More

    ಬೆಂಗಳೂರು ಕಂಬಳ; ಟ್ರಾಫಿಕ್ ಪೊಲೀಸರಿಂದ ಪಾರ್ಕಿಂಗ್, ಎಂಟ್ರಿ–ಎಕ್ಸಿಟ್ ಮಾರ್ಗಸೂಚಿ…

    ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು  ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ.  ತುಳುನಾಡಿನ ಗಡಿಯನ್ನು ದಾಟಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ.  ಈಗಾಗಲೇ  ಕಂಭಳಕ್ಕೆ ಬರ್ಜರಿ ಸಿದ್ಧತೆ ನಡೆಸಲಾಗಿದೆ.  ಲಕ್ಷಾಂತರ ಮಂದಿ ಕಂಬಳದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ. ಕಂಬಳಕ್ಕೆ ಬರುವ ಹಾಗೂ ಬರದೆ ಇರುವ ಸಾರ್ವಜನಿಕರಿಗೂ ಸಂಚಾರದಟ್ಟಣೆ ಸಮಸ್ಯೆ ಉಂಟಾಗಬಹುದು ಎನ್ನುವುದನ್ನು  ಅರಿತು ಟ್ರಾಫಿಕ್ ಪೊಲೀಸರು ಈಗಾಗಲೇ ಕೆಲವು ಮಾರ್ಗ ಸೂಚಿಯನ್ನು ಹೊರಡಿಸಿದ್ದಾರೆ.

    ಬೆಂಗಳೂರಿನ ಅರಮನ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಕಂಬಳಕ್ಕೆ ತಯಾರಿಗಳು ನಡೆದಿವೆ. ತೆರೆದ ಆವರಣದಲ್ಲಿ 155 ಮೀಟರ್‌ ಗಟ್ಟಿ ಕರೆ ನಿರ್ಮಾಣಗೊಂಡಿದ್ದು, ಕೋಣಗಳಿಗೆ ಓಡಲು ಅತ್ಯಂತ ಸೂಕ್ತವಾಗಿದೆ ಎಂಬುದನ್ನು ಕೋಣಗಳನ್ನು ಸಾಂಕೇತಿಕವಾಗಿ ಓಡಿಸಲಾಗುತ್ತದೆ.

    ಕಂಬಳಕ್ಕೆ ಎಂಟ್ರಿ ಮಾರ್ಗ ಸೂಚಿ: 1) ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್.

    2) ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.

    3) ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ಪ್ರವೇಶ.

    4) ಕ್ಯಾಬ್​​ನಲ್ಲಿ ಬರುವವರಿಗೆ ಗೇಟ್ ನಂಬರ್ 2ಮೂಲಕ ಪ್ರವೇಶ.

    5) ಗೇಟ್ ನಂಬರ್ 3ಮೂಲಕ ಕ್ಯಾಬ್​ಗಳ ಎಕ್ಸಿಟ್​​ಗೆ ಸೂಚನೆ.

    6) ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.

    ಸಾವರ್ಜನಿಕರಿಗೆ ಮಾರ್ಗಸೂಚಿ:

    1) ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.

    2) ಅರಮನೆ ರಸ್ತೆ, ಬಿಡಿಎ ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್​ನಿಂದ ಹಳೇ ಉದಯ ಟಿವಿ ಜಂಕ್ಷನ್ ವರೆಗೆ ಎಮ್ ವಿ ಜಯರಾಂ ರಸ್ತೆ ಬಳಕೆಗೆ ಸೂಚನೆ‌‌.

    3) ಮೇಖ್ರಿ ಸರ್ಕಲ್​ನಿಂದ ಎಲ್​ಆರ್​​ಡಿಇ ಜಂಕ್ಷನ್ ವರೆಗೆ ಬಳ್ಳಾರಿ ರಸ್ತೆ ಬಳಸಲು ಸೂಚನೆ.

    4) ಬಾಳೆಕುಂದಿ ಸರ್ಕಲ್‌ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ವರೆಗೆ ಕನ್ನಿಂಗ್ ಹಾಮ್ ರೋಡ್ ಬಳಸಲು ಸೂಚನೆ.

    5) ಹಳೇ ಉದಯ ಟಿವಿ ಜಂಕ್ಷನ್​ನಿಂದ‌ ಎಲ್​​ಆರ್​​ಡಿ ಜಂಕ್ಷನ್ ವರೆಗೆ ಮಿಲ್ಲರ್ಸ್ ಜಂಕ್ಷನ್ ಬಳಸಲು ಸೂಚನೆ.

    6) ಜಯಮಹಲ್ ರಸ್ತೆ ಹಾಗೂ ಅರಮನೆ ರಸ್ತೆ ಸುತ್ತಮುತ್ತ ಸಂಚಾರ ಮಾಡುವವರು ಜಯಮಹಲ್ ರಸ್ತೆ ಬಳಕೆಗೆ ಅವಕಾಶ ನೀಡಲಾಗಿದೆ.

    ಪಾರ್ಕಿಂಗ್‌  ನಿಷೇಧಿತ ಸ್ಥಳಗಳು: ಪ್ಯಾಲೇಸ್ ರಸ್ತೆ, ಎಮ್​​ವಿ ಜಯರಾಂ ರಸ್ತೆ, ಸಿವಿ ರಾಮನ್ ರಸ್ತೆ, ವಸಂತ್ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳ ಬಾಳು ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿ ವಾಹನ ನಿಲುಗಡೆಗೆ ನಿರ್ಬಂಧವಿದೆ.

    ಆಹಾರ ಮತ್ತಿತರ ಮಳಿಗೆಗಳ 150 ಕೌಂಟರ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಹಣ ಕೊಟ್ಟು ಊಟ, ತಿಂಡಿಗಳನ್ನು ಸವಿಯಬಹುದು. 2 ಸಾವಿರ ಮಂದಿ ಕೂತು ವೀಕ್ಷಣೆ ಮಾಡುವಂತಹ ಗ್ಯಾಲರಿಯಿದೆ. 25 ರಿಂದ 30 ಸಾವಿರ ಜನರು ಏಕಕಾಲದಲ್ಲಿ ನಿಂತು ನೋಡುವ ವ್ಯವಸ್ಥೆಯಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ. ಅರಮನೆ ಮೈದಾನದ ಆವರಣದಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿದೆ. ಈಗಾಗಲೇ ಇರುವ ಶೌಚಾಲಯಗಳ ಜತೆಗೆ 12 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಕೋಣಗಳಿಗೆ ಟೆಂಟ್‌ಗಳನ್ನು ಹಾಕಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts