More

    ಖದೀಮನಿಗೆ ಸಾಥ್​ ನೀಡಿದ ಆರೋಪ: ಗಿರವಿ ಅಂಗಡಿ ಮಾಲೀಕನ ಬಂಧನ ವೇಳೆ ಹೈಡ್ರಾಮ, ಹೊತ್ತೊಯ್ದ ಪೊಲೀಸರು

    ಬೆಂಗಳೂರು: ಮನೆಗಳ್ಳನ ಕೃತ್ಯಕ್ಕೆ ಸಾಥ್​ ನೀಡಿದ ಆರೋಪ ಹೊತ್ತಿರುವ ಗಿರವಿ ಅಂಗಡಿ ಮಾಲೀಕ, ಬಂಧನದ ವೇಳೆ ಹೈಡ್ರಾಮ ಮಾಡಿರುವ ಘಟನೆ ವಿವೇಕನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ. ಬರಲ್ಲ ಅಂತಾ ಪಟ್ಟು ಹಿಡಿದು ಅಂಗಡಿ ಒಳಗೆ ಕುಳಿತಿದ್ದ ಮಾಲೀಕನನ್ನು ಬಿಡದೆ ಪೊಲೀಸರು ಹೊತ್ತುಕೊಂಡು ಹೋಗಿದ್ದಾರೆ.

    ಭವರ್ ಲಾಲ್ (51) ಬಂಧಿತ ಗಿರಿವಿ ಅಂಗಡಿ ಮಾಲೀಕ. ಬಂಧನದ ವೇಳೆ ಈತ ಹೈಡ್ರಾಮ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಭವರ್​ ಲಾಲ್​, ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಳಿ ಚಿನ್ನ ಖರೀದಿಸುತ್ತಿದ್ದ. ಇದರ ನಡುವೆ ಖದೀಮ ಶ್ರೀನಿವಾಸ್ ಅಲಿಯಾಸ್ ಅಪ್ಪು ಎಂಬಾತನನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ 15 ಮನೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಯಿತು. ಇದಾದ ಬಳಿಕ ಖದೀಮ ಚಿನ್ನವನ್ನು ಮಾರಿದ ಮೂಲವನ್ನು ಪೊಲೀಸರು ಹುಡುಕಲು ಆರಂಭಿಸಿದರು. ಈ ವೇಳೆ ಭವರ್ ಲಾಲ್ ಮಾಹಿತಿ ಪೊಲೀಸರಿಗೆ ಸಿಕ್ಕಿತು.

    ಭವರ್ ಲಾಲ್​ ಬಳಿ ತೆರಳಿದ ಪೊಲೀಸರು ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದ್ದರು. ಆದರೆ, ಪೊಲೀಸರ ವಿಚಾರಣೆಗೆ ಸ್ಪಂದಿಸದ ಭವರ್ ಲಾಲ್, ಉದ್ಧಟತನ ಮೆರೆದಿದ್ದ. ವಿಚಾರಣೆಗೆ ಬರುವಂತೆ ಹಲವು ಬಾರಿ ಕೇಳಿಕೊಂಡರು ಕ್ಯಾರೆ ಎನ್ನುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

    ಭವರ್​ ಲಾಲ್​ ಬಂಧನ ಸುಲಭವಾಗಿರಲಿಲ್ಲ. ಬಂಧನದ ವೇಳೆ ಆತನ ಮನೆಯಲ್ಲಿ ಭಾರೀ ಹೈಡ್ರಾಮವೇ ನಡೆಯಿತು. ಆತನ ಕುಟುಂಬಸ್ಥರು ಸಹ ಬಂಧನಕ್ಕೆ ವಿರೋಧಿಸಿ, ಪೊಲೀಸರಿಗೆ ಅಡ್ಡಿಪಡಿಸಿದರು. ಏನೇ ಹೇಳಿದರೂ ಭವರ್​ ಲಾಲ್​ ಮಾತ್ರ ಅಂಗಡಿ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲೀಸ್​ ಸಿಬ್ಬಂದಿ ಅಂಗಡಿ ಒಳಗೆ ಇಳಿದು ಭವರ್​ ಲಾಲ್​ನನ್ನು ಹೊತ್ತುಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ತುಣುಕು ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್​)

    ನನ್ನ ತಂದೆ ಸೋಲಿಸಲು ಮೂವರು ನಿಂತಿದ್ದಾರೆ: ಶಾಸಕ ಸುರೇಶ್ ಗೌಡ ಪರ ಚುನಾವಣಾ ಅಖಾಡಕ್ಕಿಳಿದ ಮಗಳು

    ಗಾಯಕಿ ವಾಣಿ ಜಯರಾಂ ನಿಧನ: ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆಗಿಳಿದ ಚೆನ್ನೈ ಪೊಲೀಸರು

    ಜಾತಿ ಪ್ರಮಾಣಪತ್ರಕ್ಕೆ ಅರ್ಜಿಸಲ್ಲಿಸಿದ ಶ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts