More

    ಕಾರ್ಮಿಕರ ಕಣ್ಣೀರಿನ ಕಥೆ; ಬೆಂಗಳೂರಿಂದ ಒಡಿಶಾಗೆ ನಡೆದುಕೊಂಡೇ ಹೋದರು!

    ನವದೆಹಲಿ: ದೂರದ ಪ್ರದೇಶ, ಊರು, ಹಳ್ಳಿ, ದೇಶಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದು ಜೀವನ ಕಟ್ಟಿಕೊಂಡವರು ಹಲವರು. ಹೀಗೆ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮೂವರು ಕಾರ್ಮಿಕರು ಒಡಿಶಾವರೆಗೂ ನಡೆದುಕೊಂಡು ಹೋಗಿರುವ ಕಥೆ ಹೇಳಿ…

    ಕಾಳಹಂಡಿಯ ಜಯಪಟ್ಟಣದ ತಿಂಗಳಕನ್ ಗ್ರಾಮದ ಕಟಾರ್ ಮಾಝಿ, ಬುಡು ಮಾಝಿ ಮತ್ತು ಭಿಕಾರಿ ಮಾಝಿ ಮೂವರು ವಲಸೆ ಕಾರ್ಮಿಕರು. ಎರಡು ತಿಂಗಳ ಹಿಂದೆ ಬಾಳುಗಾಂವ್‌ನ ಮಧ್ಯವರ್ತಿಯೊಬ್ಬನ ಸಹಾಯದಿಂದ ಬೆಂಗಳೂರಿಗೆ ಬಂದಿದ್ದರು. ಕಂಪನಿಯೊಂದರಲ್ಲಿ ಅವರಿಗೆ ಕೆಲಸ ದೊರೆಯಿತು.

    ಕಂಪನಿಯವರು ಸರಿಯಾಗಿ ಇವರಿಗೆ ವೇತನ ನೀಡುತ್ತಿರಲಿಲ್ಲ. ಕಾರ್ಮಿಕರು ತಮ್ಮ ಬಾಕಿಯನ್ನು ಕೇಳಿದಾಗ, ಅವರಿಗೆ ಹೊಡೆದು, ಚಿತ್ರಹಿಂಸೆ ನೀಡಲಾಯಿತು. ಇದರಿಂದ ರೋಸಿ ಹೋದ ಅವರು ತಮ್ಮ ಊರಿಗೆ ಹೋಗಲು ನಿರ್ಧರಿಸಿದರು. ಹಣ ಇಲ್ಲದಿದ್ದರೂ ಮೂವರು ವಲಸಿಗ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೋಗುವ ನಿರ್ಧಾರ ಮಾಡಿದ್ದಾರೆ.

    ಇದನ್ನೂ ಓದಿ:  ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ
    ಮಾರ್ಚ್ 26ರಂದು ತಮ್ಮೂರಿಗೆ ನಡೆದುಕೊಂಡೇ ಹೋಗಲು ಆರಂಭಿಸಿದರು. ಶನಿವಾರ ವಿಝಿಯನಗರಮ್ ತಲುಪಿದ್ದಾರೆ. ಅಲ್ಲಿಂದ ಅವರು ಕೋರಾಪತ್‌ಗೆ ಹೋಗುತ್ತಿದ್ದರು. ಕೆಲವು ಅಂಗಡಿಕಾರರು ಅವರಿಗೆ ಆಹಾರ ನೀಡಿದ್ದಾರೆ. ಒಡಿಶಾ ಮೋಟರಿಸ್ಟ್ ಅಸೋಶಿಯೇಷನ್ ಭಗವಾನ್ ಪದಲ್ ಅವರು 1,500 ಹಣವನ್ನು ನೀಡಿದ್ದಾರೆ ಇವರಿಗೆ ಸಹಾಯ ಮಾಡಿದ್ದಾರೆ. ಆಗ ಸ್ಥಳೀಯರು ಅವರನ್ನು ಕರೆದ ಮಾತನಾಡಿಸಿಗಾ ಈ ಕಣ್ಣೀರಿನ ಕಥೆ ಬಹಿರಂಗವಾಗಿದೆ.

    ಹಿಂದು ಎಂಬ ಕಾರಣಕ್ಕೆ ಕಾಲೇಜ್​ ಚುನಾವಣೆಯಿಂದ ಅನರ್ಹಗೊಂಡ ಭಾರತೀಯ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts