More

  ಹೆಲ್ಮೆಟ್​ ಧರಿಸಿ ಬಸ್​ ಏರಿ ಬಂದ ಡ್ರೈವರ್​: ಚಾಲಕನ ಚಾಲಾಕಿತನಕ್ಕೆ ನೆಟ್ಟಿಗರ ಮೆಚ್ಚುಗೆ!

  ಕೋಲ್ಕತ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲವು ನಿಯಮಗಳು ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿ ದೇಶದ ವಿವಿಧ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಮುಂಜಾಗ್ರತ ಕ್ರಮವಾಗಿ ದೇಶದೆಲ್ಲೆಡೆ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

  ದೇಶದ ಹಲೆವೆಡೆ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸುತ್ತಿದ್ದು, ಇದರ ನಡುವೆ ಪಶ್ಚಿಮ ಬಂಗಾಳದಲ್ಲಿ ಕಂಡುಬಂದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.

  ಉತ್ತರ ಬಂಗಾಳದ ರಾಜ್ಯ ಸಾರಿಗೆ ಸಂಸ್ಥೆಯ ಬಸ್​ ಚಾಲಕರೊಬ್ಬರು ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್​ ಧರಿಸಿ ಬಸ್​ ಚಾಲನೆ ಮಾಡಿದ್ದು, ಗಮನ ಸೆಳೆದಿದೆ. ಪ್ರತಿಭಟನೆ ಉಗ್ರ ರೂಪಕ್ಕೆ ತಿರುಗಬಹುದು ಎಂಬ ಎಚ್ಚರಿಕೆಯಿಂದ ಆತ್ಮರಕ್ಷಣೆಗಾಗಿ ಹೆಲ್ಮೆಟ್​ ಧರಿಸಿ ಬಂದಿದ್ದಾರೆ.

  ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಚಾಲಕನೇನೂ ಹೆಲ್ಮೆಟ್​ ಧರಿಸಿದ್ದಾರೆ. ಪ್ರಯಾಣಿಕರ ಕತೆಯೇನು ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಹಾಗೇಯೇ ಚಾಲಕನ ಬುದ್ಧಿವಂತಿಕೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts