More

  ಸೋಮನಾಥ ಕೆರೆಗೆ ಅತ್ಯುತ್ತಮ ಪ್ರಶಸ್ತಿ

  ಕಕ್ಕೇರಾ: ಪಟ್ಟಣದ ಪ್ರಸಿದ್ಧ ಶ್ರೀ ಸೋಮನಾಥ ದೇವರ ಕೆರೆಗೆ ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲೆಯ ಅತ್ಯುತ್ತಮ ಕೆರೆ ಸಮಿತಿ ಎಂದು ಗುರುತಿಸಿ ಯುವ ಮುಖಂಡ ಹನುಮಂತರಾಯಗೌಡ ಜಹಾಗೀರದಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದೆ.

  ಶಹಾಪುರನ ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಕೆರೆ ಪುನಶ್ಚೇತನ ಸಮಿತಿ ಪದಾಧಿಕಾರಿಗಳ ವಿಶೇಷ ಪ್ರೇರಣ ಸಭೆಯಲ್ಲಿ ಪಟ್ಟಣದ ಶ್ರೀ ಸೋಮನಾಥ ದೇವರ ಕೆರೆಗೆ ಅತ್ಯುತ್ತಮ ಕೆರೆ ಸಮಿತಿ ಎಂದು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹನುಮಂತರಾಯಗೌಡ ಜಹಾಗೀರದಾರ್, ಪಟ್ಟಣದ ಶ್ರೀ ಸೋಮನಾಥ ದೇವರ ಕೆರೆಯನ್ನು ಹಲವು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿ ಜಲ ಸಂಗ್ರಹಕ್ಕೆ ಸಹಕಾರ ನೀಡಿದ್ದರಿಂದ ಇಂದು ನಮ್ಮ ಕೆರೆ ಮೈದುಂಬಿ ಜನ, ಜಾನುವಾರುಗಳಿಗೆ ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

  ಶರಣು ಗದ್ದುಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಕಮಲಾಕ್ಷ, ಕೆರೆ ವಿಭಾಗ ನಿರ್ದೇಶಕ ಶಿವಾನಂದ ಆಚಾರ್ಯ, ತಾಲೂಕು ಯೋಜನಾಧಿಕಾರಿ ಸಂತೋಷ, ಪತ್ರಕರ್ತ ನಾರಾಯಣ ಆಚಾರ್ಯ, ಚಂದ್ರಶೇಖರ ಸಕ್ರಿ, ಮಹಿಬೂಬ್ ಸುರಪುರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts