More

    ಕರಗದ ವೇಳೆ ರಾಸಾಯನಿಕ ದಾಳಿ ಪ್ರಕರಣ: ಬಯಲಾಯ್ತು ಬಂಧಿತ ಆರೋಪಿಯ ದುರುದ್ದೇಶ!

    ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮತ್ತು ಖಾರದಪುಡಿ ಎರಚಿ ಕೊಲೆಗೆ ಯತ್ನಿಸಿದ ಆರೋಪದಡಿ ಆದಿನಾರಾಯಣ ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

    ಜ್ಞಾನೇಂದ್ರ ನೀಡಿದ ದೂರಿನ ಮೇರೆಗೆ ಜಯನಗರದ ಆರೋಪಿ ಆದಿನಾರಾಯಣ ಎಂಬಾತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿ ಬಂಧಿಸಲಾಗಿದೆ. ಬುಧವಾರ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏ.6ರಂದು ಬೆಂಗಳೂರು ಕರಗ ಹೊತ್ತಿದ್ದಾಗ ಹೂವಿನೊಂದಿಗೆ ಖಾರದ ಪುಡಿ ಮತ್ತು ರಾಸಾಯನಿಕ ವಸ್ತು ಬೆರೆಸಿದ ವಸ್ತುವನ್ನು ಆದಿನಾರಾಯಣ ನನ್ನ ಮೇಲೆ ಎರಚಿ ಕೊಲೆಗೆ ಯತ್ನಿಸಿದ್ದ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಸಾಯನಿಕ ದ್ರವ್ಯ ಎಸೆದ ಪರಿಣಾಮ ನನ್ನ ಕುತ್ತಿಗೆ ಮತ್ತು ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ಜ್ಞಾನೇಂದ್ರ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

    ಕರಗ ಉತ್ಸವದ ವೇಳೆ ಸಾಂಪ್ರದಾಯಿಕವಾಗಿ ಹೂವು, ಮೆಣಸಿನಕಾಳು, ಕಲ್ಲುಪ್ಪು ಸೇರಿ ವಿವಿಧ ಪದಾರ್ಥಗಳನ್ನು ಭಕ್ತರು ಹರಕೆಯ ಹೆಸರಿನಲ್ಲಿ ಎರಚುತ್ತಾರೆ. ಇದನ್ನೇ ದುರುಪಯೋಗಪಡಿಸಿಕೊಂಡ ವೀರಕುಮಾರ ಆದಿನಾರಾಯಣ, ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮತ್ತು ಖಾರದ ಪುಡಿ ಎರಚಿದ್ದಾರೆ. ಅಲ್ಲಿಯೇ ಜ್ಞಾನೇಂದ್ರ ಅವರಿಗೆ ಗೊತ್ತಾಗಿ ಉಳಿದ ವೀರಕುಮಾರರಿಗೆ ತಿಳಿಸಿದಾಗ ಮಹಿಳೆಯೊಬ್ಬರ ಕೃತ್ಯವೆಂದು ಹಲ್ಲೆ ನಡೆಸಲು ಯತ್ನಿಸಿದ್ದರು. ಆದರೆ, ಮಹಿಳೆ ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ಯಾರೆಂದು ನೋಡಿದಾಗ ಆದಿನಾರಾಯಣ ಹಿಂದೆ ಸರಿಯುತ್ತಿರುವುದನ್ನು ಗಮನಿಸಿ ತಕ್ಷಣ ಹಿಡಿದು ಥಳಿಸಿದ್ದಾರೆ. ಅಲ್ಲದೆ, ಜ್ಞಾನೇಂದ್ರ ಅವರ ಮೇಲೆ ಎರಚಿದ್ದ ರಾಸಾಯನಿಕ ಮತ್ತು ಖಾರದ ಪುಡಿ ಮಿಶ್ರಣವನ್ನು ವೀರಕುಮಾರರು ಬಟ್ಟೆಯಿಂದ ಒರೆಸಿ ಕರಗ ಸಾಗಲು ಅನುವು ಮಾಡಿಕೊಟ್ಟಿದ್ದರು. ಈ ಎಲ್ಲ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ವಲಯದಲ್ಲಿ ಸಹ ಚರ್ಚೆಗೆ ಗ್ರಾಸವಾಗಿದೆ.

    ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ವೀಕ್ಷಣೆ ಮತ್ತು ಆಚರಣೆಗೆ ಲಕ್ಷಾಂತರ ಮಂದಿ ಕಾದು ಕುಳಿತಿರುತ್ತಾರೆ. ದೇವರ ಮೇಲೆ ಇಂತಹ ಕೃತ್ಯ ಎಸಗುವುದು ಸರಿಯಲ್ಲ ಎಂದು ಭಕ್ತರು ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಬಗೆಹರಿಯದ ವಿವಾದ
    ರಾಸಾಯನಿಕ ಮತ್ತು ಖಾರದಪುಡಿ ಎರಚಿದ್ದರಿಂದ ಜ್ಞಾನೇಂದ್ರ ಅವರಿಗೆ ಜ್ಞಾನೇಂದ್ರ ಸುಟ್ಟ ಗಾಯಗಳಾಗಿರುವುದು.ಕರಗ ಉತ್ಸವದಲ್ಲಿ ಕೆಲ ವರ್ಷಗಳಿಂದ ವಿವಾದಾತ್ಮಕ ಘಟನೆಗಳು ನಡೆಯುತ್ತಲೇ ಇವೆ. ಕರಗ ಹೊರಲು ಅರ್ಚಕರ ನಡುವಿನ ಪೈಪೋಟಿ ನ್ಯಾಯಾಲಯದ ಮೆಟ್ಟಿಲೇರಿದೆ. ಇದಕ್ಕೆ ಕಾರಣ ಕರಗ ಹೊರುವ ಅರ್ಚಕರಿಗೆ ನೀಡುವ ದುಬಾರಿ ಗೌರವಧನ. ಇದರಿಂದ ಪ್ರತಿ ವರ್ಷ ಕರಗ ಹೊರುವ ಅರ್ಚಕ ಯಾರೆಂಬುದನ್ನು ನ್ಯಾಯಾಲಯವೇ ನಿರ್ಧರಿಸುತ್ತಿದೆ. ಮೂರು ವರ್ಷಗಳ ಹಿಂದೆ ಕೋರ್ಟ್ ಅನುಮತಿ ಮೇರೆಗೆ ಕರಗ ಹೊತ್ತಿದ್ದ ಅರ್ಚಕ, ಮಾರ್ಗಮಧ್ಯದಲ್ಲೇ ಕರಗ ಇಳಿಸಿದ್ದ ಪರಿಣಾಮ ವಿವಾದಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಕೋರ್ಟ್ ಅನುಮತಿ ಮೇರೆಗೆ ಜ್ಞಾನೇಂದ್ರ ಕರಗ ನಡೆಸಿಕೊಟ್ಟಿದ್ದಾರೆ. ಇದರಿಂದ ಅರ್ಚಕರ ನಡುವೆ ವೈಷಮ್ಯ ಉಂಟಾಗಿದೆ. ಇದೇ ಕಾರಣಕ್ಕೆ ಮೇಲೆ ದಾಳಿ ನಡೆದಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

    ಇದನ್ನೂ ಓದಿ: ಚುನಾವಣೆ ಹಿನ್ನೆಲೆ ವಾಹನ ತಪಾಸಣೆ ಮಾಡದೇ ಸುಮ್ಮನೆ ಕೂತಿರುವ ಪೊಲೀಸರ ಮೇಲೆ ಕಮಿಷನರ್ ಗರಂ!

    ಬಿಸಿಲಿಗೆ ಗಾಯವಾಗಿದೆ
    ಅಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಶ್ರೀಧರ್ಮರಾಯ ಸ್ವಾಮಿ ದೇವಾಲಯ ಸಮಿತಿ ಮುಖ್ಯಸ್ಥರು ವಿಜಯವಾಣಿಗೆ ತಿಳಿಸಿದರು. ಬೇಸಿಗೆ ಆಗಿರುವ ಕಾರಣ ಮತ್ತು ಭಕ್ತರು ಹರಕೆ ವಸ್ತುಗಳನ್ನು ಎಸೆದಿರುವ ಪರಿಣಾಮ ಜ್ಞಾನೇಂದ್ರ ಅವರಿಗೆ ಗಾಯ ಆಗಿರಬಹುದು. ಅಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಈ ವಿವಾದ ಸಂಬಂಧ ಸಮಿತಿಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

    ಮುಂದುವರಿದ ತನಿಖೆ
    ಸೈನೆಡ್ ಪೆಟಲ್ಸ್ ಎಂಬ ರಾಸಾಯನಿಕವನ್ನು ಆರೋಪಿ ಬಳಕೆ ಮಾಡಿದ್ದಾರೆ. ಈ ರಾಸಾಯನಿಕವನ್ನು ಬೆಳ್ಳಿ ಆಭರಣಗಳಿಗೆ ಬಳಸಲಾಗುತ್ತದೆ. ರಾಸಾಯನಿಕಗಳಿಂದ ಜ್ಞಾನೇಂದ್ರನ ಮೈ ಸುಟ್ಟರೆ ಕರಗ ಹೊರುವುದಿಲ್ಲ ಎಂಬುದು ಆತನ ಪ್ಲಾನ್​ ಆಗಿತ್ತು. ಕರಗ ಹೊರವುದನ್ನ ನಿಲ್ಲಿಸಿ, ಪೂಜಾರಿ ಕೆಲಸವನ್ನು ಜ್ಞಾನೇಂದ್ರನಿಂದ ಕಸಿದುಕೊಳ್ಳುವುದು ಆರೋಪಿಯ ಉದ್ದೇಶವಾಗಿತ್ತು. ಕರಗದ ವೇಳೆ ದಾಳಿ ಮಾಡಲು ಹಲವು ದಿನಗಳ ಹಿಂದಯೇ ಆರೋಪಿ ಪ್ಲಾನ್ ಮಾಡಿದ್ದ. ಈ ಪ್ರಕರಣದ ಹಿಂದೆ ಇನ್ನು ಯಾರು ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಹಲಸೂರು ಗೇಟ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

    ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

    ೯೦ರ ದಶಕದ ಪ್ರೇಮಕಥೆ ‘ವಿಷ್ಣು ಪ್ರಿಯಾ’; ಟೀಸರ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts