More

    ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!

    ನವದೆಹಲಿ: ಸ್ಮಾರ್ಟ್​ಫೋನ್​ ಬಳಕೆದಾರರ ಮೇಲೆ ಹ್ಯಾಕರ್​ಗಳ ಕಣ್ಣು ಸದಾ ಇದ್ದೇ ಇರುತ್ತದೆ. ಯಾವಾಗ, ಯಾವ ಸಂದರ್ಭದಲ್ಲಿ ಹ್ಯಾಕ್​ ಮಾಡಲು ಛಾನ್ಸ್​ ಸಿಗುತ್ತದೆ ಎನ್ನುವುದನ್ನು ಕಾಯುತ್ತಿರುತ್ತಾರೆ.

    ಇದೀಗ ಕರೊನಾ ವೈರಸ್​ ಮೇಲೆ ಹ್ಯಾಕರ್ಸ್​ ಕಣ್ಣು ಬಿದ್ದಿದೆ. ಕರೊನಾ ಜಾಗೃತಿ ಸಂಬಂಧಿತ ಆ್ಯಪ್‌ಗಳು, ಸಂದೇಶಗಳನ್ನೇ ಬಂಡವಾಳವಾಗಿಸಿಕೊಂಡಿರುವ ಇವರು, ಇದರ ಮೂಲಕ ವೈರಸ್​ ಹರಿಬಿಟ್ಟು ವೈಯಕ್ತಿಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಮುಸ್ಲಿಮರ ದುಡ್ಡು ಮುಸ್ಲಿಮರಿಗಷ್ಟೇ, ಕರೊನಾ ನಿಧಿಗೆ ಅಲ್ಲ ಎಂದ ಶಾಸಕ ಜಮೀರ್​ ಅಹ್ಮದ್​- ಹಣ ಕೊಡುವವರಿಗೂ ಅಡ್ಡಗಾಲು!

    ಕರೊನಾ ವೈರಸ್​ಗೆ ಸಂಬಂಧಿಸಿದಂತೆ ಲಿಂಕ್‌ಗಳ ಮೇಲೆ ಕ್ಲಿಕ್ಕಿಸುವಾಗ ಎಚ್ಚರದಿಂದ ಇರುವಂತೆ ಎಲ್ಲರಿಗೂ ಸಂದೇಶ ರವಾನೆ ಮಾಡಲು ಎಲ್ಲ ರಾಜ್ಯಗಳಿಗೆ ಸಿಬಿಐ ತಿಳಿಸಿದೆ. ಬ್ಯಾಂಕಿಂಗ್‌ ಟ್ರೋಜನ್‌ಗೆ ಸಂಬಂಧಿಸಿದ ಈ ವೈರಸ್‌ ಅನ್ನು ಹ್ಯಾಕರ್​ಗಳು ಸೃಷ್ಟಿಸಿದ್ದಾರೆ. ಇದರರ್ಥ, ಒಂದು ವೇಳೆ ವೈರಸ್​ ಇರುವ ಲಿಂಕ್​ಗಳನ್ನು ಬಳಕೆದಾರರೇನಾದರೂ ಕ್ಲಿಕ್ಕಿಸಿದ್ದೇ ಆದರಲ್ಲಿ, ಅವರ ಬ್ಯಾಂಕ್​ನ ಸಂಪೂರ್ಣ ವಿವರ ಹ್ಯಾಕರ್​ಗಳ ಕೈಸೇರಲಿದೆ. ಸರ್ಬೇರಸ್ ಹೆಸರಿನ ಒಂದು ಸಾಫ್ಟ್​ವೇರ್ ಬಳಸಿ ಈ ಹ್ಯಾಕಿಂಗ್ ಮಾಡಲಾಗುತ್ತಿದೆ.

    ಬ್ಯಾಂಕಿಂಗ್ ಟ್ರೋಜನ್ ಬಳಸಿ ಬಳಕೆದಾರರಿಗೆ ಕೊರೊನಾ ಬಗ್ಗೆ ಮಾಹಿತಿ ಡೌನ್ ಲೋಡ್ ಮಾಡಿಕೊಳ್ಳಲು ಎಸ್​ಎಂಎಸ್​ ಲಿಂಕ್ ಕೂಡ ಕಳುಹಿಸುತ್ತದೆ. ಬಳಕೆದಾರರು ಈ ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಅವರ ಮೊಬೈಲ್​ನಲ್ಲಿ ಸಾಫ್ಟ್​ವೇರ್​ ಸ್ಥಾಪನೆಯಾಗಿ, ಬಳಕೆದಾರರ ಮಾಹಿತಿ ಕಳುವು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ:  ಮಠದಲ್ಲಿ ಕಳ್ಳತನಕ್ಕೆ ಯತ್ನ- ತಡೆಯಲು ಯತ್ನಿಸಿದ ಗಂಗಾಧರ ಸ್ವಾಮೀಜಿ ಮೇಲೆ ತೀವ್ರ ಹಲ್ಲೆ: ಆಸ್ಪತ್ರೆಗೆ ದಾಖಲು

    ಲಾಕ್​ಡೌನ್ ಅವಧಿ ವಿಸ್ತರಣೆಯಾಗಿರುವ ಈ ಸಂದರ್ಭದಲ್ಲಿ ಆನ್​ಲೈನ್​ನಲ್ಲಿಯೇ ಜನರು ಹೆಚ್ಚಿಗೆ ಕಾಲ ಕಳೆದಯುವ ಕಾರಣ, ಇದು ಸೈಬರ್​ ಕಳ್ಳರಿಗೆ ಒಳ್ಳೆಯ ಸಮಯವಾಗಿದೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

    ಆದ್ದರಿಂದ ನಕಲಿ ವೆಬ್​ಸೈಟ್​ ಅಥವಾ ಎಸ್​ಎಂಎಸ್​ ಮೂಲಕ ಬರುವ ಅಪ್ಲಿಕೇಷನ್​ಗಳನ್ನು ಕ್ಲಿಕ್​ ಮಾಡಲು ಹೋಗಬೇಡಿ. ಸ್ಮಾರ್ಟ್​ಫೋನ್​ಗಳಿಗೆ ಆ್ಯಂಟಿವೈರಸ್​ ಇರಲಿ, ಅಸುರಕ್ಷಿತ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸದಿರಿ ಎನ್ನುತ್ತಾರೆ ತಜ್ಱರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts