More

    ಭದ್ರಕಾಳಿ ಬೋಡ್ ನಮ್ಮೆ ಸಂಪನ್ನ

    ವಿರಾಜಪೇಟೆ: ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಪಡ, ಐಂಗಲ ಮತ್ತು ಮಗ್ಗುಲ ಗ್ರಾಮಗಳ ಆರಾಧ್ಯ ದೇವಿಯಾದ ಶ್ರೀ ಭದ್ರಕಾಳಿ ಬೋಡ್ ನಮ್ಮೆ ಮಂಗಳವಾರ ಸಂಪನ್ನಗೊಂಡಿತು.

    ಮೇ 19ರಂದು ರಾತ್ರಿ ಮೂರೂ ಗ್ರಾಮಗಳ ದೇವ ಬನದಿಂದ ದೇವಿಯನ್ನು ಬರಮಾಡಿಕೊಂಡು ಕಳಿ ಹಾಕಲಾಯಿತು. ನಂತರ ವಿವಿಧ ವೇಷಭೂಷಣ ತೊಡಿಸಿ ಪ್ರತಿ ಮನೆಗೆ ಕರೆದೊಯ್ದು ಕಳಿ ಪ್ರದರ್ಶನ ಮಾಡಿಸಲಾಯಿತು. 20ರಂದು ಸಂಜೆ ದೇಗುಲ ಪ್ರವೇಶ ಮಾಡಿದ ವೇಷಧಾರಿಗಳು ದೇಗುಲದ ಮೂರು ಪ್ರದಕ್ಷಿಣೆ ಬಂದು ದೇವಿಗೆ ನಮಸ್ಕರಿಸಿ ಮನೆಗಳಿಗೆ ಹಿಂದಿರುಗಿದರು. ಬಳಿಕ ದೇಗುಲದಲ್ಲಿ ಆರ್ಚಕರಿಂದ ದೇವಿಗೆ ವಿಶೇಷ ಪೂಜೆ, ಅರ್ಚನೆ ನೆರವೇರಿತು.

    22ರಂದು ಮಧ್ಯಾಹ್ನ ಮೂರೂ ಗ್ರಾಮಗಳಿಂದ ತಲ ಎರಡು ಕುದುರೆಗಳಂತೆ ಒಟ್ಟು ಆರು ಕುದುರೆಗಳು ಮಗ್ಗುಲ ಗ್ರಾಮದ ಮಾಚೆಟ್ಟಿ ಪಾರೆ ( ಮಾನಿ) ಯಲ್ಲಿ ಸಮಾಗಮವಾಯಿತು. ಮಾನಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದ ಬಳಿಕ ಕುದುರೆಗಳು ದೇಗುಲಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಹಿಂದಿರುಗಿದವು. 23ರಂದು ಕುಂದಾ ಚೂಳೆ ನಡೆದು ದ್ವಿವಾರ್ಷಿಕ ಬೋಡ್ ನಮ್ಮೆ ಸಂಪನ್ನಗೊಂಡಿತು.

    ಬೋಡ್ ನಮ್ಮೆಯಲ್ಲಿ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ವೇಷಭೂಷಣ, ಹುಲಿ ವೇಷ, ಕೇರಳದ ತಂಬೂರಾಟಿ ಪೆಣ್, ಸಾಂಪ್ರದಾಯಿಕ ಓಲಗ, ಅಣ್ಣ-ತಂಗಿಯ ತಮಟೆ ಜುಗಲ್ ಬಂದಿ, ಸಾಂಪ್ರದಾಯಕ ಉಡುಪು ಗಮನ ಸೆಳೆಯಿತು.

    22 ಠಿ 1. 1.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts