More

    ಎಚ್ಚರ! ಮಕ್ಕಳ ಬಗ್ಗೆ ಜಾಲತಾಣಗಳಲ್ಲಿ ವಿವರ ಶೇರ್​ ಮಾಡಬೇಡಿ

    ಬೆಂಗಳೂರು : ಇತ್ತೀಚೆಗೆ ಎಲ್ಲದಕ್ಕೂ ಸಾಮಾಜಿಕ ಮಾಧ್ಯಮದ ಸಹಾಯ ಪಡೆಯುವುದು ವಾಡಿಕೆಯಾಗಿ ಬಿಟ್ಟಿದೆ. ರಕ್ತ, ಆಕ್ಸಿಜನ್, ಮುಂತಾದ ವೈದ್ಯಕೀಯ ಅಗತ್ಯಗಳ ಬಗ್ಗೆ ಜಾಲತಾಣದಲ್ಲಿ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಜೊತೆಗೆ, ಕರೊನಾದಿಂದ ಅನಾಥರಾದ ಮಕ್ಕಳ ಕುರಿತು ಸಹಾಯ ಕೋರಿ ಹಲವು ಸಂದೇಶಗಳು ಓಡಾಡಿದ್ದೂ ಉಂಟು.

    ಈ ರೀತಿಯ ಸಂದೇಶ ಬಂದರೆ, ಯಾರಾದರೂ ಸಹಾಯ ಮಾಡುವವರನ್ನು ತಲುಪುತ್ತದೆ ಎಂಬ ಉದ್ದೇಶದಿಂದ ಅನೇಕ ಜನರು ಇವನ್ನು ಹಲವು ಗುಂಪುಗಳಿಗೆ ಫಾರ್ವರ್ಡ್​ ಮಾಡುತ್ತಾ ಇರುತ್ತಾರೆ. ಆದರೆ, ಈ ರೀತಿ ಜಾಲತಾಣದಲ್ಲಿ ಮಕ್ಕಳ ವಿವರಗಳನ್ನು ಹಾಕುವುದರಿಂದ ಅವರಿಗೆ ಅಪಾಯ ಉಂಟಾಗಬಹುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಸಿದೆ.

    ಇದನ್ನೂ ಓದಿ: ‘ಪ್ರೀತ್ಸೆ ಪ್ರೀತ್ಸೆ’ ಅಂತ ಬೆನ್ನುಬಿದ್ದ ಪಾಗಲ್ ಪ್ರೇಮಿ… ಯುವತಿಗೆ ನೀಡುತ್ತಿದ್ದ ಟಾರ್ಚರ್ ಅಷ್ಟಿಷ್ಟಲ್ಲ

    “ದಯವಿಟ್ಟು ತೊಂದರೆಯಲ್ಲಿರುವ ಮಕ್ಕಳ ಭಾವಚಿತ್ರಗಳನ್ನು ಮತ್ತು ಸಂಪರ್ಕದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಏಕೆಂದರೆ ಇದರಿಂದ ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ನೇರವಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡಿ” ಎಂದು ಇಲಾಖೆ ಟ್ವೀಟ್ ಮಾಡಿ ತಿಳಿಸಿದೆ.

    ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!

    ಯುಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಗೆಲುವು; ಪಕ್ಷವಾರು ವಿವರ ಇಲ್ಲಿದೆ

    ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ; ಹೆಂಡತಿಯೊಂದಿಗೆ ನಿತ್ಯ ಜಗಳ ಆಡುತ್ತಿದ್ದವನ ಸಾವಿಗೆ ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts