More

    ಭಗವದ್ಗೀತೆ, ಕರ್ಮಯೋಗದ ಮಹತ್ವ ಹೇಳಿಕೊಡುತ್ತಿದ್ದಾರೆ ಅಮೆರಿಕ ಸಂಸದೆ

    ವಾಷಿಂಗ್ಟನ್: ಈಗ ಎಲ್ಲೆಲ್ಲೂ ಕರೊನಾ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಭಗವದ್ಗೀತೆ ಪಠಣ ಹಾಗೂ ಕರ್ಮಯೋಗ ಅಭ್ಯಾಸ ಮಾಡಿದರೆ ಶಾಂತಿ, ನೆಮ್ಮದಿ ಹಾಗೂ ಧೈರ್ಯವನ್ನು ಹೊಂದಬಹುದು ಎಂದು ಅಮೆರಿಕದ ಸಂಸದೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

    ಅಮೆರಿದಲ್ಲಿರುವ ಮೊದಲ ಹಿಂದೂ ಮಹಿಳಾ ಸಂಸದೆಯಾಗಿರುವ ತುಳಸಿ, ‘ಕ್ಲಾಸ್ ಆಫ್ 2020 ಫಾರ್ ಹಿಂದೂ ಸ್ಟೂಡೆಂಟ್ಸ್’ ಹೆಸರಿನಲ್ಲಿ ಆಯೋಜಿಸಿದ್ದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಈ ಮಾತನ್ನು ಹೇಳಿದ್ದಾರೆ.

    ಕರೊನಾ ವೈರಸ್​ ಭೀತಿ ಎಲ್ಲೆಡೆ ವಿಪರೀತವಾಗಿದೆ. ಕ್ಷಣ ಕ್ಷಣಕ್ಕೂ ಏನಾಗುವುದೋ ಎಂಬ ಭೀತಿ. ನಾಳೆ ಏನು ನಡೆಯಲಿದೆ ಎಂಬುದನ್ನು ತಿಳಿಯದ ಆಯೋಮಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆಯನ್ನು ಅಭ್ಯಾಸ ಮಾಡಿದರೆ ಶಾಂತಿ ಧೈರ್ಯ ಪಡೆದುಕೊಳ್ಳಬಹುದು ಎಂದರು, ಈ ಸಮಾವೇಶದಲ್ಲಿ ಅಮೆರಿಕದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಇದನ್ನೂ ಓದಿ: ಬಾಲಿವುಡ್ `ಧೋನಿ’ ಸುಶಾಂತ್ ಸಿಂಗ್ ನೆನಪಿನಾಳದಿಂದ…

    ಜೀವನದ ಗುರಿಯನ್ನು ತಲುಪಬೇಕಾದಲ್ಲಿ ಕರ್ಮಯೋಗದ ಅಭ್ಯಾಸ ಅತಿಮುಖ್ಯವಾಗಿ ಬೇಕು. ಜೀವನದಲ್ಲಿ ನಿಮ್ಮಗುರಿ ಏನು ಎಂಬುದನ್ನು ಮೊದಲು ನೀವೇ ಪ್ರಶ್ನಿಸಿಕೊಳ್ಳಿ. ಕರ್ಮ ಯೋಗವನ್ನು ಅಭ್ಯಾಸ ಮಾಡುವ ಮೂಲಕ ದೇವರು ಮತ್ತು ದೇವರ ಮಕ್ಕಳ ಸೇವೆ ಮಾಡುವುದು ನಿಮ್ಮ ಗುರಿ ಎಂದು ನೀವು ಕಂಡುಕೊಂಡರೆ ನೀವು ಯಶಸ್ವಿ ಜೀವನ ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಅವರು ಹೇಳಿದರು.

    ಉತ್ತರ ಅಮೆರಿಕದ ಅತಿದೊಡ್ಡ ಹಿಂದೂ ಯುವ ಸಂಘಟನೆಯಾಗಿರುವ ಹಿಂದೂ ವಿದ್ಯಾರ್ಥಿ ಕೌನ್ಸಿಲ್ ಅನ್ನು 1990ರಲ್ಲಿ ಸ್ಥಾಪಿಸಲಾಗಿದೆ. 29 ವರ್ಷದ ತುಳಸಿ ಗಬ್ಬಾರ್ಡ್ ಅಮೆರಿಕದ ಸಮೋವಾದಲ್ಲಿ ಜನಿಸಿದ್ದು, ಅವರು ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಅಮೆರಿಕ ಸಂಸತ್ತಿಗೆ ಆಯ್ಕೆಯಾದ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಸಂಸತ್ ಪ್ರವೇಶಿಸಿದ ಮೊದಲ ಹಿಂದೂ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಹಿಂದೂ ಧರ್ಮದ ಮೇಲೆ ಅಚಲ ನಂಬಿಕೆಯುಳ್ಳ ತುಳಸಿ ಗಬ್ಬಾರ್ಡ್, ಅಮೆರಿಕದಲ್ಲಿ ಭಾರತೀಯರ ಭಾರಿ ಬೆಂಬಲ ಹೊಂದಿದ್ದಾರೆ.

    ಇವರು ಇದಾಗಲೇ ಅನೇಕ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಮತ್ತು ಕರ್ಮಯೋಗದ ಮಹತ್ವ ಹೇಳಿಕೊಟ್ಟಿದ್ದಾರೆ (ಏಜೆನ್ಸೀಸ್​)

    ಉದುರುವ ಕೂದಲಿಂದ ಮದುವೆಯಾಗದೇ ನೊಂದು ಮೂರು ಮಹಡಿ ಏರಿದ ಕಾನ್ಸ್​ಟೆಬಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts