More

    ಸಿಡಿ ಲೇಡಿಯಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ: ಪ್ರತಿವಾದಿಯಾಗಿಸುವಂತೆ ಕೋರ್ಟ್​ಗೆ ಮನವಿ

    ಬೆಂಗಳೂರು: ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾದ ಯುವತಿಯು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ತನ್ನನ್ನೂ ಪ್ರತಿವಾದಿಯಾಗಿಸುವಂತೆ ಕೋರ್ಟ್​ಗೆ ಮನವಿ ಮಾಡಿದ್ದಾಳೆ.

    ಪ್ರಕರಣ ಸಂಬಂಧ ಗುರುವಾರ ಎಸ್​ಐಟಿಯಿಂದ ತನಿಖಾ ಪ್ರಗತಿ ವರದಿ ಸಲ್ಲಿಕೆಯಾಗಿದೆ. ಯುವತಿ ಪರ ಸುಪ್ರೀಂ ಕೋರ್ಟ್ ವಕೀಲೆ​ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಜಿ ವಾದಿಸಿದ್ದಾರೆ. ಎಸ್​ಐಟಿ ತನಿಖೆ ಪ್ರಶ್ನಿಸಿ ಈಗಾಗಲೇ ಯುವತಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.

    ಇನ್ನು ಯುವತಿ ಕೊಟ್ಟಿರುವ ದೂರನ್ನು ಎಸ್ಐಟಿ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಯುವತಿಯ ಅರ್ಜಿಯನ್ನು ಪಿಐಎಲ್​ನೊಂದಿಗೆ ಲಿಸ್ಟ್ ಮಾಡಲು ಮನವಿ ಮಾಡಲಾಗಿದ್ದು, ಪೊಲೀಸ್​ ಆಯುಕ್ತರ ಸೂಚನೆ ಮೇರೆಗೆ ತನಿಖಾ ವರದಿಗೆ ಜಂಟಿ ಪೊಲೀಸ್ ಆಯುಕ್ತರು ಸಹಿ ಮಾಡಿದ್ದಾರೆ.

    ನಿನ್ನೆ ಹೈಕೋರ್ಟ್​ಗೆ ಎಸ್​ಐಟಿ ವರದಿ ನೀಡಿದ್ದು, ಪಿಐಎಲ್​ಗೆ ಮಾಜಿ ಸಚಿವರ ಪರ ವಕೀಲ ಸಿ.ವಿ.ನಾಗೇಶ್ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಇಡಲು ಹೈಕೋರ್ಟ್ ಸೂಚನೆ ನೀಡಿದ್ದು, ಜೂನ್ 23ಕ್ಕೆ ವಿಚಾರಣೆ ಮೂಂದೂಡಿದೆ. (ದಿಗ್ವಿಜಯ ನ್ಯೂಸ್​)

    ಪಬ್​ಜಿ ಲೈವ್​ ಸ್ಟ್ರೀಮಿಂಗ್​ನಲ್ಲಿ ಅಶ್ಲೀಲತೆ: ಚೆನ್ನೈ ಮೂಲದ ಯೂಟ್ಯೂಬರ್​ ದಂಪತಿಯ ಬಂಧನ!

    ಅಮೆರಿಕಕ್ಕೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: ಕೋವಿಡ್‌ ಲಸಿಕೆ ಕಡ್ಡಾಯವಲ್ಲ

    ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts