More

    ಬೆಂಗಳೂರು ರತ್ನ: ಬಡವರ ಆಶಾಕಿರಣ, ಯುವನೇತಾರ ವಸಂತ ರೆಡ್ಡಿ

    ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ | ಹಲವು ಸಮಾಜಮುಖಿ ಕಾರ್ಯಗಳ ಮುಖೇನ ಜನಾನುರಾಗಿ

    ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ಯಾವುದೇ ಒಂದು ಕ್ಷಣ ಅವರ ಬದುಕನ್ನು ಬದಲಾಯಿಸುತ್ತದೆ. ಇನ್ಯಾವುದೋ ಸಾಹಸಕ್ಕೆ ಪ್ರೇರೇಪಿಸುತ್ತದೆ. ಮತ್ಯಾವುದಕ್ಕೊ ಒಗ್ಗಿಕೊಳ್ಳುವಂತೆ ಮಾಡುತ್ತದೆ. ಅಂಥದೊಂದು ಘಟನೆಯಿಂದ ವಸಂತ ರೆಡ್ಡಿ, ಅನಿರೀಕ್ಷಿತವಾಗಿ 2008ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದರು. ಸದ್ಯ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಅವರು, ಹಂತ ಹಂತವಾಗಿ ರಾಜಕೀಯ ಅಳ ತಿಳಿದುಕೊಂಡು ಯುವನೇತಾರರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ವಿಜಯವಾಣಿ ಬೆಂಗಳೂರು ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

    “ನನ್ನ ಅಳಿಲು ಸೇವೆ ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿದ್ದಕ್ಕೆ ವಿಜಯವಾಣಿ ಪತ್ರಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆ ಸಿಕ್ಕಿದೆ. ಈ ಪ್ರಶಸ್ತಿಯನ್ನು ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ ಹಾಗೂ ರಾಜಕೀಯ ಮಾರ್ಗದರ್ಶಕರಿಗೆ ಅರ್ಪಿಸುತ್ತೇನೆ” 

    | ವಸಂತರೆಡ್ಡಿ ಬಳ್ಳೂರು, ಗ್ರಾಪಂ ಸದಸ್ಯ

     

    ವಸಂತ ರೆಡ್ಡಿ ಅವರಿಗೆ ರಾಜಕೀಯ ಅಂದ್ರೆ ಅಷ್ಟಕ್ಕಷ್ಟೇ. ಇವರ ಕುಟುಂಬ ಕೂಡ ರಾಜಕೀಯ ಹಿನ್ನೆಲೆ ಹೊಂದಿರಲಿಲ್ಲ. ಆದರೆ, 2008ರಲ್ಲಿ ಸಿಲಿಂಡರ್ ಘಟನೆ ನಡೆಯಿತು. ಗ್ರಾಹಕರನ್ನು ವಂಚಿಸಿ ಕಡಿಮೆ ತೂಕ ಹೊಂದಿದ್ದ ಸಿಲಿಂಡರ್ ನೀಡಲಾಗುತ್ತಿತ್ತು. ಪ್ರತಿ ಸಿಲಿಂಡರ್​ನಲ್ಲಿ 4-5 ಕೆಜಿ ತೂಕ ಕಡಿಮೆ ಇರುತ್ತಿತ್ತು. ಈ ಬಗ್ಗೆ ದೊಡ್ಡ ಗಲಾಟೆಯೂ ಆಗಿತ್ತು. ಗ್ರಾಹಕರ ಪರವಾಗಿ ವಸಂತ ರೆಡ್ಡಿ ಧ್ವನಿ ಎತ್ತಿದ್ದರು. ಆ ಘಟನೆಯಿಂದಲೇ ಅಚಾನಕ್ಕಾಗಿ ರಾಜಕೀಯ ಕ್ಷೇತ್ರಕ್ಕೆ ಇವರು ಕಾಲಿಟ್ಟರು. ನಂತರ, ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. 2008ರವರೆಗೆ ರಾಜಕೀಯದ ಗಂಧ ಗಾಳಿಯೂ ಗೊತ್ತಿರಲಿಲ್ಲ. ರಾಜಕೀಯದಲ್ಲಿ ಅಂಬೆಕಾಲು ಇಡುತ್ತಿದ್ದ ಸಂದರ್ಭದಲ್ಲಿ ಇದನ್ನೇ ಮಾಡಬೇಕೆಂದು ಅಂದುಕೊಂಡಿರಲಿಲ್ಲ. ಸದ್ಯ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಬೇಕೆಂದು ಗುರಿ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಒಳ್ಳೆಯ ರಾಜಕೀಯ ವ್ಯಕ್ತಿಯಾಗಿ ಬೆಳೆಯುವ ಎಲ್ಲ ಲಕ್ಷಣಗಳು ಇವರಲ್ಲಿವೆ.

    ಬೆಂಗಳೂರು ರತ್ನ: ಬಡವರ ಆಶಾಕಿರಣ, ಯುವನೇತಾರ ವಸಂತ ರೆಡ್ಡಿ

    ಚಿಕ್ಕವಯಸ್ಸಿನಲ್ಲೇ ನಾಯಕತ್ವ ಗುಣ: 1ರಿಂದ 8ನೇ ತರಗತಿವರೆಗೆ ಸ್ವಗ್ರಾಮದ ಬಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ ವಸಂತ ರೆಡ್ಡಿ, 8ರಿಂದ 10ನೇ ತರಗತಿಯನ್ನು ಅತ್ತಿಬೆಲೆಯ ಪ್ರೌಢಶಾಲೆಯಲ್ಲಿ ಮುಗಿಸಿದರು. ಪ್ರತಿ ನಿತ್ಯ 5 ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ಬಂದು ಪ್ರೌಢಶಿಕ್ಷಣವನ್ನು ಮುಗಿಸಿದರು. ಬಿಟಿಆರ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ ಪೂರೈಸಿದರು. 2008ರಲ್ಲಿ ಬಳ್ಳೂರು ಗ್ರಾಮಕ್ಕೆ ಬಸ್ ಸೌಲಭ್ಯ ಸಿಕ್ಕಿತ್ತು. ದಿನಕ್ಕೆ ಒಂದು ಬಾರಿ ಮಾತ್ರ ಬಸ್ ಬರುತ್ತಿತ್ತು. ಇವರದ್ದು ಕೃಷಿ ಕುಟುಂಬ. ಶಾಲೆ ಬಿಟ್ಟರೆ ತೋಟ, ತೋಟ ಬಿಟ್ಟರೆ ಮನೆಗೆ ತೆರಳುತ್ತಿದ್ದ ಇವರು, ಕೃಷಿ ವೃತ್ತಿಯಲ್ಲಿ ತೊಡಗಿದ್ದ ಪಾಲಕರಿಗೆ ನೆರವಾಗುತ್ತಿದ್ದರು. ತುಂಟಾಟದ ವಿದ್ಯಾರ್ಥಿಯಾಗಿದ್ದ ಇವರು, ಶಾಲೆ ಮತ್ತು ಕಾಲೇಜಿನಲ್ಲಿ ಕ್ಲಾಸ್ ಲೀಡರ್ ಆಗಿದ್ದರು. ಇದರಿಂದಾಗಿ ಚಿಕ್ಕವಯಸ್ಸಿನಲ್ಲೇ ನಾಯಕತ್ವ ಗುಣ ಬೆಳೆಯಲು ಸಾಧ್ಯವಾಯಿತು. ಇವರದ್ದು ತರಲೆ ಗ್ಯಾಂಗ್. ಕಾಲೇಜಿಗೆ ಚಕ್ಕರ್ ಹಾಕಿ ಸ್ನೇಹಿತರ ಜತೆಗೂಡಿ ಸಿನಿಮಾ ವೀಕ್ಷಿಸಲು, ಹೊರಗಡೆ ಸುತ್ತಾಡಲು ಹೋಗುತ್ತಿದ್ದರಂತೆ.

    ಅಮ್ಮನೇ ಗಾಡ್​ಫಾದರ್:

    ನಮ್ಮ ಅಮ್ಮನೇ ನನಗೆ ಗಾಡ್​ಫಾದರ್. ಬಳ್ಳೂರು ಶಾಲೆ ಶಿಕ್ಷಕಿ ನನ್ನ ಗುರು. ರಾಜಕೀಯ ಕ್ಷೇತ್ರದಲ್ಲಿ ಕೆ.ವಿ. ಶಿವಪ್ಪ, ಬಸವರಾಜು ಗುರುಗಳು. ಕೇಂದ್ರ ಸಚಿವ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ರಾಜಕೀಯದಲ್ಲಿ ಮುನ್ನಡೆಯುತ್ತಿದ್ದೇನೆ. ಅನೇಕ ಸ್ನೇಹಿತರು, ಗುರು ಹಿರಿಯರ ಸಹಕಾರವಿದೆ. ಸ್ವಂತ ಹಣದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ ನಿಷ್ಠವಂತ ಕಾರ್ಯಕರ್ತರನ್ನು ಕಡೆಗಣಿಸುವ ಮಾತಿಲ್ಲ. ಕಾರ್ಯಕರ್ತರಿಗೆ ಪ್ರಾತಿನಿಧ್ಯ ಸಿಕ್ಕೇ ಸಿಗುತ್ತದೆ. ಇದಕ್ಕೆ ನಾನೇ ಉದಾಹರಣೆ. ಆರ್​ಎಸ್​ಎಸ್ ನಮಗೆ ಶಿಸ್ತಿನ ಪಾಠ ಹೇಳಿಕೊಟ್ಟಿದೆ. ಪಕ್ಷ ಅವಕಾಶ ಕೊಟ್ಟರೆ ಮುಂದಿನ ತಾಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ ವಸಂತ ರೆಡ್ಡಿ.

    ಹಲವು ಅಭಿವೃದ್ಧಿ ಕಾರ್ಯ:

    ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ, ನೋಟು ಪುಸ್ತಕ ವಿತರಣೆ ಹಾಗೂ ಬಡವರಿಗೆ ಆರ್ಥಿಕ ನೆರವು ಸೇರಿ ಹಲವು ಸಮಾಜಮುಖಿ ಕಾರ್ಯಗಳನ್ನು ಸ್ವಂತ ಹಣದಲ್ಲಿ ವಸಂತ ರೆಡ್ಡಿ ಮಾಡುತ್ತಿದ್ದಾರೆ. ರಾಜಕೀಯದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ ಆದ ಬಳಿಕ ಮಹತ್ವಾಕಾಂಕ್ಷಿ ‘ಸ್ವಚ್ಛ ಭಾರತ’ ಹಾಗೂ ‘ಬಯಲು ಬಹಿರ್ದೆಸೆ ಮುಕ್ತ’ ಯೋಜನೆಗಳನ್ನು ಘೋಷಿಸಿದ್ದರು. ಮೋದಿ ಆಶಯಕ್ಕೆ ತಕ್ಕಂತೆ ಮುತುವರ್ಜಿ ವಹಿಸಿದ್ದ ಇವರು, ಪಂಚಾಯಿತಿಯಿಂದ 21 ಶೌಚಗೃಹಗಳನ್ನು ಫಲಾನುಭವಿಗಳಿಗೆ ಮಂಜೂರು ಮಾಡಿಸಿಕೊಟ್ಟಿದ್ದಾರೆ. ತಾವು ಓದಿದ ಬಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿದ್ದಾರೆ. ತಾಯಿ ಹೆಸರಿನಲ್ಲಿ ಉಚಿತವಾಗಿ ಹೊಸ ಕೊಠಡಿ ನಿರ್ವಿುಸಿದ್ದಾರೆ. ಪಂಚಾಯಿತಿಯಿಂದ ಶಾಲೆಗೆ ಕೊಠಡಿ, ಶೌಚಗೃಹ, ರಂಗಮಂದಿರ, ದೇವಸ್ಥಾನ, ಅಡುಗೆ ಮನೆ ನಿರ್ಮಾಣ ಮಾಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಟೈಲ್ಸ್, ಕುಡಿಯುವ ನೀರು ಸೇರಿ ಇತರ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಶಾಲೆಯಲ್ಲಿ ಒಟ್ಟು 388 ವಿದ್ಯಾರ್ಥಿಗಳು ಓದಿದ್ದು, ಇದರಲ್ಲಿ ಹೆಚ್ಚಿನ ಉತ್ತರ ಭಾರತದ ಕಾರ್ವಿುಕರ ಮಕ್ಕಳು ಇದ್ದಾರೆ. ಇವರೆಲ್ಲರೂ ಕನ್ನಡ ಮಾಧ್ಯಮದಲ್ಲೇ ಓದುತ್ತಿರುವುದು ಗಮನಾರ್ಹ.

    ಬೆಂಗಳೂರು ರತ್ನ: ಬಡವರ ಆಶಾಕಿರಣ, ಯುವನೇತಾರ ವಸಂತ ರೆಡ್ಡಿ

    ನೀಲಿ ಕಣ್ಣಿನ ಹುಡುಗ:

    ಬಿಜೆಪಿಯಲ್ಲಿ ನಿಷ್ಠವಂತ ಕಾರ್ಯಕರ್ತರಾಗಿರುವ ವಸಂತ ರೆಡ್ಡಿ, 2010ರಲ್ಲಿ ಜಿಲ್ಲಾ ಕಾರ್ಯಕಾರಣಿ ಸದಸ್ಯ, 2013ರಲ್ಲಿ ಆನೇಕಲ್ ತಾಲೂಕು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ 2016ರಲ್ಲಿ ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್) ಹಿನ್ನೆಲೆ ಹೊಂದಿರುವ ಇವರು, ಸಂತೋಷ್, ಅರುಣ್ ಹಾಗೂ ದರ್ಶನ್ ಸೇರಿ ಸಂಘದ ಇತರರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಆರ್.ಅಶೋಕ್, ವಿ. ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಎಂ, ಕೃಷ್ಣಪ್ಪ ಸೇರಿ ಹಲವು ನಾಯಕರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಇವರೆಲ್ಲರ ಅಶೀರ್ವಾದದಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವಸಂತ ರೆಡ್ಡಿ ಅವರೇ ಹೇಳಿಕೊಳ್ಳುವ ಪ್ರಕಾರ, ಆರ್​ಎಸ್​ಎಸ್​ನವರಿಗೆ ಇವರು ನೀಲಿ ಕಣ್ಣಿನ ಹುಡುಗ!

    ಹಸಿದವರಿಗೆ ಅನ್ನ ನೀಡಿದ ಅನ್ನದಾತ: 

    ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತರ ಭಾರತದ ಅಂದಾಜು 15 ಸಾವಿರ ಕಾರ್ವಿುಕರು ವಾಸಿಸುತ್ತಿದ್ದಾರೆ. ಕರೊನಾ ಮೊದಲ ಅಲೆಯಲ್ಲಿ ಲಾಕ್​ಡೌನ್ ಆದಾಗ ದಿಢೀರ್ ಕೆಲಸ ಕಳೆದುಕೊಂಡು ಇವರೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವೇಳೆ ಅವರ ನೆರವಿಗೆ ಧಾವಿಸಿದ್ದ ವಸಂತ ರೆಡ್ಡಿ, ಪ್ರತಿನಿತ್ಯ ಸಾವಿರಾರು ಮಂದಿಗೆ 21 ದಿನಗಳ ಕಾಲ ಉಚಿತವಾಗಿ ಆಹಾರ ವಿತರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರೇರಣೆಯಿಂದ ಈ ಕೆಲಸವನ್ನು ಮಾಡಿದ್ದಾರೆ. ಕರೊನಾ ಎರಡನೇ ಅಲೆಯಲ್ಲಿ 40 ಸಣ್ಣ ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಕೆಲವರು ಕೆಲಸ ನೀಡುವಂತೆ ಕೇಳಿ ಬಂದಿದ್ದರು. ಕೆಲವರಿಗೆ ಉದ್ಯೋಗ ನೀಡಿದ್ದ ಇವರು, ತಮ್ಮ ನಿರ್ವಣದಲ್ಲಿ ‘ಒಂದೇ ನೆಲ-ಒಂದೇ ಜಲ’ ದೇಶಭಕ್ತಿ ಗೀತೆ ರಚಿಸಲು ಕಲಾವಿದರಿಗೆ ಕೆಲಸ ಕೊಟ್ಟರು. 2020ರ ಆ.15ರಂದು ಈ ಗೀತೆಯನ್ನು ಅನಾವರಣ ಮಾಡಿದರು. ಕರೊನಾ ನಿಯಂತ್ರಣಕ್ಕೆ ಹಗಳಿರುಳು ಶ್ರಮಿಸಿದ ವೈದ್ಯರು, ನರ್ಸ್​ಗಳು ಹಾಗೂ ಅಶಾ ಕಾರ್ಯಕರ್ತರ ನೆರವಿಗೆ ಬಂದರು. ಅಕ್ಕಿ, ಬೇಳೆ, ತರಕಾರಿ ಒಳಗೊಂಡ 800ಕ್ಕೂ ಅಧಿಕ ಫುಡ್ ಕಿಟ್​ಗಳನ್ನು ಆಶಾ ಕಾರ್ಯಕರ್ತರಿಗೆ, ಕಲಾವಿದರಿಗೆ ಹಾಗೂ ಕಾರ್ವಿುಕರಿಗೆ ಉಚಿತವಾಗಿ ವಿತರಿಸಿದ್ದಾರೆ. 2019ರಲ್ಲಿ ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದ ವೇಳೆ ನೂರಾರು ಸಂತ್ರಸ್ತರಿಗೆ ಉಚಿತವಾಗಿ ಫುಡ್ ಕಿಟ್ ಕೊಟ್ಟಿದ್ದಾರೆ. ಮೇವು ಇಲ್ಲದೆ ಸೊರಗಿದ ಜಾನುವಾರುಗಳಿಗೆ ಉಚಿತವಾಗಿ ಬೂಸಾ ಚೀಲಗಳನ್ನು ನೀಡಿದ್ದಾರೆ. ಪ್ರವಾಹದಿಂದ ನಲುಗಿದ್ದ ಸಂತ್ರಸ್ತರ ಸ್ಥಳಗಳಿಗೆ ಸ್ನೇಹಿತರ ಜತೆಗೂಡಿ ಖುದ್ದಾಗಿ ತೆರಳಿ ಫುಡ್ಕಿಟ್ ವಿತರಿಸಿದ್ದಾರೆ.

    ಬೆಂಗಳೂರು ರತ್ನ: ಬಡವರ ಆಶಾಕಿರಣ, ಯುವನೇತಾರ ವಸಂತ ರೆಡ್ಡಿ

    ಬಳ್ಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಂಚಾಯಿತಿ ಕಡೆಯಿಂದ ಸಾಕಷ್ಟು ಅನುಕೂಲವಾಗಿದೆ. ಕೋವಿಡ್ ಸಂದರ್ಭದಲ್ಲಿ ಔಷಧ, ಚುಚ್ಚುಮದ್ದು ಮತ್ತು ಹಾಸಿಗೆ ಒದಗಿಸಲಾಗಿತ್ತು. ಪಂಚಾಯಿತಿಗೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸುತ್ತೇವೆ. ಆಶಾ ಕಾರ್ಯಕರ್ತರಿಗೆ ವಸಂತ ರೆಡ್ಡಿ ಅವರು ಉಚಿತ ಸೀರೆ ಸೇರಿ ಫುಡ್ ಕಿಟ್​ಗಳನ್ನು ವಿತರಿಸಿದ್ದರು. ಸಾಕಷ್ಟು ರೋಗಿಗಳಿಗೂ ಸಹಾಯ ಮಾಡಿದ್ದಾರೆ. ಆಸ್ಪತ್ರೆಗೆ ಏನಾದರೂ ಸೌಲಭ್ಯ ಬೇಕೆಂದರೆ ಅವರ ಗಮನಕ್ಕೆ ತಂದರೆ ತಕ್ಷಣ ಈಡೇರಿಸುತ್ತಾರೆ.

    | ಡಾ.ಸಯ್ಯದಾ ಉರೇನ್ ಫಾತಿಮಾ

     

    ಬಳ್ಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ:

    ವಸಂತರೆಡ್ಡಿ ನಮ್ಮ ಶಾಲೆಯಲ್ಲಿ ಓದಿರುವ ಹಳೆಯ ವಿದ್ಯಾರ್ಥಿ. ನನ್ನ ಶಿಷ್ಯ. ಬಹಳ ವಿನಯವಂತ. ಅವರ ಮುಂದಾಳತ್ವದಲ್ಲಿ ಬಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿಯಾಗಿದೆ. ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಗಮನಕ್ಕೆ ತಂದರೆ ಬಗೆಹರಿಸುತ್ತಾರೆ. ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ವಸಂತ ರೆಡ್ಡಿಗೆ ದೇವರ ಶಕ್ತಿ ನೀಡಲಿ. ನಮ್ಮ ಮಾದರಿ ಶಾಲೆಯಲ್ಲಿ 388 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಉತ್ತರ ಭಾರತದ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    | ಲಿಲ್ಲಿ ಬಳ್ಳೂರು ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಉಸ್ತುವಾರಿ

    ತಾಯಿ ಸ್ಥಾನ ತುಂಬಿದ ಮಡದಿ: 

    ನನ್ನ ತಾಯಿ ನನಗೆ ಭೀಮ ಬಲ. 2001ರಲ್ಲಿ ತಾಯಿ ತೀರಿಕೊಂಡರು. ಆ ಸ್ಥಾನವನ್ನು ನನ್ನ ಮಡದಿ ತುಂಬಿದರು. 2005ರಲ್ಲಿ ಶ್ವೇತಾ ಜತೆ ವಿವಾಹವಾಯಿತು. ದೇವಿಕ್ ಚರಿತ್ ವಿ. ರೆಡ್ಡಿ ಪುತ್ರನಿದ್ದಾನೆ. ಅಂದಿನಿಂದ ಇಂದಿನವರೆಗೆ ಸುಖ ಸಂಸಾರ ನಡೆಸಿಕೊಂಡು ಬರಲಾಗುತ್ತಿದೆ. ನನ್ನ ಎಲ್ಲ ಕೆಲಸಗಳಿಗೆ ಮಡದಿ ಸದಾ ಬೆನ್ನಲುಬು. 2015ರಲ್ಲಿ ಬಳ್ಳೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಶ್ವೇತಾ, ಅಧಿಕ ಮತಗಳಿಂದ ಗೆಲುವು ಸಾಧಿಸಿ ಉಪಾಧ್ಯಕ್ಷರಾದರು. ಈ ವೇಳೆ ಅಲ್ಪ ಮತದಿಂದ ನಾನು ಗ್ರಾಪಂ ಸದಸ್ಯ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಆದರೂ, ಎದೆಗುಂದದೆ 2020ರಲ್ಲಿ ಗ್ರಾಪಂ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದೆ. 2021ರಲ್ಲಿ ಬಳ್ಳೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ

    ಕೇವಲ ಒಂದು ಮತದಿಂದ ಪರಾಭವಗೊಂಡೆ ಎನ್ನುತ್ತಾರೆ ವಸಂತ ರೆಡ್ಡಿ. ಚುನಾವಣೆಯಲ್ಲಿ ನನ್ನ ಪತ್ನಿ ಒಮ್ಮೆಯೂ ಸೋತಿಲ್ಲ. ಬೇರೆಯವರನ್ನು ಗೆಲ್ಲಿಸಿದಾಗ ತುಂಬಾ ಖುಷಿಯಾಗುತ್ತದೆ. ರಾಜಕಾರಣ ಇರಲಿ ಅಥವಾ ಇಲ್ಲದಿರಲಿ ನನ್ನ ಕೈಲಾದ ಮೆಟ್ಟಿಗೆ ಸಮಾಜಮುಖಿ ಕಾರ್ಯಗಳಂತೂ ಮುಂದುವರಿಸುತ್ತೇನೆ ಎಂದವರು ಹೇಳುತ್ತಾರೆ.

    ಪತಿ ಬಗ್ಗೆ ಶ್ವೇತಾ ಮೆಚ್ಚುಗೆ: 

    ಮನೆ ಬಳಿ ಯಾರಾದರೂ ಬಂದರೆ, ಅವರಿಗೆ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡುತ್ತಾರಂತೆ ವಸಂತ ರೆಡ್ಡಿ ಪತ್ನಿ ಶ್ವೇತಾ. ನಾರಾಯಣ ಹೃದಯಾಲಯದಲ್ಲಿ ‘ಬಿಲ್ ಎಕ್ಸಿಕ್ಯೂಟಿವ್’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನನಗೆ ಗೊತ್ತಿಲ್ಲದೆ 2015ರಲ್ಲಿ ಬಳ್ಳೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರಕ್ಕೆ ಸಹಿ ಹಾಕಿಸಿದರು. ಅಧಿಕ ಮತಗಳಿಂದ ಗೆಲುವು ಸಾಧಿಸಿ ಉಪಾಧ್ಯಕ್ಷ ಆದೆ. ಬಳಿಕ ಬಿಲ್ ಎಕ್ಸಿಕ್ಯೂಟಿವ್’ ಹುದ್ದೆ ತೊರೆದೆ. 2018ರಲ್ಲಿ ರೈತ ಸೇವಾ ಸಹಕಾರ ಬ್ಯಾಂಕ್​ನ ನಿರ್ದೇಶಕರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದೆ. ಪತಿಯ ಸಹಕಾರದಿಂದಲೇ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ರಾಜಕೀಯವಾಗಿ ಇನ್ನಷ್ಟು ಬೆಳೆಯಲು ನನ್ನ ಪತಿಗೆ ದೇವರು ಶಕ್ತಿ ನೀಡಲಿ ಎನ್ನುತ್ತಾರೆ ಶ್ವೇತಾ ವಸಂತ ರೆಡ್ಡಿ. ನನ್ನ ಪತಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಶ್ವೇತಾ ಶುಭಾ ಹಾರೈಸುತ್ತಾರೆ.

    ಬಿ ಪಾಸಿಟಿವ್:

    ರಾಜಕೀಯದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಸಮಾಜ ಸೇವೆಯಂತೂ ಮುಂದುವರಿಯಲಿದೆ. ರಾಜಕೀಯಕ್ಕೆ ಬಂದರೆ ಕೋಟ್ಯಂತರ ರೂಪಾಯಿ ಹಣ ಮಾಡಬಹುದು ಎಂಬ ಆಪವಾದ ಇದೆ. ಆದರೆ, ಇದು ತಪು್ಪ. ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡು ರಾಜಕೀಯ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ‘ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ’ ನೇರವಾಗಿ ರಾಜಕೀಯ ಮಾಡುವವನು. ಕ್ಷಣಿಕ ವಾಗಿ ರಾಜಕೀಯ ಮಾಡುವವನು ನಾನಲ್ಲ. ನಮ್ಮನ್ನು ತುಳಿಯಲು ಸಾಕಷ್ಟು ವಿರೋಧಿಗಳು ಇರುತ್ತಾರೆ. ನಮ್ಮ ಬಳಿಯೇ ಇದ್ದುಕೊಂಡು ಪಿತೂರಿ ಮಾಡುತ್ತಿರುತ್ತಾರೆ. ಇದನ್ನು ಮೆಟ್ಟಿನಿಂತರೆ ರಾಜಕೀಯದಲ್ಲಿ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಸಂತ ರೆಡ್ಡಿ. ಮೊದಲು ನಾವು ಒಳ್ಳೆಯ ಮನುಷ್ಯ ಆಗಬೇಕು. ನಮ್ಮ ಬಗ್ಗೆ ಕೆಲವರು ಒಳ್ಳೆಯ ಮಾತಾಡುತ್ತಾರೆ, ಇನ್ನೂ ಕೆಲವರು ಕೆಟ್ಟ ಮಾತಾಡುತ್ತಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ‘ಬಿ ಪಾಸಿಟಿವ್’ ಆಗಿ ಮುಂದೆ ಹೋಗುತ್ತಿರಬೇಕು ಎಂದು ಸಲಹೆ ನೀಡುತ್ತಾರೆ.

    ಬೆಂಗಳೂರು ರತ್ನ: ಬಡವರ ಆಶಾಕಿರಣ, ಯುವನೇತಾರ ವಸಂತ ರೆಡ್ಡಿ

    ಬಳ್ಳೂರು ವಸಂತ್ ರೆಡ್ಡಿ ಅವರು ನಮ್ಮ ಕುಟುಂಬದ ಸದಸ್ಯನಂತೆ ಇದ್ದಾರೆ. ಸಮಾಜದಲ್ಲಿ ಎಲ್ಲಾ ವರ್ಗದವರು ಮುಖ್ಯ ವಾಹಿನಿಗೆ ಬರಬೇಕು ಎನ್ನುವ ಧ್ಯೇಯಯೊಂದಿಗೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಬಳ್ಳೂರು ವಸಂತ ರೆಡ್ಡಿ ಅವರಿಗೆ ನನ್ನ ಸಹಕಾರ ಸಂಪೂರ್ಣವಾಗಿ ಇರುತ್ತದೆ.ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮವಾದ ಜವಾಬ್ದಾರಿ ಸಿಗಬೇಕು ಆ ನಿಟ್ಟಿನಲ್ಲಿ ನನ್ನ ಸಹಕಾರ ಸಂಪೂರ್ಣವಾಗಿ ಇರಲಿದೆ.

    | ಎಂ. ಸತೀಶ್ ರೆಡ್ಡಿ ಶಾಸಕರು, ಬೊಮ್ಮನಹಳ್ಳಿ

    ಬಳ್ಳೂರು ವಸಂತರೆಡ್ಡಿ ನಿಷ್ಠಾವಂತ ಕಾರ್ಯಕರ್ತನಾಗಿ ಸಮಾಜದಲ್ಲಿ ಕೆಳ ವರ್ಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಿರಂತರವಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ಯುವ ಮುಖಂಡನಾಗಿ ಅವರು ಪಕ್ಷದಲ್ಲೂ ಕೂಡ ಸಕ್ರಿಯ ಕಾರ್ಯಕರ್ತನಾಗಿ ಬೆಳೆದಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಒಳ್ಳೆಯ ಅವಕಾಶ ಸಿಗುವ ಸಾಧ್ಯತೆ ಇದೆ. ಇಂತಹ ಯುವಕರಿಗೆ ವಿಜಯವಾಣಿ ಬೆಂಗಳೂರು ರತ್ನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ.

    • ಎ. ನಾರಾಯಣಸ್ವಾಮಿ ಕೇಂದ್ರ ಸಚಿವರು

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts