ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ದರ್ಶನ್ ಅಭಿಮಾನಿಗಳು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.
ಪೈರಸಿ ಕುರಿತು ಉಮಾಪತಿ ಫಿಲ್ಮ್ ವ್ಯವಸ್ಥಾಪಕ ಮಂಜುನಾಥ ನೀಡಿದ ದೂರಿನ ಅನ್ವಯ ಆರೋಪಿ ವಿಶ್ವನಾಥ್ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿಶ್ವನಾಥ್ ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡುತ್ತಿದ್ದ. ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಎಚ್ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ದರ್ಶನ್ ಅಭಿಮಾನಿಗಳು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿರಿ: ಪುನೀತ್-ದಿನಕರ್ ಸೇರಿಸಿದ ಜಯಣ್ಣ; ಮಾರ್ಚ್ 17ಕ್ಕೆ ಹೊಸ ಚಿತ್ರದ ಅಧಿಕೃತ ಘೋಷಣೆ
ನಮಗೆ ಎಚ್ಡಿ ಪ್ರಿಂಟ್ ಬೇಕು ಅಂತ ದರ್ಶನ್ ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದ ವಿಶ್ವನಾಥ್ನನ್ನು ಹಣ ಕೊಡುವುದಾಗಿ ನಂಬಿಸಿ ಆತನನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಮಾತುಕತೆಗೆ ಕರೆಸಿಕೊಂಡು ಅಭಿಮಾನಿಗಳು ಸೆರೆಹಿಡಿದಿದ್ದಾರೆ.
ಶನಿವಾರವಷ್ಟೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಒಬ್ಬ ಆರೋಪಿಯನ್ನು ಅಭಿಮಾನಿಗಳು ಹಿಡಿದುಕೊಟ್ಟಿದ್ದರು.
ಪ್ರಿಯಕರನೊಂದಿಗೆ ಓಡಿ ಬಂದಿದ್ದ ಯುವತಿಯ ದುರಂತ ಅಂತ್ಯ: ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು: ರಾಕಿ ಭಾಯ್ ಕುಟುಂಬದ ಮೇಲೆ ಗಂಭೀರ ಆರೋಪ!
ಆರ್ಆರ್ಆರ್ ಸಿನಿಮಾದಲ್ಲಿ ಆಲಿಯಾ ಭಟ್ ಫಸ್ಟ್ಲುಕ್ ಮಾರ್ಚ್ 15 ರಂದು ರಿವೀಲ್: ಬರ್ತಡೇಗೆ ಬಿಗ್ ಗಿಫ್ಟ್!