More

    ಐಪಿಎಲ್‌ನಲ್ಲಿ ಬುಕ್ಕಿಗಳ ಫೇವರಿಟ್ ತಂಡ ಯಾವುದು ಗೊತ್ತೇ?

    ಬೆಂಗಳೂರು: ಪ್ರತಿ ಬಾರಿ ಐಪಿಎಲ್‌ನಲ್ಲಿ ಬಿಸಿಸಿಐ, ತಂಡಗಳು ಮತ್ತು ಕ್ರಿಕೆಟಿಗರು ಕೋಟಿ ಕೋಟಿ ರೂ. ಮೊತ್ತದ ಸಂಪಾದನೆ ಮಾಡುತ್ತಿರುವ ವೇಳೆಯಲ್ಲೇ ಮತ್ತೊಂದು ಭೂಗತ ಜಗತ್ತಿನಲ್ಲಿ ಅದಕ್ಕಿಂತ ಸಾವಿರಾರು ಕೋಟಿ ರೂ. ಅಧಿಕ ಮೊತ್ತದ ವ್ಯವಹಾರ ನಡೆಯುತ್ತಿರುತ್ತದೆ. ಅದುವೇ ಬೆಟ್ಟಿಂಗ್ ದಂಧೆ. ಈ ಬಾರಿಯೂ ಐಪಿಎಲ್ ಟೂರ್ನಿಗೆ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು ಸಜ್ಜಾಗುತ್ತಿರುವ ನಡುವೆ ಬುಕ್ಕಿಗಳು ಮತ್ತು ಪಂಟರ್‌ಗಳು ಕೂಡ ಸದ್ದಿಲ್ಲದೆ ಸಿದ್ಧತೆ ನಡೆಸಿರುವುದಂತೂ ಸ್ಪಷ್ಟ.

    ಎಂದಿನಂತೆ ಈ ಬಾರಿಯೂ ಚೆನ್ನೈ ಸೂಪರ್‌ಕಿಂಗ್ಸ್ ತಂಡವೇ ಬುಕ್ಕಿಗಳ ಆರಂಭಿಕ ಫೇವರಿಟ್ ತಂಡವಾಗಿತ್ತು. ಆದರೆ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಿಂದೆ ಸರಿದ ಬಳಿಕ ಸಿಎಸ್‌ಕೆ (ಶೇ. 13.08) ಈಗ 5ನೇ ಸ್ಥಾನಕ್ಕೆ ಕುಸಿದಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ (ಶೇ. 16.9) ಈಗ ಹಾಟ್ ಫೇವರಿಟ್ ಸ್ಥಾನ ಅಲಂಕರಿಸಿದ್ದರೆ, ಸನ್‌ರೈಸರ್ಸ್‌ ಹೈದರಾಬಾದ್ (ಶೇ. 16) ತಂಡ 2ನೇ ಸ್ಥಾನದಲ್ಲಿರುವುದು ತುಸು ಅಚ್ಚರಿ ಎನಿಸಿದೆ.

    ಕೋಲ್ಕತ ನೈಟ್‌ರೈಡರ್ಸ್‌ (ಶೇ. 14.31) ತಂಡ 3ನೇ ಸ್ಥಾನ ಪಡೆದಿದೆ. ಆರ್‌ಸಿಬಿ (ಶೇ. 14.31) ತಂಡ 4ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ (ಶೇ. 12.93) 6 ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ 7ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ಕೊನೇ ಸ್ಥಾನದಲ್ಲಿದೆ.

    ಇದನ್ನೂ ಓದಿ:  ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಬಯೋ-ಬಬಲ್ ವಾತಾವರಣ ಇಷ್ಟವಾಗಿದ್ದು ಯಾಕೆ..!

    ಕಳೆದ ವರ್ಷದ ಮುಂಬೈ-ಚೆನ್ನೈ ನಡುವಿನ ಫೈನಲ್ ಪಂದ್ಯಕ್ಕೆ ಜೂಜು ಕಾನೂನುಬದ್ಧವಾಗಿರುವ ಬ್ರಿಟನ್‌ನಲ್ಲೇ 695 ಕೋಟಿ ರೂ. ಮೊತ್ತದ ಬೆಟ್ಟಿಂಗ್ ನಡೆದಿತ್ತು. ಇನ್ನು ಭಾರತದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಅದೆಷ್ಟು ಕೋಟಿ ರೂ. ಮೊತ್ತದ ವ್ಯವಹಾರ ನಡೆದಿರಲಿಕ್ಕಿಲ್ಲ ಲೆಕ್ಕಹಾಕಿ. ಐಪಿಎಲ್‌ನ ಪ್ರತಿ ಪಂದ್ಯಕ್ಕೂ ಬೆಟ್ಟಿಂಗ್‌ನ ಒಂದೊಂದು ವೆಬ್‌ಸೈಟ್‌ನಲ್ಲೂ 37 ಕೋಟಿ ರೂ. ಮೊತ್ತದ ವ್ಯವಹಾರಗಳು ನಡೆಯುತ್ತವಂತೆ.

    2016ರ ಒಂದು ವರದಿಯ ಪ್ರಕಾರ ಭಾರತದಲ್ಲಿ ವಾರ್ಷಿಕ 9.9 ಲಕ್ಷ ಕೋಟಿ ರೂ. ಮೊತ್ತದ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ. ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನ ಪಾಲೇ ಅಧಿಕವಾಗಿದೆ. ದೇಶದಲ್ಲಿ ಬೆಟ್ಟಿಂಗ್ ಕಾನೂನುಬದ್ಧವಾಗಬೇಕು ಎಂಬ ಬೇಡಿಕೆಗಳ ನಡುವೆ ಸದ್ಯ ಪೊಲೀಸರ ಕಣ್ಣು ತಪ್ಪಿಸಿ ನಡೆಯುತ್ತಿರುವ ದಂಧೆಗೆ ಕಡಿವಾಣ ಹಾಕುವುದು ದೊಡ್ಡ ಸವಾಲಾಗಿದೆ.

    ಆಫ್​-ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಕತ್ರೀನಾ ಕೈಫ್​ಗೆ ಸ್ಥಾನ ನೀಡಿದ ಅಶ್ವಿನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts