More

    ಶಕ್ತಿ ಇಲ್ಲದ ಭಕ್ತಿ ನಿರುಪಯೋಗಿ, ಅಪಾಯಕಾರಿ

    ಚಿಕ್ಕಮಗಳೂರು: ಶಕ್ತಿ ಇಲ್ಲದ ಭಕ್ತಿ ನಿರುಪಯೋಗಿ. ಹಾಗೇ ಭಕ್ತಿ ಇಲ್ಲದ ಶಕ್ತಿಯೂ ಅಪಾಯಕಾರಿ. ಈ ಎರಡೂ ಪಕ್ಷ ಸಂಘಟನೆಗೆ ಪೂರಕವಲ್ಲ. ಪಕ್ಷ ನಿಷ್ಠೆಯಿದ್ದು ಆತನ ಮನೆಯವರೇ ಅವನ ಮಾತು ಕೇಳದಿದ್ದರೆ ಅಂಥವರಿಂದ ಪಕ್ಷ ಸಂಘಟನೆ ಸಾಧ್ಯವಿಲ್ಲ. ಹಾಗೆಯೇ ಎಲ್ಲ ರೀತಿಯ ಸಂಘಟನಾ ಶಕ್ತಿಯಿದ್ದು, ಏಕ ವ್ಯಕ್ತಿಯಲ್ಲಿ ಮಾತ್ರ ಭಕ್ತಿಯಿದ್ದರೆ ಅದು ಪಕ್ಷಕ್ಕೆ ಅಪಾಯಕಾರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಶಕ್ತಿ, ಭಕ್ತಿ ಎರಡೂ ಬೇಕು. ನಮಗೆ ಉತ್ತಮ ನಾಯಕತ್ವ ಬೇಕು. ಆದರೆ ಆ ನಾಯಕತ್ವ ಪಕ್ಷದ ಚೌಕಟ್ಟು ಮೀರ ಬಾರದು ಎಂದು ಹೇಳಿದರು.
    ಸಂಘಟನೆ ಮಾಡುವಾಗ ಜನರ ದೈನಂದಿನ ಬದುಕಿನೊಂದಿಗೆ ಬೇರೆಯುವ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಮೂಲಕ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಪಕ್ಷವನ್ನು ಗಟ್ಟಿಗೊಳಿಸಬೇಕು. ಸಂಘಟನೆ ಮಾಡುವಾಗ ಸವಾಲುಗಳು ಸಹಜ. ಈ ಸವಾಲುಗಳು ನಮಗೆ ಹೊಸದಲ್ಲ. ಆದರೆ ಹಿಂದೆ ಇದ್ದಷ್ಟು ಸವಾಲುಗಳು ಈಗಿಲ್ಲ. ಹೀಗೆಂದ ಮಾತ್ರಕ್ಕೆ ಕಾರ್ಯಕರ್ತರು ಮೈ ಮರೆಯ ಬಾರದು ಎಂದು ತಿಳಿಸಿದರು.
    ನಮ್ಮ ಚಟುವಟಿಕೆಗಳು ಕೇವಲ ಸಭೆ ನಡೆಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಜನರ ನಡುವೆ ನಾವು ಸದಾ ಚಟುವಟಿಕೆಯಿಂದ ಇರಬೇಕು. ಜನ ಸಮಸ್ಯೆಗಳನ್ನು ಇಟ್ಟುಕೊಂಡು ನಮ್ಮ ಬಳಿ ಬರುತ್ತಿಲ್ಲ ಎಂದಾದಲ್ಲಿ ನಾವು ಜನರ ನಡುವೆ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರ್ಥ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts