More

    ಎಲ್ಲ ಪರಿಣಾಮ ಎದುರಿಸಲು ಸಿದ್ದ ಇದ್ದೇನೆ

    ಬಾಗಲಕೋಟೆ: ತಮ್ಮ ವಿರುದ್ದ ತೆರೆಯ ಹಿಂದೆ, ಅಪರೋಕ್ಷವಾಗಿ ಟೀಕೆ, ಟಿಪ್ಪಣಿ ಮಾಡುತ್ತಿರುವ ಸ್ವಪಕ್ಷದ ಕೆಲವರ ವಿರುದ್ದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ನೇರವಾಗಿಯೇ ವಾಗ್ದಾಳಿ ನಡೆಸಿದ್ದಲ್ಲದೇ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಾತನಾಡಿರುವ ಆಡಿಯೋ ವೈರಲ್ ಯಾಕೆ? ನಾನು ಸಾರ್ವಜನಿಕವಾಗಿ ಬಹಿರಂಗವಾಗಿಯೇ ಮಾತನಾಡಿದ್ದೇನಲ್ಲ. ನಾಲ್ಕುಗೋಡೆಗಳ ಮಧ್ಯ, ಬಾಗಿಲು ಹಾಕಿಕೊಂಡು ಮಾತನಾಡುವ ಜಾಯಮಾನ ನನ್ನದಲ್ಲ ಎಂದರು.

    ಇದರಿಂದ ಚುನಾವಣೆಯಲ್ಲಿ ಪರಿಣಾಮ ಆಗುತ್ತಾ ಎನ್ನುವ ಪ್ರಶ್ನೆಗೆ ಆ ಎಲ್ಲ ಪರಿಣಾಮ ಎದುರಿಸಿಯೇ ನಾನು ಬಂದಿದ್ದೇನೆ. ಈಗಲೂ ಸಿದ್ದ ಇದ್ದೇನೆ. ತೋಯಿಸಿಕೊಂಡ ಬಳಿಕ ಮಳೆ ಬಗ್ಗೆ ಅಂಜಿಕೆ ಏನು ಎಂದು ಪ್ರಶ್ನಿಸಿದರು. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಿದ ಮೇಲೆ ಗೆದ್ದಾಗಲು, ಸೋತಾಗಲೂ ಬಿಜೆಪಿಗೆ ಬಂದಿರುವ ಮತಗಳ ಸಂಖ್ಯೆ ಹೆಚ್ಚುತ್ತಲೇ ಬಂದಿದೆ ಎಂದು ೧೯೯೬ರಲ್ಲಿ ಲೋಕಸಭೆ ಸ್ಪರ್ಧೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಬಂದ ಮತಗಳು, ೨೦೦೪, ೨೦೦೮, ೨೦೧೩, ೨೦೧೮ ರ ವಿಧಾನಸಭೆ ಚುನಾವಣೆಗಳಲ್ಲಿ ಬಂದಿರುವ ಮತಗಳ ಸಂಖ್ಯೆಯನ್ನು ಹರವಿದರು. ೨೦೦೪ರಲ್ಲಿ ೩೪ ಸಾವಿರ ಮತಗಳು ಬಿಜೆಪಿಗೆ ಬಂದಿದ್ದು, ೨೦೧೮ರಲ್ಲಿ ಅದು ೮೭ ಸಾವಿರಕ್ಕೆ ಬಂದಿದೆ ಎಂದು ಟಿಕೆಟ್ ಬದಲಾವಣೆ ಕೂಗು ಹಾಕುತ್ತಿರುವವರರಿಗೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದರು.

    ತಮ್ಮನಿಗೂ ಪರೋಕ್ಷ ತರಾಟೆ:
    ಇನ್ನು ತಮ್ಮ ವಿರುದ್ದ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು ಆಗಾಗ ತಮ್ಮ ಹೆಸರು ಹೇಳದೇ ಹುಳು ಎನ್ನುವ ಶಬ್ದ ಬಳಿಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿ ಶಾಸಕ ಚರಂತಿಮಠ, ಯಾರು ಯಾರಿಗೆ ಹುಳ? ಈ ಲೈಟಿಗೆ ಕೆಲ ಹುಳುಗಳ ಏಳ್ತಾವಲ್ಲ? ಅವು ಎಷ್ಟು ದಿನ ಇರ್ತಾವು? ಗಾಳಿ ಬಿಟ್ಟಕೂಡಲೇ ಹೋಗ್ತಾವಲ್ಲ. ಹಂಗೆ ಇವು ಎಂದು ತಿರುಗೇಟು ನೀಡಿದರು. ಯಾರು ಹುಳ ಎಲ್ಲ ಮೇ ಎಲೆಕ್ಷನ್ ಮುಗಿಯಲಿ ಆಗ ಎಲ್ಲರಿಗೂ ಗೊತ್ತಾಗುತ್ತದೆ ಎಂದು ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡಿ, ಅಲ್ಲಿವರೆಗೂ ಮಾತನಾಡೋದು ಬೇಡ ಎಂದರು.

    ೪೩ ವರ್ಷ ಸಾರ್ವಜನಿಕ ಜೀವನ : ನಾನು ಸಾರ್ವಜನಿಕ ಜೀವನಕ್ಕೆ ಬಂದು ೪೩ ವರ್ಷಗಳಾಗಿವೆ. ನನ್ನ ಬಗ್ಗೆ ಯಾರು ಏನೇ ಅಂದರೂ ಅದು ಅವರ ವ್ಯಕ್ತಿತ್ವ ಗೊತ್ತಾಗುತ್ತದೆ. ನನಗೇನು ಆಗಲ್ಲ. ಏನೇನು ಅಂದವರು ಅನೇಕರು ಹೋಗಿದ್ದಾರೆ. ಇನ್ನೂ ಕೆಲವರು ಇನ್ ಕಮಿಂಗ್ ಆಗಿದ್ದಾರೆ. ಮತ್ತೆ ಹಲವರು ಔಟ್ ಗೋಯಿಂಗ ಆಗಿದ್ದಾರೆ ಎಂದ ಅವರು, ತಮ್ಮ ವಿರುದ್ದ ಯಾರು ಪಕ್ಷೇತರ ಅಭ್ಯರ್ಥಿ ಆಗುತ್ತಾರೋ ನನಗೆ ಗೊತ್ತಿಲ್ಲ. ಯಾರು ನಿಲ್ಲುತ್ತಾರೋ ಅವರನ್ನೇ ಕೇಳಿ ಎಂದು ಖಾರವಾಗಿಯೇ ಹೇಳಿದರು.

    ಯತ್ನಾಳ ಈಗ ಬರೊಬ್ಬರಿ ಆಗ್ಯಾರಲ್ಲ ?
    ಎಚ್ಡಿಕೆ ಅವರ ಬ್ರಾಹ್ಮಣ ಸಿಎಂ ಹೇಳಿಕೆಗೆ ಬಿಜೆಪಿಯವರು ಪೈಪೋಟಿಗೆ ಬಿದ್ದವರಂತೆ ಹೇಳಿಕೆ ಕೊಡುತ್ತಿದ್ದಾರೆ. ಅದೇ ಬಿಜೆಪಿ ಮುಖಂಡ ಯತ್ನಾಳ ಬೇರೆ ಸಮಾಜದ ಬಗ್ಗೆ ಅಗೌರವಾಗಿ ಮಾತನಾಡಿದಾಗ ಮೌನ ಏಕಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸಕ ಚರಂತಿಮಠ, ಅವರಿಗೂ ಹೇಳಿದೆ. ಮಾತನಾಡಬಾರದು ಎಂದು ಮೇಲಿನವರು ಕರೆದು ಹೇಳಿದ್ದಾರೆ. ಇತ್ತೀಚಿಗಂತೂ ಏನೇನು ಇಲ್ವಲ್ಲ ಎಂದು ನಕ್ಕರು.

    ನಾನು ಸಹ ಯತ್ನಾಳ ಅವರಿಗೆ ಹೇಳಿದ್ದೇನೆ. ಹಾಗೆಯೇ ಮೊನ್ನೆ ಯತ್ನಾಳ ಅವರು ಯಡಿಯೂರಪ್ಪ ನಮ್ಮ ಹಿರಿಯರು ಎಂದು ಹೇಳಿದ್ದಾರಲ್ಲ. ಹೀಗ ಹಾಗೆನೂ ಮಾತನಾಡಿಲ್ಲ ಎಂದರು.

    ಇನ್ನು ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡುವ ರಾಹುಲ್ ಗಾಂಧಿ ಅವರ ವಿರುದ್ದ ವಾಗ್ದಾಳಿ ನಡೆಸಿದರು. ಆಕಾಶಕ್ಕೆ ಉಗುಳಿದರೆ ಅದು ನಮ್ಮ ಮೇಲೆಯೇ ಬೀಳುತ್ತದೆ. ಕೀಳು ಭಾಷೆ ಪ್ರಯೋಗ ಮಾಡಿದರೆ ತಮ್ಮದೇ ವ್ಯಕ್ತಿತ್ವ ಕಡಿಮೆ ಆಗುತ್ತದೆ. ಅಂತ ಟೀಕೆಗಳ ಬಗ್ಗೆ ಪ್ರಧಾನಮಂತ್ರಿಗಳು ತಿರುಗಿಯೋ ನೋಡಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts