More

  ಭಕ್ತರ ಒಪ್ಪಿಗೆ ಮೇರೆಗೆ ಮಠ ನಿರ್ಮಾಣ

  ಕೂಡ್ಲಿಗಿ: ಪಟ್ಟಣದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣ ಮಾಡುವುದರಿಂದ ಭಕ್ತರಿಗೆ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಹುಬ್ಬಳ್ಳಿಯ ಭವಾನಿ ನಗರದ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ಜೋಯಿಸ್ ವೇಣುಗೋಪಾಲ ಹೇಳಿದರು.

  ಇದನ್ನೂ ಓದಿ:ಶಿವರಾತ್ರಿ ಅಂಗವಾಗಿ ವಿರಕ್ತಮಠದಲ್ಲಿ ಲಿಂಗಧಾರಣೆ

  ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಭಕ್ತರ ಅಪೇಕ್ಷೆಯಂತೆ ರಾಯರ ಮಠ ನಿರ್ಮಾಣಕ್ಕೆ ಸಂಬಂಧಿಸಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಶನಿವಾರ ಮಾತನಾಡಿದರು. ಸುಮಾರು ವರ್ಷಗಳಿಂದ ಹಿಂದೆಯೇ ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣವಾಗಬೇಕಿತ್ತು.

  ಆದರೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಹಾಗೂ ಭಕ್ತರು ರಾಯರ ಮಠ ನಿರ್ಮಾಣಕ್ಕೆ ಆಸಕ್ತಿ ತೋರಿಸಿರುವುದು ಸಂತಸದ ವಿಚಾರ. ಮಠ ನಿರ್ಮಾಣಕ್ಕೆ ಯಾವುದೇ ಜಾತಿ, ಭೇದವಿಲ್ಲ. ಸರ್ವರ ವಿಶ್ವಾಸ ಪಡೆದು ರಾಘವೇಂದ್ರ ಮಠ ನಿರ್ಮಾಣ ಮಾಡಿದರೆ ಅನುಕೂಲ ಎಂದರು.

  ರಾಘವೇಂದ್ರ ಸ್ವಾಮಿಗಳು ಯಾವುದೇ ಜಾತಿಗೆ ಸೀಮಿತರಾಗದೆ ಸರ್ವರೂ ಏಳಿಗೆ ಬಯಸಿದರವರು. ಭಕ್ತರ ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ತೋರಿಸಿದವರು. ಎಲ್ಲರ ಹೃದಯದಲ್ಲೂ ಗುರುಗಳು ನೆಲೆಸಿದ್ದಾರೆ. ಮಠ ನಿರ್ಮಾಣಕ್ಕೆ ಮೊದಲು ಜಾಗ ಗುರುತಿಸುವ ಕಾರ್ಯವಾಗಬೇಕು. ಅದಕ್ಕೆ ಪಟ್ಟಣದ ಭಕ್ತರ ಸಭೆ ಕರೆದು ಚರ್ಚಿಸಿ, ಒಮ್ಮತದ ನಿರ್ಧಾರಕ್ಕೆ ಬಂದು ಜನರೇ ನಿಶ್ಚಯ ಮಾಡಿದ ಜಾಗದಲ್ಲಿ ರಾಯರ ಮಠ ನಿರ್ಮಾಣ ಮಾಡಲಾಗುವುದು ಎಂದರು.

  ಪ್ರಮುಖರಾದ ಜೋಯಿಸ್ ಹುಲಿರಾಜ್, ಜೋಯಿಸ್ ಮಧುಸೂದನ್ ಆಚಾರ್, ಮಾರುತಿ ರಾಯ್ಕರ್, ಕೆ.ಸೋಮಶೇಖರ ಗೌಡ, ಬಿ.ಶ್ರೀಕಾಂತ್, ಪಿ.ಉಮೇಶ್, ವಿವೇಕಾನಂದ, ಜಿ.ಪಿ.ರಂಗನಾಥ, ಬ್ಯಾಟರಿ ರಾಘವೇಂದ್ರ, ಅಶೋಕ್ ಬಾಬುರಾವ್, ಗಂಟಿ ಶ್ರೀನಿವಾಸ್, ವಿನೋದ ಕಲಾಲ್, ರಮೇಶ್, ಪ್ರಕಾಶ್, ವೀರೇಶ್ ಅಂಗಡಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts