More

    ಭರಮಪ್ಪ ಅಧ್ಯಕ್ಷ, ಮಹಾದೇವಿ ಉಪಾಧ್ಯಕ್ಷೆ

    ಬೈಲಹೊಂಗಲ: ಬೈಲಹೊಂಗಲ, ಕಿತ್ತೂರ ತಾಲೂಕುಗಳಲ್ಲಿ ಕುತೂಹಲ ಮೂಡಿಸಿದ್ದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಭರಮಪ್ಪ ಸತ್ಯೆನ್ನವರ, ಉಪಾಧ್ಯಕ್ಷೆಯಾಗಿ ಮಹಾದೇವಿ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಡಾ.ಡಿ.ಎಚ್. ಹೂಗಾರ ಘೋಷಿಸಿದರು.
    2ನೇ ಅವಧಿಗೆ ಆಯ್ಕೆಯಾಗಿದ್ದ ಭರಮಪ್ಪ ಸತ್ಯೆನ್ನವರ ಮರು ಆಯ್ಕೆ ಬಯಸಿ ಸ್ಪರ್ಧೆಗೆ ಇಳಿದು, ಬಿಜೆಪಿ ಬೆಂಬಲದಿಂದ ಆಯ್ಕೆಯಾದ 6 ಸದಸ್ಯರೊಂದಿಗೆ ಕಳೆದ ನಾಲ್ಕೈದು ದಿನಗಳಿಂದ ಗೌಪ್ಯ ಸ್ಥಳದಲ್ಲಿ ಇರಿಸಿ, ಬಿಜೆಪಿ ಮುಖಂಡರಿಗೆ ಮಜುಗುರ ಮೂಡಿಸಿದ್ದರು. ಅಲ್ಲದೆ ಬಿಜೆಪಿಯ ನೀಲಪ್ಪ ನೇಗಿನಹಾಳ, ರಾಮನಗೌಡ ಪಾಟೀಲ ಕೂಡಾ ನಾಮಪತ್ರ ಸಲ್ಲಿಸಿದ್ದರು. ರಾಮನಗೌಡ ಪಾಟೀಲ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಭರಮಪ್ಪ ಸತ್ಯೆನ್ನವರ, ನೀಲಪ್ಪ ನೇಗಿನಹಾಳ ಜತೆ ನೇರ ಸ್ಪರ್ಧೆ ಏರ್ಪಟ್ಟು ಚುನಾವಣೆ ಜರುಗಿದಾಗ ಭರಮಪ್ಪ ಸತ್ಯೆನ್ನವರ 9 ಮತ, ನೀಲಪ್ಪ ನೇಗಿನಹಾಳರಿಗೆ 8 ಮತ ಲಭಿಸಿದವು. ಭರಮಣ್ಣ ಸತ್ಯೆನ್ನವರ ಅಧ್ಯಕ್ಷರಾಗಿ ಆಯ್ಕೆಯಾದರು.

    ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಗಡೆನ್ನವರ, ಮಹಾದೇವಿ ಪಾಟೀಲ ನಡುವೆ ಸ್ಪರ್ಧೆ ನಡೆದು ಮಹಾದೇವಿ ಪಾಟೀಲ 9 ಮತ ಪಡೆದು ಜಯಶಾಲಿಯಾದರು. ಎಪಿಎಂಸಿ ಒಟ್ಟು 17 ಸದಸ್ಯರಿಂದ ಗುಪ್ತ ಮತದಾನ ನಡೆಯಿತು. ಒಟ್ಟು ಸದಸ್ಯರಲ್ಲಿ 11 ರೈತ ಪ್ರತಿನಿಧಿಗಳು, 3 ಸರ್ಕಾರದ ನಾಮ ನಿರ್ದೇಶಿತರು, 1 ಟಿಎಪಿಎಂಸಿ, 1 ವರ್ತಕರ ಪ್ರತಿನಿಧಿ, 1 ಸೋಮೇಶ್ವರ ಸಹಕಾರಿ ಸಂಸ್ಕರಣ ಘಟಕದಿಂದ ನಿರ್ದೇಶಕರಾಗಿದ್ದರು. ಮುಖಂಡರಾದ ಬಾಬಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಬೋಳಣ್ಣವರ, ಜಿ.ಪಂ. ಸದಸ್ಯ ನಿಂಗಪ್ಪ ಅರಕೇರಿ, ಪಾಂಡಪ್ಪ ಇಂಚಲ, ಉಳವಪ್ಪ ಬಡ್ಡಿಮನಿ, ಚನಗೌಡ ಪಾಟೀಲ, ಶಿವಾನಂದ ಕೋಲಕಾರ, ಶಿವಾನಂದ ಬೆಳಗಾವಿ, ಚಂದ್ರಗೌಡ ಪಾಟೀಲ, ನ್ಯಾಯವಾದಿ ಜೆ.ಸಿ. ಹಿರೇಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts