More

    ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ

    ಭರಮಸಾಗರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.90ರಷ್ಟು ಮತದಾನವಾಯಿತು.

    ಭರಮಸಾಗರ, ಗೊಲ್ಲರಹಟ್ಟಿ, ಕೋಡಿರಂಗವ್ವನಹಳ್ಳಿ, ವಡ್ಡರಹಟ್ಟಿ, ಹಂಪನೂರು, ಎಮ್ಮೇಹಟ್ಟಿ, ಬೇವಿನಹಳ್ಳಿ, ಹರಳಕಟ್ಟೆ, ಇಸಾಮುದ್ರ, ಇಸಾಮುದ್ರ ಗೊಲ್ಲರಹಟ್ಟಿ, ಹೊಸಹಟ್ಟಿ, ಪಾಮರಹಳ್ಳಿ, ಸುಲ್ತಾನಿಪುರ ಸೇರಿ 13 ಗ್ರಾಮಗಳ ಒಟ್ಟು 965 ಮತದಾರರು ಹಕ್ಕು ಚಲಾಯಿಸಿದರು.

    ಸಾಲಗಾರರ ವಿಭಾಗಕ್ಕೆ 12, ಸಾಲಗಾರರಲ್ಲದ ವಿಭಾಗಕ್ಕೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸಂಘದ ಕಟ್ಟಡದಲ್ಲಿ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

    ಪಿಎಸ್‌ಐ ರಾಜು ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಚುನಾವಣಾಧಿಕಾರಿಯಾಗಿ ಆಸೀಫ್ ಉಲ್ಲಾ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts