More

    ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!; ಟ್ವೀಟ್​​ ಪೋಸ್ಟ್​​ ವೈರಲ್​​

    ಬೆಂಗಳೂರು: ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಮಹಾನಗರಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿಯೊಬ್ಬರ ಟ್ವೀಟ್​​ ಪೋಸ್ಟರ್​ವೊಂದು ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಫೋಸ್ಟ್​​ಗೆ ಶೇರ್​​ ಮಾಡುತ್ತಾ ವಿಭಿನ್ನವಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

    ಬೆಂಗಳೂರಲ್ಲಿ ಸ್ವಂತ ಮನೆ ಇರುವವರಿಗಿಂತ ಬಾಡಿಗೆ ಮನೆಗಳಲ್ಲಿ ಇರುವವರ ಸಂಖ್ಯೆಯೇ ಹೆಚ್ಚು. ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯದ ಜನ ಕೆಲಸ ಅರಸಿ ಇಲ್ಲಿಗೆ ಬರುವುದರಿಂದ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ.

    ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‌ಕೌಂಟರ್ : ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ವ್ಯಕ್ತಿಯೊಬ್ಬ “ನನ್ನ ಕಿಡ್ನಿ ಮಾರಾಟಕ್ಕಿದೆ, ಆ ಹಣದಿಂದ ನಾನು ಮನೆ ಅಡ್ವಾನ್ಸ್ ಪೇ ಮಾಡುತ್ತೇನೆ” ಎಂದು ಬರೆದು ಪೋಸ್ಟರ್ ಅಂಟಿಸಿದ್ದಾನೆ. ಈ ಪೋಸ್ಟ್​ನಿಂದ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹುಡುಕುವವರ ಗೋಳಾಟ ವೈರಲ್ ಆಗಿದೆ.

    ಆದರೆ ಟ್ವೀಟ್​ ಕೊನೆಯಲ್ಲಿ “ನಾನ್ ತಮಾಷೆ ಮಾಡಿದೆ, ಯಾರಿಗಾದ್ರೂ ಮನೆ ಗೊತ್ತಿದ್ರೆ ತಿಳಿಸಿ’ ಎಂದು ಬರೆದು ಈ ಆಸಾಮಿ ಚಮಕ್ ನೀಡಿದ್ದಾನೆ. ಒಟ್ಟಾರೆ ಬೆಂಗಳೂರಲ್ಲಿ ಮನೆ ಬಾಡಿಗೆಗೆ ಹುಡುಕುವವರ ಗೋಳಾಟ ಈ ವೈರಲ್ ಫೋಟೋದಿಂದ ಮುನ್ನೆಲೆಗೆ ಬಂದಿದೆ.

    ಅಬಕಾರಿ ನೀತಿ ಪ್ರಕರಣ; CBI ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಸೋಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts