More

    ಬೆಂಗಳೂರು ವಿವಿ ಗುಣಾತ್ಮಕ ಶಿಕ್ಷಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಗುಣಾತ್ಮಕ ಶಿಕ್ಷಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಸಂಸ್ಥೆ ISO(9001-2015) ಪ್ರಮಾಣ ಪತ್ರ ದೊರೆತಿದೆ.

    ಈ ಮೂಲಕ ರಾಜ್ಯದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಈ ಪ್ರಮಾಣ ಪತ್ರ ಪಡೆದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಬೆಂಗಳುರು ವಿವಿ ಪಾತ್ರವಾಗಿದೆ.

    ಈ ಕುರಿತು ಮಾತನಾಡಿರುವ ಬೆಂಗಳೂರು ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್​ ಇದರಿಂದ ವಿಶ್ವವಿದ್ಯಾಲಯ ಘನತೆ ಮತ್ತು ಮೌಲ್ಯ ಮತ್ತಷ್ಟು ಹೆಚ್ಚಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲಿದೆ. ಈ ಪ್ರಮಾಣಪತ್ರವು ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಸಂಸ್ಥೆಯ ಪರಿಶೋಧಕಿ ಡಾ. ಲಕ್ಷ್ಮೀ ಶ್ರೀನಿವಾಸನ್ ಅವರು ಮೌಲ್ಯಮಾಪನ ಮಾಡಿದ್ದಾರೆ. ಪ್ರಮಾಣ ಪತ್ರವನ್ನ ಬ್ರಿಡ್ಜ್‌ಮಾನ್ ನೋಬಲ್ ಎಲ್‌ಎಲ್‌ಪಿ ಎಂಬ ಎಜೆನ್ಸಿಯ ಸ್ಥಾಪಕ ಅಧ್ಯಕ್ಷ ಶ್ರೀಕಾಂತ ಅವರ ತಂಡ ಮಾಡಿದೆ.

    ಒಟ್ಟಾರೆ ನಿರ್ವಹಣೆಯ ಕಾರ್ಯ, ಬೋಧನಾ ಮತ್ತು ಕಲಿಕೆ ಆಡಳಿತದಲ್ಲಿ ವಿದ್ಯಾರ್ಥಿಗಳ ಪ್ರಗತಿ ಸೇರಿ ಸಾಕಷ್ಟು ಇತರೆ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ಡಾ. ಲಕ್ಷ್ಮೀ ಶ್ರೀನಿವಾಸನ್, ವಿಶ್ವವಿದ್ಯಾಲಯ ಶಿಕ್ಷಣ, ಬೋಧನೆ, ಹೊಂದಿರುವ ನೌಕಕರರು, ಮೂಲಸೌಕರ್ಯ ಸೇರಿ ಹಲವು ಮಾನದಂಡಗಳಿಂದ ಅವರಿಗೆ ಐಎಸ್‌ಒ ಪ್ರಮಾಣ ಪತ್ರ ಸಿಕ್ಕಿದೆ. ವಿವಿಯು ಕೌಶಲ್ಯ, ನಾಯಕತ್ವ ಗುಣ, ಬ್ರಾಂಡಿಂಗ್ ವಿಭಾಗಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಅವಶ್ಯಕತೆ ಇದೆ ಎಂದು ಶಿಫಾರಸು ಮಾಡಿರುವುದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts