಿ ಪ್ರಮುಖ ನರೇಶ್ ಗೌತಮ್ ಶರ್ಮ ಹಾಗೂ ಅಮೃತ್ ನೋನಿ ಸಂಸ್ಥಾಪಕ ಶ್ರೀನಿವಾಸಮೂರ್ತಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts