More

    ವಿದ್ಯೆ ಯಾರೂ ಕದಿಯದ ಸ್ವತ್ತು

    ಭರಮಸಾಗರ: ವಿದ್ಯೆ ಸಾಧಕನ ಸೊತ್ತು. ಇದನ್ನು ಯಾರೂ ಕಳವು ಮಾಡಲು ಸಾಧ್ಯವಿಲ್ಲ. ಇದು ದೇವರು ನಮಗೆ ಕೊಟ್ಟಿರುವ ವರ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

    ಪಟ್ಟಣದ ಡಿವಿಎಸ್ ಶಾಲಾ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪಿಯುಸಿಯ ರ‌್ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ಪ್ರತಿಯೊಬ್ಬರೂ ಜೀವನದಲ್ಲಿ ಕೀಳರಿಮೆ ಬಿಟ್ಟು ಚತುರತೆ ತೋರಬೇಕು. ಆಗ ಸಾಧನೆ ಮಾಡಲು ನೂರಾರು ದಾರಿಗಳು ತೋರುತ್ತವೆ. ಈ ಮೂಲಕ ಪರಮಾತ್ಮನನ್ನು ಕಾಣಬಹುದು ಎಂದು ಹೇಳಿದರು.

    ಎಲ್ಲರಲ್ಲೂ ಒಂದಿಲ್ಲೊಂದು ವಿಶಿಷ್ಟತೆ ಇರುತ್ತದೆ. ಅದನ್ನು ಒಂದು ಅಸ್ತ್ರವನ್ನಾಗಿಸಿಕೊಂಡು ಸಾಧಿಸಬೇಕು. ಕೆಲವು ಕಲಿತು ಕರಗತವಾದರೆ ಕೆಲವು ಕಲಿಯದೇ ಕರಗತವಾಗುತ್ತವೆ. ಇಂದು ಉತ್ತಮ ವಿದ್ಯಾಸಂಸ್ಥೆಗಳು ಅಂತಹ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿವೆ ಎಂದರು.

    ಪ್ರಾಂಶುಪಾಲ ಉದಯ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಾದ ಕೆ.ಜಿ. ಚೈತ್ರಾ, ಶೋಭಾ, ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕೆ.ಎಂ.ಶರತ್, 8ನೇ ಸ್ಥಾನ ಪಡೆದ ಡಿ.ಪಿ.ಪಲ್ಲವಿ ಅವರನ್ನು ಸನ್ಮಾನಿಸಲಾಯಿತು.

    ಸಂಸ್ಥೆ ಕಾರ್ಯದರ್ಶಿ ಪ್ರವೀಣ್ ಕುಮಾರ್, ವೀಣಾ ಪ್ರವೀಣ್‌ಕುಮಾರ್, ಅಮೃತವರ್ಷಿಣಿ, ಪ್ರದೀಪ್‌ಕುಮಾರ್, ಮುಖ್ಯಶಿಕ್ಷಕ ಕೆ.ಜಿ.ಗುರುಸಿದ್ದೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts