More

    ವಿಜಯವಾಣಿ ವರದಿ ಇಂಪ್ಯಾಕ್ಟ್; ಎಚ್ಚೆತ್ತ ಅಧಿಕಾರಿಗಳು

    ಅಳವಂಡಿ: ಸಮೀಪದ ಬೆಟಗೇರಿ ಗ್ರಾಮಕ್ಕೆ ಗ್ರಾಮೀಣ ಮತ್ತು ಕುಡಿಯುವ ನೀರು ಇಲಾಖೆಯ ಎಇಇ ವಿಲಾಸ ಭೋಸ್ಲೆ ಅವರು ಭೇಟಿ ನೀಡಿ, ಜೆಜೆಎಂ (ಜಲ ಜೀವನ್ ಮಿಷನ್) ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದರು.

    ನೆನಗುದಿಗೆ ಬಿದ್ದ ಜೆಜೆಎಂ ಕಾಮಗಾರಿ

    ನ.10 ರಂದು ‘ನೆನಗುದಿಗೆ ಬಿದ್ದ ಜೆಜೆಎಂ ಕಾಮಗಾರಿ’ ತಲೆಬರಹದಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಯ ಮಾಹಿತಿ ಪಡೆದುಕೊಂಡರು.

    ಇದನ್ನೂ ಓದಿ: ದರ್ಶನ್​ ಸ್ಕ್ರೀನ್​ ಮೇಲೆ ಬಂದ್ರೆ ಫ್ಯಾನ್ಸ್​​ಗಂತೂ ಹಬ್ಬ

    ಎಇಇ ವಿಲಾಸ ಭೋಸ್ಲೆ ಮಾತನಾಡಿ, ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯ ಸ್ಥಳ ಪರಿಶೀಲನೆ ಮಾಡಲಾಗಿದೆ. ಕೆಲವಡೆ ಕಾಮಗಾರಿ ಪೂರ್ಣಗೊಂಡಿಲ್ಲ. ನಳ ಜೋಡಣೆ ಮಾಡಿಲ್ಲ ಹಾಗೂ ರಸ್ತೆ ಅಗೆದು ಬಿಡಲಾಗಿದೆ. ಸಮಸ್ಯೆ ಕುರಿತು ಗುತ್ತಿಗೆದಾರರಿಗೆ ತಿಳಿಸಿ, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

    ಜೆಜೆಎಂ ಕಾಮಗಾರಿ ಅರೆಬರೆಯಾಗಿದ್ದರಿಂದ ಸಮಸ್ಯೆಯಾಗುತ್ತಿದೆ. ರಸ್ತೆ ಅಗೆದು ಬಿಟ್ಟಿರುವುದರಿಂದ ಸಾರ್ವಜನಿಕರ ಸಮಸ್ಯೆ ಹೇಳಿದರೂ ತೀರದು. ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಪ್ರತಿಕೆಗೆ ಧನವ್ಯವಾದಗಳು ಎಂದು ಗ್ರಾಮಸ್ಥರಾದ ಹನುಮರಡ್ಡಿ ಬೇಲಡಗಿ, ಬೀಮಣ್ಣ ಕವಲೂರು, ಶರಣಪ್ಪ ಮತ್ತೂರು, ಮಂಜುನಾಥ, ಏಳುಕೋಟೇಶ ಕೋಮಲಾಪುರ, ಹನುಮಂತ, ಮಲ್ಲಣ್ಣ ಯತ್ನಳ್ಳಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts