More

    2039ರೊಳಗೆ ಬೆಂಗಳೂರಿಗರಿಗೆ ಕಾಡಬಹುದು ನೀರಿನ ಸಮಸ್ಯೆ? ಇಲ್ಲಿದೆ ಆಘಾತಕಾರಿ ವರದಿ

    ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರು ಕೋಟ್ಯಾಂತರ ಜನರ ಜೀವನಾಡಿಯಾಗಿದೆ. ರಾಜ್ಯದ ಮೂಲೆ ಮೂಲೆಯಿಂದಷ್ಟೇ ಅಲ್ಲದೇ ದೇಶ-ವಿದೇಶದ ಜನರೂ ಇಲ್ಲಿ ವಾಸಿಸುತ್ತಿದ್ದಾರೆ. ಆದರೀಗ ಹೊಸ ಅಧ್ಯಯನವೊಂದು ಬೆಂಗಳೂರು ಜನತೆಯಲ್ಲಿ ಆತಂಕವನ್ನುಂಟುಮಾಡುವಲ್ಲಿ ಸಂದೇಹವಿಲ್ಲ.

    ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಮುಂಬರುವ ದಿನಗಳಲ್ಲಿ ಮಹಾನಗರದಲ್ಲಿ ನೀರಿನ ಕೊರತೆಯಾಗಬಹುದು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಈ ಬಗ್ಗೆ ಸ್ವತಃ ಜಲ ಮಂಡಳಿಯೇ ಆತಂಕವನ್ನು ವ್ಯಕ್ತಪಡಿಸಿದೆ.

    ಇದಕ್ಕೆ ಕಾರಣವೂ ಇದೆ. ದಿನವೊಂದಕ್ಕೆ ಕಡಿಮೆಯೆಂದರೂ 500 ಕುಟುಂಬಗಳಿಗೆ ಕುಡಿಯುವ ನೀರು ಸಂಪರ್ಕವನ್ನು ಒದಗಿಸಲಾಗುತ್ತಿದೆಯಂತೆ. ಪ್ರತಿ ದಿನದ ಲೆಕ್ಕ ಇದಾಗಿದ್ದು, ಇದು ಹೀಗೇ ಮುಂದುವರೆದರೆ 2039ರ ವೇಳೆಯಲ್ಲಿ ಬೆಂಗಳೂರಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ.

    ಕಾವೇರಿ ನದಿಯಿಂದ ನಗರದ ವಿತರಣಾ ಜಾಲಕ್ಕೆ ದಿನಕ್ಕೆ 1470 ಮಿಲಿಯನ್​ ಲೀಟರ್​ ನೀರು ಬಳಕೆಯಾಗುತ್ತಿದ್ದು, ಒಟ್ಟು 10.5 ಲಕ್ಷ ಸಂಪರ್ಕಗಳನ್ನು ಒಳಗೊಂಡಿದೆ. 2011ರ ಜನಗಣತಿಯಲ್ಲೇ 29,05,233ಲಕ್ಷ ಕುಟುಂಬಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಸದ್ಯಕ್ಕೆ ಕಾವೇರಿ 5ನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ 110 ಹಳ್ಳಿಗಳಿಗೆ ನೀರು ಪೂರೈಸಬಹುದಾಗಿದೆ. ಒಟ್ಟಾರೆ ಏರುತ್ತಿರುವ ಜನಸಂಖ್ಯೆ, ವಲಸಿಗರಿಂದ ಬೆಂಗಳೂರಲ್ಲಿ ನೀರಿನ ಅಭಾವ ಉಂಟಾಗಬಹುದೆಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    KSRTC ಬಸ್​​ನಲ್ಲಿ ಕಳ್ಳಿಯರ ಕರಾಮತ್ತು: ಬಸ್​​ ಅಡ್ಡಗಟ್ಟಿ ಮೂವರನ್ನು ಸೆರೆ ಹಿಡಿದ ಪೊಲೀಸರು!

    ವೃದ್ಧ ದಂಪತಿಯನ್ನು ಮನೆಯಲ್ಲೇ ಕೂಡಿಹಾಕಿ ದರೋಡೆ! ಮೂವರು ಮುಸುಕುಧಾರಿಗಳಿಂದ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts