More

    ಕಳಸ ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಬೇತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ

    ಕಳಸ: ಕಳಸ ಮಾದರಿಯಲ್ಲಿ ದಾವಣಗೆರೆ ತಾಲೂಕು ಬೇತೂರು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಪಡಿಸಲು ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ನಿರ್ಧರಿಸಿದ್ದಾರೆ.

    ಮಂಗಳವಾರ ಕಳಸ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಕೆಲಸಗಳನ್ನು ವೀಕ್ಷಣೆ ಮಾಡಿದ ಬೇತೂರು ಗ್ರಾಪಂ ತಂಡ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಳಸ ಗ್ರಾಪಂ ಸ್ವಚ್ಛತೆಗೆ ತೆಗೆದುಕೊಂಡಿರುವ ಕ್ರಮಗಳು, ನೂತನ ಗ್ರಾಪಂ ಕಟ್ಟಡ ನಿರ್ವಣ, ಕಚೇರಿ ವ್ಯವಸ್ಥೆ, ಕಸ ವಿಲೇವಾರಿಗೆ ತೆಗೆದುಕೊಂಡ ಕ್ರಮ, ತ್ಯಾಜ್ಯ ಸಂಸ್ಕರಣ ಘಟಕಗಳ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು, 17 ಸದಸ್ಯರು ಹಾಗೂ ಪಿಡಿಒ, ಆಡಳಿತ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ಮಾದರಿಯನ್ನು ಬೇತೂರು ಗ್ರಾಪಂನಲ್ಲೂ ಅನುಷ್ಠಾನಕ್ಕೆ ತರುವ ಇಂಗಿತ ವ್ಯಕ್ತಪಡಿಸಿದರು.

    ಸರ್ಕಾರದ ಯಾವುದೇ ಅನುದಾನ ಬಳಸಿಕೊಳ್ಳದೆ, ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸದೆ, ಜನರ ತೆರಿಗೆ ಹಣದಿಂದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಕಳಸ ಗ್ರಾಪಂ ಸದಸ್ಯ ಎಂ.ಬಿ.ಸಂತೋಷ್ ಮಾಹಿತಿ ನೀಡಿ, ತ್ಯಾಜ್ಯ ವಿಲೇವಾರಿಗಾಗಿ ಟಿಪ್ಪರ್ ಖರೀದಿ ಮಾಡಿ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ಮನೆಯಿಂದ ದಿನಕ್ಕೆ ಒಂದು ರೂ. ಹಾಗೂ ಹೊಟೇಲ್​ಗಳಿಗೆ ಹೆಚ್ಚಿನ ದರ ಸಂಗ್ರಹಿಸಲಾಗುತ್ತಿದೆ. ಪಟ್ಟಣದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ತ್ಯಾಜ್ಯ ಸಂಸ್ಕರಣ ಘಟಕದ ಕೆಲಸ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

    ಪ್ರತಿಯೊಂದು ಮನೆಗೂ ಎರಡು ಬಕೆಟ್ ಖರೀದಿಸಿದ್ದು ಇದರಲ್ಲಿ ಮನೆ ಮಾಲೀಕರು ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಬೇಕು. ಸದ್ಯದಲ್ಲಿ ಬಕೆಟ್​ಗಳನ್ನು ನೀಡಲಾಗುತ್ತದೆ ಇದು ಇಲ್ಲಿಯ ಪಂಚಾಯಿತಿ ಸದಸ್ಯರ ಒಮ್ಮತದ ತೀರ್ವನದಂತೆ ಮಾಡಲಾಗುತ್ತಿದೆ ಎಲ್ಲರೂ ಉತ್ತಮ ಸ್ಪಂದನೆ ಸಹಕಾರ ನೀಡುತ್ತಿದ್ದಾರೆ ಎಂದರು.

    ಕಳಸ ಗ್ರಾಪಂ ಪಿಡಿಒ ಕವೀಶ್,ದ್ವಿತೀಯ ದರ್ಜೆ ಲೆಕ್ಕಾಧಿಕಾರಿ ಸಂತೋಷ್, ಸದಸ್ಯರಾದ ರಾಮಮೂರ್ತಿ, ಸೋಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts