More

    ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಟ್ರಾಫಿಕ್​ ಜಾಮ್​ಗೆ ಮಗು ಬಲಿ

    ಬೆಂಗಳೂರು: ಸಿಲಿಕಾನ್​ ಸಿಟಿಯ ಬಹುದೊಡ್ಡ ಸಮಸ್ಯೆಯೆಂದರೆ ಅದು ಟ್ರಾಫಿಕ್. ಪ್ರತಿನಿತ್ಯ ಸಾಕಷ್ಟು ಮಂದಿ ಟ್ರಾಫಿಕ್​ನಿಂದಾಗಿ ತುಂಬಾ​ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅದೇ ಟ್ರಾಫಿಕ್​ ಮಗುವೊಂದನ್ನು ಬಲಿ ಪಡೆದುಕೊಂಡಿದೆ.

    ಬೆಂಗಳೂರಿನ ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಟ್ರಾಫಿಕ್​ ಜಾಮ್​ನಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಒಂದೂವರೆ ವರ್ಷದ ಮಗು ದುರಂತ ಸಾವಿಗೀಡಾಗಿದೆ.

    ಮಗುವನ್ನು ತುರ್ತು ಚಿಕಿತ್ಸೆಗೆಂದು ಹಾಸನದಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್​ನಲ್ಲಿ ಕರೆತರಲಾಗುತ್ತಿತ್ತು. ಹಾಸನದಿಂದ ಕೇವಲ ಒಂದು ಗಂಟೆಯಲ್ಲೇ ಜೀರೋ ಟ್ರಾಫಿಕ್​ನಲ್ಲಿ ಮಗು ನೆಲಮಂಗಲ ತಲುಪಿತ್ತು. ಆದರೆ, ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆಯಲ್ಲಿ ಆಂಬ್ಯುಲೆನ್ಸ್​ ಟ್ರಾಫಿಕ್​ನಲ್ಲಿ ಸಿಲುಕಿತು.

    ಟ್ರಾಫಿಕ್​ನಲ್ಲಿ ಸಿಲುಕಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಏನು ಅರಿಯದ ಕಂದಮ್ಮ ಪ್ರಾಣ ಬಿಟ್ಟಿದೆ. ನೆಲಮಂಗಲದಿಂದ ಗೊರಗುಂಟೆಪಾಳ್ಯಗೆ ಟ್ರಾಫಿಕ್ ಜಾಮ್​ ಹಿನ್ನೆಲೆ ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಯಿತು. ಇದರ ನಡುವೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಆಂಬ್ಯುಲೆನ್ಸ್​ಗೆ ದಾರಿ ಸಿಗದೇ ಮಗು ಮೃತಪಟ್ಟಿದೆ. (ದಿಗ್ವಿಜಯ ನ್ಯೂಸ್​)

    ಅದಾನಿ ಗ್ರೂಪ್​ಗೆ 21 ಸಾವಿರ ಕೋಟಿ ರೂ. ಸಾಲ: ಚಿಂತಿಸುವ ಅಗತ್ಯವಿಲ್ಲ ಎಂದ SBI ಚೇರ್ಮನ್​

    ರಾಯಲ್​ ಎನ್​ಫೀಲ್ಡ್​ಗೆ ಕೆಟಿಎಂ ಬೈಕ್​ಗೆ ಡಿಕ್ಕಿ: ಯುವತಿ ದುರಂತ ಸಾವು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ

    ರಾಜ್ಯ ಸರ್ಕಾರಕ್ಕೆ ಸೇರಬೇಕಾದ 76 ಲಕ್ಷ ರೂ. ಗುಳುಂ! ಡಿ‌ ಗ್ರೂಪ್​ ನೌಕರನ ಕೈಚಳಕ, ಪತ್ನಿ, ನೆಂಟರ ಖಾತೆಗೆ ಹಣ ಜಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts