More

    ಕ್ರಿಕೆಟ್​ ಆಡುವಾಗ ಕುಸಿದು ಬಿದ್ದು ಕಿರುತೆರೆ ನಟ ಸಾವು: ನಟನ ಅಗಲಿಕೆಗೆ ತೀವ್ರ ಸಂತಾಪ

    ನವದೆಹಲಿ: ಪ್ರಸಿದ್ಧ ಧಾರಾವಾಹಿಯ ನಟ ದೀಪೇಶ್​ ಭಾನ್​​ ಶನಿವಾರ ಬೆಳಗ್ಗೆ ಮೃತಪಟ್ಟಿದ್ದು, ಈ ಸಾವಿಗೆ ಕಿರುತೆರೆ ಲೋಕ ತೀವ್ರ ದುಃಖ ವ್ಯಕ್ತಪಡಿಸಿದೆ.

    ಹಿಂದಿಯಲ್ಲಿ ಪ್ರಸಾರವಾಗುವ “ಭಾಭಿ ಜಿ ಘರ್​ ಪರ್​ ಹೈ” ಧಾರವಾಹಿಯಲ್ಲಿ ನಟಿಸುತ್ತಿದ್ದ ದೀಪೇಶ್​ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಕೇವಲ 41ನೇ ವಯಸ್ಸಿಗೆ ಅಗಲಿದ ನಟನಿಗಾಗಿ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

    ದೀಪೇಶ್​ ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದರು, ಸಹೃದಯಿ ದೀಪೇಶ್​​ ಇನ್ನಿಲ್ಲ ಎಂದು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಅವರು ಎಂದಿಗೂ ಮದ್ಯಪಾನ, ಧೂಮಪಾನವನ್ನು ಮಾಡಿದವರೇ ಅಲ್ಲ, ಇಷ್ಟು ಸಣ್ಣ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿರುವುದು ತುಂಬಾ ದುಃಖಕರವಾಗಿದೆ ಎಂದು ಅವರ ಸ್ನೇಹಿತರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

    ದೀಪೇಶ್ ಭಾನ್​​ ಅವರು ಪತ್ನಿ ಹಾಗೂ 1 ವರ್ಷದ ಪುತ್ರನನ್ನು ಅಗಲಿದ್ದಾರೆ. ಕಳೆದ ವರ್ಷವಷ್ಟೇ ಅವರ ತಾಯಿ ನಿಧನ ಹೊಂದಿದ್ದರು. ತಾಯಿ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವ ಇಟ್ಟುಕೊಂಡಿದ್ದ ನಟ ದೀಪೇಶ್​ ತಾಯಿಯನ್ನು ನೆನೆದು ಟ್ವೀಟ್​ ಮಾಡುವ ಮೂಲಕ ಸುದ್ದಿಯಾಗಿದ್ದರು. (ಏಜೆನ್ಸೀಸ್​)

    ರಣವೀರ್​ ನಗ್ನಾವತಾರ: ಎಲ್ಲರ ಹುಬ್ಬೇರುವಂತಿದೆ ಪತ್ನಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ!

    ಗುತ್ತಿಗೆದಾರನಿಂದ ತಪ್ಪಿಸಿಕೊಳ್ಳಲು ಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ 7 ಕಾರ್ಮಿಕರು ಪತ್ತೆ: ಉಳಿದವರಿಗಾಗಿ ತೀವ್ರ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts