More

    ಕಳಚಲಿದೆ ಅಣ್ಣ-ತಮ್ಮಂದಿರ ಕಿರೀಟ : ಜೆಡಿಎಸ್ ಅಭ್ಯರ್ಥಿ ಸಿವಿಸಿ

    ಕೊಪ್ಪಳ: ಅಣ್ಣ-ತಮ್ಮಂದಿರಿಗೆ ಎರಡು ಕಿರೀಟಗಳಿವೆ. ನಮ್ಮಂತಹ ಜನ ಸಾಮಾನ್ಯರು ಅವರ ಕಣ್ಣಿಗೆ ಕಾಣುವುದಿಲ್ಲ. ಮೇ 13ರಂದು ಅವರ ಕಿರೀಟ ಕಳಚಲಿದೆ. ಆಗ ಜನರ ತಾಕತ್ತು ಏನೆಂಬುದು ಅವರಿಗೆ ತಿಳಿಯುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಹೇಳಿದರು.

    ಭಾಗ್ಯನಗರ ಪಟ್ಟಣದಲ್ಲಿ ಭಾನುವಾರ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದರು. ಭಾಗ್ಯನಗರದ ಜನ ಸ್ವಾಭಿಮಾನ, ಒಗ್ಗಟ್ಟಿಗೆ ಹೆಸರಾದವರು. ಯಾವ ಜಾತಿ, ಧರ್ಮ ಹಾಗೂ ಪಕ್ಷದ ಹಂಗಿಲ್ಲ. ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ನನ್ನನ್ನು ಬೆಂಬಲಿಸುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.

    ಭಾಗ್ಯನಗರಕ್ಕೆ ಶುದ್ಧ ಕುಡಿವ ನೀರು ಸರಬರಾಜು ಇಲ್ಲ

    ಜೆೆಡಿಎಸ್ ಜಿಲ್ಲಾ ವಕ್ತಾರ ಮೌನೇಶ ಕರಾಟೆ ಮಾತನಾಡಿ, 30 ವರ್ಷ ಅಧಿಕಾರದಲ್ಲಿದ್ದರೂ ಬಿಜೆಪಿ-ಕಾಂಗ್ರೆಸ್ ಭಾಗ್ಯನಗರಕ್ಕೆ ಶುದ್ಧ ಕುಡಿವ ನೀರು ಸಬರಾಜು ಮಾಡಲು ವಿಫಲವಾಗಿವೆ. ನೀವು ನೀಡುವ ಒಂದೊಂದು ಮತ ಕೊಪ್ಪಳದಲ್ಲಿ ಸಿವಿಸಿ, ರಾಜ್ಯದಲ್ಲಿ ಎಚ್‌ಡಿಕೆಗೆ ಬಲ ನೀಡಲಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪಂಚರತ್ನ ಯೋಜನೆ ಜಾರಿಗೊಳಿಸಲಾಗುವುದು ಎಂದರು.

    ಇದನ್ನೂ ಓದಿ: ಬಿಜೆಪಿ ವಿರುದ್ಧ ವೀರಶೈವ-ಲಿಂಗಾಯತರನ್ನು ಎತ್ತಿ ಕಟ್ಟುವ ಯತ್ನ ನಡೆಯುತ್ತಿದೆ: ಬಿಎಸ್​ವೈ

    ಅಪಪ್ರಚಾರ ಕೈಬಿಡಿ

    ಕಾಂಗ್ರೆಸ್-ಬಿಜೆಪಿ ನಾಯಕರು ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ. ಹೀಗಾಗಿ ನಮ್ಮ ಪರ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಮುಖಂಡ ಸಾದಿಕ್ ಅತ್ತಾರ್ ಕಿಡಿ ಕಾರಿದರು. ಸಿವಿಸಿ ಪರ ಮತ ಯಾಚಿಸಿ ಮಾತನಾಡಿ, ಸೋಲಿನ ಹತಾಶೆಯಿಂದ ಸಿವಿಸಿ ಗೆದ್ದರೆ ಮತ್ತೆ ಬಿಜೆಪಿಗೆ ಹೋಗುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts