More

    ಸಂಸ್ಕಾರ ಕಲಿಸುವ ಕಲೆ ಭರತನಾಟ್ಯ

    ಸವಣೂರ: ಭಾರತೀಯ ಪ್ರಾಚೀನ ನೃತ್ಯ ಪ್ರಕಾರಗಳಲ್ಲೊಂದಾದ ಭರತ ನಾಟ್ಯ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಮಕ್ಕಳಿಗೆ ಶುದ್ಧತೆಯ ಸಂಸ್ಕಾರ ಕಲಿಸುವ ಕಲೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.

    ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಸುಜನಿ ನಾಟ್ಯ ಶಾಲೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ನೃತ್ಯಾರಾಧನೆ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತ ನಾಟ್ಯದಂತಹ ಕಲೆ ಉಳಿಸಿ ಬೆಳೆಸಲು ಪಾಲಕರು ತಮ್ಮ ಮಕ್ಕಳನ್ನು ನಾಟ್ಯಶಾಲೆಗೆ ಸೇರಿಸಲು ಮುಂದಾಗಬೇಕು ಎಂದರು.

    ಜೆಸಿಐ ನಮ್ಮ ಸವಣೂರು ಅಧ್ಯಕ್ಷ ಬಸವರಾಜ ಚಳ್ಳಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯವರ್ಧನೆಗೆ ಕಲೆಯೇ ಆಧಾರವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶೀಯ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ಪರಿಚಯಿಸಲು ಮುಂದಾಗಬೇಕು ಎಂದರು.

    ಡಾ. ಮಂಜುನಾಥ ಯತ್ನಳ್ಳಿ ಮಾತನಾಡಿದರು. ಅಡವಿಸ್ವಾಮಿ ಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು ವಿದುಷಿ ಸುನೀತಾ ಜಗನ್ನಾಥ ಅವರನ್ನು ಸನ್ಮಾನಿಸಿದರು. ನೃತ್ಯ ಕಾರ್ಯಕ್ರಮದಲ್ಲಿ ನಟುವಾಂಗ ವಿದುಷಿ ಸುನೀತಾ ಜಗನ್ನಾಥ, ಹಾಡುಗಾರಿಕೆ ವಿದುಷಿ ನವಮಿ ಮಹಾವೀರ, ಮೃದಂಗ ವಿದ್ವಾನ್ ಪಂಚಮ್ ಉಪಾಧ್ಯಾಯ, ವಯೋಲಿನ್ ವಿದ್ವಾನ್ ಶಂಕರ ಕಬಾಡಿ ಹಿಮ್ಮೇಳ ಸಹಕಾರ ನೀಡಿದರು.

    ಕನ್ನಡ ಉಪನ್ಯಾಸಕ ಎಸ್.ಎಸ್. ಪಾಣಿಗಟ್ಟಿ ಹಾಗೂ ಇತರರಿದ್ದರು. ಡಾ. ಸವಿತಾ ಮುರಡಿ ಹಾಗೂ ಜಗನ್ನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ನಂತರ, ಸುಜನಿ ಭರತನಾಟ್ಯ ಶಾಲೆಯ ಮಕ್ಕಳಿಂದ ನಾಟ್ಯ ಪ್ರದರ್ಶನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts