More

    ಸಾತ್ವಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

    ಎನ್.ಆರ್.ಪುರ: ಮನುಷ್ಯರು ಆರೋಗ್ಯವಾಗಿರಬೇಕಾದರೆ ಸಾತ್ವಿಕ ಆಹಾರ, ಧ್ಯಾನ ಹಾಗೂ ಕನಿಷ್ಟ 15 ದಿನಕ್ಕೊಮ್ಮೆ ಉಪವಾಸ ಮಾಡುವುದು ಅಗತ್ಯ ಎಂದು ಡಾ.ಸುರೇಶ್ ಕುಮಾರ್ ಹೇಳಿದರು.
    ಶುಕ್ರವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಹಬ್ಬಗಳಲ್ಲಿರಲಿ ಆರೋಗ್ಯದ ಹೂರಣ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ನಮ್ಮ ಪೂರ್ವಜನರು ಹಬ್ಬಗಳಲ್ಲಿ ಎಲ್ಲರೂ ಒಟ್ಟಾಗಿ ಭಜನೆ, ಮಾತುಕತೆ, ಸಂವಾದ ಮಾಡುತ್ತಿದ್ದರು. ದೂರ, ದೂರದಲ್ಲಿದ್ದ ಕುಟುಂಬದವರು, ನೆಂಟರು ಒಟ್ಟಾಗುವುದಕ್ಕೆ ಹಬ್ಬವನ್ನು ಬಳಸಿಕೊಳ್ಳುತ್ತಿದ್ದರು ಎಂದರು.
    ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡಬೇಕು.ಮೈದಾ ಹಿಟ್ಟು, ಸಕ್ಕರೆ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅನೇಕ ಕಾಯಿಲೆಗಳು ಬರಬಹುದು. ಆದ್ದರಿಂದ ಮೈದಾ ಹಿಟ್ಟು, ಸಕ್ಕರೆ ಬಳಕೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಆಶಯ ಭಾಷಣ ಮಾಡಿ, ಹಿಂದೆ ಹಬ್ಬಗಳಲ್ಲಿ ಸಡಗರ ಸಂಭ್ರಮವಿತ್ತು. ಪ್ರಸ್ತುತ ಹಬ್ಬಗಳಲ್ಲಿ ವೈವಿಧ್ಯತೆ ಇಲ್ಲವಾಗಿದೆ. ಯುಗಾದಿ ಸಂದರ್ಭದಲ್ಲಿ ಬೇವು,ಬೆಲ್ಲ ಹಂಚುವುದು ಜೀವನದಲ್ಲಿ ಬರುವ ಕಷ್ಟ, ಸುಖವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುವುದರ ಸಂಕೇತವಾಗಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮೇ ತಿಂಗಳಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
    ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡ ಸ್ವಾಮಿ ಮಾತನಾಡಿ,ಯುಗಾದಿ ದಿನ ಬೇವು, ಬೆಲ್ಲವನ್ನು ತಿನ್ನುತ್ತೇವೆ. ಜೀವನದಲ್ಲಿ ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದೇ ಇದರ ಸಾರಾಂಶ. ಯುಗಾದಿ ಹಬ್ಬ ಎಂದರೆ ಸಂಭ್ರಮದ ಹಬ್ಬವಾಗಿದೆ. ಯುಗಾದಿಯು ಸಾತ್ವಿಕ ಶಕ್ತಿಯಿಂದ ಅಸುರರನ್ನು ಹೋರಾಟ ಮಾಡಿದ ದಿನವಾಗಿದೆ ಎಂದು ಹೇಳಿದರು.
    ರಾಗಮಯೂರಿ ಅಕಾಡೆಮಿ ನಿರ್ದೇಶಕಿ, ಭರತ ನಾಟ್ಯ ಕಲಾವಿದೆ ಅಂಕಿತ ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಮಹಿಳಾ ಘಟಕದ ಸಂಚಾಲಕಿ ವಸಂತ ದಿವಾಕರ್, ಅಗ್ರಹಾರದ ನಿವೃತ್ತ ಶಿಕ್ಷಕಿ ಕೆ.ಕೆ.ಲಕ್ಷ್ಮೀರಾವ್, ರಾಗಮಯೂರಿ ನೃತ್ಯ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್, ಜಯಂತಿ, ವಾಸಂತಿ, ಶಶಿಕಲಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts