More

    ನೀರು, ಆಹಾರವಿಲ್ಲದೇ ಪಕ್ಷಿಗಳ ಒದ್ದಾಟ: ಹಸಿವಿನಿಂದ ನಿತ್ರಾಣವಾಗಿ ಬಿದ್ದ ಹದ್ದಿಗೆ ಸಂಚಾರ ಪೊಲೀಸರ ಆರೈಕೆ

    ಬೆಂಗಳೂರು: ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಎದುರು ಆಹಾರವಿಲ್ಲದೆ ನಿತ್ರಾಣವಾಗಿ ಬಿದ್ದಿದ್ದ ಹದ್ದನ್ನು ಸಂರಕ್ಷಿಸಿದ ಪೊಲೀಸರು ಬನ್ನೇರುಘಟ್ಟದಲ್ಲಿರುವ ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಎರಡು ದಿನಗಳಿಂದ ಮಡಿವಾಳ ಸಂಚಾರ ಠಾಣೆಯ ಆಸುಪಾಸಿನಲ್ಲಿ ಹಾರಾಡುತ್ತಿದ್ದ ಹದ್ದೊಂದು ಶುಕ್ರವಾರ ಬೆಳಗ್ಗೆ ಹಾರಲಾಗದೆ ಠಾಣೆಯ ಮುಂಬಾಗ ಬಿದ್ದಿತ್ತು. ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಈ ಹದ್ದನ್ನು ಗಮನಿಸಿ ಆಹಾರ ನೀಡಿ ಆರೈಕೆ ಮಾಡಿದ್ದಾರೆ ಎಂದು ಮಡಿವಾಳ ಸಂಚಾರ ಠಾಣೆ ಪಿಎಸ್‌ಐ ಶಿವರಾಜ್ ಕುಮಾರ್ ಅಂಗಡಿ ತಿಳಿಸಿದ್ದಾರೆ.

    ಲಾಕ್‌ಡೌನ್ ಆಗಿರುವುದರಿಂದ ನೀರು, ಆಹಾರ ಸಿಗದೆ ಸಾವಿರಾರು ಪಕ್ಷಿಗಳು ಕಷ್ಟ ಅನುಭವಿಸುತ್ತಿವೆ. ಈ ಹಿಂದೆ ಹೋಟೆಲ್, ಅಂಗಡಿಗಳ ಮುಂದೆ ಇಡಲಾಗುತ್ತಿದ್ದ ಆಹಾರಗಳು ಪಕ್ಷಿಗಳಿಗೆ ಆಸರೆಯಾಗಿದ್ದವು.

    ಇಲ್ಲಿದೆ ನೋಡಿ ಶುಭ ಸುದ್ದಿ: ದೇಶದಲ್ಲಿ ಹೆಚ್ಚುತ್ತಿದೆ ಕರೊನಾವನ್ನೇ ಮಣಿಸಿ ಗುಣಮುಖ ಆಗುತ್ತಿರುವ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts