More

    ಕ್ರೀಡಾ ಕ್ಷೇತ್ರದಲ್ಲಿರುವ ಕಾನೂನು ಬಾಹಿರ ಬೆಟ್ಟಿಂಗ್ ವಹಿವಾಟು ಎಷ್ಟು ಗೊತ್ತೇ?

    ನವದೆಹಲಿ: ಕ್ರೀಡಾ ಕ್ಷೇತ್ರಕ್ಕೂ ಬೆಟ್ಟಿಂಗ್‌ಗೂ ಅವಿನಾಭಾವ ನಂಟು. ಕೆಲ ದೇಶಗಳಲ್ಲಿ ಇದು ಅಧಿಕೃತವಾಗಿ ನಡೆಯುತ್ತಿದ್ದರೂ ಮತ್ತೆ ಕೆಲವೆಡೆ ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ. ವಾರ್ಷಿಕ ಜಗತ್ತಿನಾದ್ಯಂತ ಬರೋಬ್ಬರಿ 120 ಲಕ್ಷ ಕೋಟಿ (1.7 ಟ್ರಿಲಿಯನ್ ಯುಎಸ್ ಡಾಲರ್) ಕಾನೂನುಬಾಹಿರವಾಗಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ ಎಂದು ಯುನೈಟೆಡ್ ನೇಷನ್ಸ್‌ನ ಉದ್ದೀಪನ ಹಾಗೂ ಅಪರಾಧ ವಿಭಾಗದ ತಯಾರಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಹುತೇಕ ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಈ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

    ಕಾನೂನಾತ್ಮಕವಾಗಿರುವ ಬೆಟ್ಟಿಂಗ್ ಮಾರ್ಕೆಟಿಂಗ್‌ನ ವಾರ್ಷಿಕ ವಹಿವಾಟು 3 ಲಕ್ಷ ಕೋಟಿ ರೂ (40 ಬಿಲಿಯನ್ ಡಾಲರ್) ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಾನೂನುಬಾಹಿರ ಬೆಟ್ಟಿಂಗ್‌ನಲ್ಲಿ ಬಹುತೇಕ ಯುವಕರೇ ಪಾಲ್ಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಈ ದಂಧೆ ಅಧಿಕಗೊಳ್ಳುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಘಾಡ ವ್ಯಾಲಿ ತಿಳಿಸಿದ್ದಾರೆ. ಕಾನೂನುಬಾಹಿರ ಬೆಟ್ಟಿಂಗ್ ನಿಯಂತ್ರಿಸಲು ಸರ್ಕಾರಗಳು, ಕ್ರೀಡಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ವಿಶೇಷ ಕಾನೂನು ರೂಪಿಸಬೇಕು. ಅಕ್ರಮ ಹಣಕಾಸು ವಹಿವಾಟು ನಿಗ್ರಹ ಘಟಕಗಳನ್ನು ಎಲ್ಲೆಡೆ ಸ್ಥಾಪಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

    VIDEO| ಮಂಡಿಯೂರಿ ಮಾಡಿದ ಪ್ರೇಮ ನಿವೇದನೆ: ಕ್ರಿಕೆಟ್​ ಮಧ್ಯೆ ವೀಕ್ಷಕರಿಗೆ ಸಿಕ್ಕ ಸವಿ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts