More

    ಬೇತು ಶ್ರೀ ಮಕ್ಕಿ ಶಾಸ್ತಾವು ಉತ್ಸವ

    ನಾಪೋಕ್ಲು: ಸಮೀಪದ ಬೇತು ಗ್ರಾಮದಲ್ಲಿರುವ ನಿಸರ್ಗ ರಮಣೀಯ ತಾಣಗಳಲ್ಲಿ ಒಂದಾದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಶುಕ್ರವಾರ ಎತೇರಾಟ ಮತ್ತು ತೋತ ತೆರೆ ನಡೆಯಿತು.

    ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ಜರುಗುತ್ತವೆ. ಡಿಸೆಂಬರ್‌ನಲ್ಲಿ ಮೊದಲನೇ ಹಬ್ಬವಾದರೆ, ಎರಡನೇ ಮುಖ್ಯ ಹಬ್ಬ ಮೇನಲ್ಲಿ ನಡೆಯುತ್ತದೆ. ಎರಡೂ ಹಬ್ಬಗಳು ಅತ್ಯಂತ ಆಕರ್ಷಣೀಯವಾಗಿರುತ್ತದೆ. ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲ, ಮುಂತಾದ ವೈಶಿಷ್ಟಗಳೊಂದಿಗೆ ಮಕ್ಕಿ ಶಾಸ್ತಾವು ಹಬ್ಬ ಜರುಗುತ್ತದೆ.

    ಶ್ರೀ ಮಕ್ಕಿಶಾಸ್ತಾವು ಉತ್ಸವ ಎರಡು ದಿನ ನಡೆಯಲಿದ್ದು, ಶುಕ್ರವಾರ ರಾತ್ರಿ ದೀಪಾರಾಧನೆ ಜರುಗಿತು. ಅಜ್ಜಪ್ಪಕೋಲ ಹಾಗೂ ವಿಷ್ಣುಮೂರ್ತಿ ಕೋಲಗಳು ಶನಿವಾರ ನಡೆಯಲಿವೆ. ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಹರಡಿರುವ ಕೆಂಡದ ರಾಶಿಯ ಮೇಲೆ ಬೀಳುವಾಗ ಭಕ್ತಾದಿಗಳಲ್ಲಿ ರೋಮಾಂಚನ ಉಂಟುಮಾಡುತ್ತವೆ. ಹಿಂದಿನಿಂದ ಪಾಲಿಸಿಕೊಂಡು ಬಂದಿರುವ ಮಕ್ಕಿ ದೇವಾಲಯದ ಹಬ್ಬದ ಆಚರಣೆಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ತಾಣ ಸುತ್ತಮುತ್ತಲಿನವರಿಗೆ ಒಂದು ಪುಣ್ಯ ಕ್ಷೇತ್ರ. ಮಕ್ಕಿಯಲ್ಲಿ ಹರಸಿಕೊಂಡವರ ಬೇಡಿಕೆಗಳು ಈಡೇರುತ್ತವೆ ಹಾಗೂ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts