More

    ಕಂದಹಳ್ಳಿ ಮಹದೇಶ್ವರ ದೇಗುಲಕ್ಕೆ ಭಕ್ತ ಸಾಗರ

    ಚಾಮರಾಜನಗರ: ಯಳಂದೂರು ತಾಲೂಕಿನ ಸುವರ್ಣಾವತಿ ನದಿ ದಡದಲ್ಲಿರುವ ಕಂದಹಳ್ಳಿ ಮಹದೇಶ್ವರ ದೇಗುಲಕ್ಕೆ ಶಿವರಾತ್ರಿ ನಂತರದ ಅಮಾವಾಸ್ಯೆ ದಿನವಾದ ಭಾನುವಾರ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆದರು.


    ಮಹದೇಶ್ವರರು ಉತ್ತರದಿಂದ ಕತ್ತಲರಾಜ್ಯಕ್ಕೆ ತೆರಳುತ್ತಿದ್ದ ವೇಳೆ ಯಳಂದೂರಿನಲ್ಲಿರುವ ಕಾರಾಪುರ ವಿರಕ್ತಮಠಕ್ಕೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದರು. ನಂತರ ಸಮೀಪದಲ್ಲೇ ಇರುವ ಸುವರ್ಣಾವತಿ ನದಿ ದಡದಲ್ಲಿ ಧ್ಯಾನ ಮಾಡಿ ಇಲ್ಲಿದ್ದ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಿದ್ದರು ಎಂಬ ನಂಬಿಕೆ ಇದೆ. ಇದಕ್ಕೆ ಸಾಕಷ್ಟು ಸಾಕ್ಷಿಗಳು ಇಲ್ಲಿವೆ. ಹಾಗಾಗಿ, ಇಲ್ಲಿ ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ಪ್ರತಿ ವರ್ಷದ ಭೀಮನ ಅಮವಾಸ್ಯೆಯಂದು ಇಲ್ಲಿ ಭಕ್ತರ ದಂಡು ನರೆಯುತ್ತದೆ.


    ಪ್ರತಿ ಅಮವಾಸ್ಯೆಯಂದು ಇಲ್ಲಿಗೆ ಬರುವ ಭಕ್ತರಿಗೆ ದೇಗುಲದ ಮುಂಭಾಗದಲ್ಲಿರುವ ನೂರಾರು ವರ್ಷಗಳ ಪುರಾತನ ಬೀಳಲು ಬಿಟ್ಟಿರುವ ಮರಗಳ ಕೆಳಗೆ ಪ್ರಸಾದ ವ್ಯವಸ್ಥೆ ಮಾಡುವ ಪರಿಪಾಠವಿದೆ.


    ಅಮವಾಸ್ಯೆ ನಿಮಿತ್ತ ದೇಗುಲವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ರುದ್ರಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ಪೂರೈಸಿ ಬೆಳ್ಳಿ ಕೊಳಗ ಧಾರಣೆ ಮಾಡಿ ವಿಶೇಷ ಹೂವುಗಳಿಂದ ಅಲಂಕಾರ ಮಾಡಿ ದೇವರನ್ನು ಪೂಜಿಸಲಾಯಿತು. ನಂತರ ದೇಗುಲದ ಆವರಣದಲ್ಲಿ ಹರಕೆ ಹೊತ್ತ ಭಕ್ತರು ದಂಡುಗೋಲು ಸೇವೆಯನ್ನು ಮಾಡಿಸಿ ರಥವನ್ನು ಎಳೆಯುವ ಮೂಲಕ ಭಕ್ತಿ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts