More

    ಖದೀಮರ ಕೈಚಳಕ ಕಂಡು ಪೊಲೀಸರೇ ಶಾಕ್! ಈ ಖತರ್ನಾಕ್ ಗ್ಯಾಂಗ್ ಕಳ್ಳತನಕ್ಕಿಳಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ

    ಬೆಂಗಳೂರು: ರಾಜಧಾನಿಯಲ್ಲಿರುವ ಈ ಖತರ್ನಾಕ್ ಗ್ಯಾಂಗ್​ ಕಳ್ಳತನಕ್ಕೆ ಕೈ ಹಾಕಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ. ಹೇಗಾದ್ರೂ ಸರಿ ಕೊಟ್ಟ ಕೆಲಸವನ್ನು ಕೇವಲ 15 ನಿಮಿಷದಲ್ಲಿ ಯಶಸ್ವಿಯಾಗಿ ಮಾಡಿ ಮುಗಿಸೋ ಈ ಖದೀಮರ ಕೈಚಳಕಕ್ಕೆ ಬೆಂಗಳೂರು ಪೊಲೀಸರೇ ಶಾಕ್ ಆಗಿದ್ದಾರೆ.

    ಹೌದು, ನಗರದ ಬೆಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಳೂರು ಮುಖ್ಯ ರಸ್ತೆಯ ಬ್ಯಾಂಕ್ ಆಫ್ ಬರೋಡ ಎಟಿಎಂನಲ್ಲಿ ಕಣ್ಣು ಮುಚ್ಚಿ ಬಿಡುವುದರಲ್ಲಿ ಖದೀಮರು ಕೈ ಚಳಕ ತೋರಿದ್ದಾರೆ. ಇದಿಷ್ಟು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಖದೀಮರ ಕೃತ್ಯ ನೋಡಿ ಪೊಲೀಸರು ಹುಬ್ಬೇರಿಸಿದ್ದಾರೆ.

    ನಾಲ್ವರು ಖದೀಮರಿಂದ ಡಿ.10ರ ರಾತ್ರಿ 2.30ರ ಸುಮಾರಿಗೆ ಕೃತ್ಯ ನಡೆದಿದೆ. ಕೃತ್ಯಕ್ಕೂ ಮೊದಲು ತಮ್ಮ ಗುರುತು ಸಿಗದಂತೆ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಪೆಪ್ಪರ್ ಸ್ಪ್ರೇ ಮಾಡಿರುವ ಖದೀಮರು, ನಂತರ ಕಬ್ಬಿಣದ ರಾಡ್​ನಿಂದ ಎಟಿಎಂ ಒಳಗೆ ನುಗ್ಗಿ ಕೇಬಲ್ ವೈಯರ್ ಕತ್ತರಿಸಿದ್ದಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಮಷಿನ್ ತೆರೆಯಲು ಯತ್ನಿಸಿದ್ದಾರೆ. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಓಪನ್ ಆಗದಿದ್ದಾಗ ಕೊನೆಗೆ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ.

    ಎಟಿಎಂನಲ್ಲಿ ಸುಮಾರು 3 ಲಕ್ಷದ 13 ಸಾವಿರ ರೂಪಾಯಿಗೂ ಹೆಚ್ಚಿನ ಹಣವಿತ್ತು. ಎಟಿಎಂ ಸಮೇತ ಖದೀಮರು ಟಾಟಾ ಏಸ್ ವಾಹನದಲ್ಲಿ ಎಸ್ಕೇಪ್ ಆಗಿದ್ದು, ಮರುದಿನ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹರಳೂರು ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ಪ್ರತ್ಯೇಕವಾಗಿ ಯಾವೊಬ್ಬ ಸೆಕ್ಯುರಿಟಿ ಇಲ್ಲ. ಬ್ಯಾಂಕ್ ಕಚೇರಿ ಹಾಗೂ ಎಟಿಎಂ ಯಂತ್ರ ಒಂದೇ ಕಟ್ಟಡದಲ್ಲಿದ್ದು, ರಾತ್ರಿ ವೇಳೆಯಲ್ಲಿ ಯಾವೊಬ್ಬ ಸೆಕ್ಯುರಿಟಿ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಎಟಿಎಂ ಎಗಿರಿಸಿದ್ದಾರೆ.

    ಈ ಘಟನೆ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಶ್ಮಿ ಅವರಿಂದ ದೂರು ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪ್ರಿಂಗರ್ ಪ್ರಿಂಟ್ ಹಾಗೂ ಡಾಗ್ ಸ್ಕ್ವಾಡ್ ನಿಂದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಕಳ್ಳರು ಎಸ್ಕೇಪ್ ಆಗಿರುವ ಟಾಟಾ ಏಸ್ ವಾಹನದ ಸಂಖ್ಯೆ ಆಧಾರಿಸಿ ಆರೋಪಿಗಳಿಗಾಗಿ ಖಾಕಿ ಬಲೆ ಬೀಸಿದೆ. (ದಿಗ್ವಿಜಯ ನ್ಯೂಸ್​)

    ಅಶ್ಲೀಲ ವಿಡಿಯೋ ಕೇಸ್​: ರಾಜ್​ ಕುಂದ್ರಾ, ಪೂನಂ ಪಾಂಡೆ, ಶೆರ್ಲಿನ್​ ಚೋಪ್ರಾಗೆ ಸುಪ್ರೀಂನಿಂದ ಬಿಗ್​ ರಿಲೀಫ್​

    ಮಾವನ ಮಾತಿಂದ ರೊಚ್ಚಿಗೆದ್ದು ಪ್ರಿಯಕರನ ಜತೆ ಸೇರಿ ಭಾರಿ ಸಂಚು ರೂಪಿಸಿದ್ದ ಸೊಸೆ ಸಿಕ್ಕಿಬಿದ್ದಿದ್ದೇ ರೋಚಕ!

    ಟ್ರಾಫಿಕ್​ ಪೊಲೀಸರಿಂದಲೇ ರಸ್ತೆ ದುರಸ್ತಿ! ಬಿಬಿಎಂಪಿ ವಿರುದ್ಧ ಜನಾಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts