More

    ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ: ಮೊದಲ ದಿನವೇ ಭರ್ಜರಿ ಹೂಡಿಕೆ ಭರವಸೆ

    ಬೆಂಗಳೂರು: “ಬಿಲ್ಡ್​ ಫಾರ್​ ದಿ ವರ್ಲ್ಡ್​” ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ‘ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ ಮೊದಲ ದಿನವೇ ಭರ್ಜರಿ ಹೂಡಿಕೆ ಭರವಸೆ ಹರಿದುಬಂದಿದೆ.

    ಇಂದಿನಿಂದ ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ಜಗತ್ತಿನ ಖ್ಯಾತನಾಮ ಉದ್ಯಮಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅಂದಾಜು 7 ಲಕ್ಷ ಕೋಟಿ ರೂ. ಹೂಡಿಕೆಯಾಗುವ ಹಾಗೂ ಅಂದಾಜು 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

    ಮೊದಲ ದಿನವೇ ಅದಾನಿ ಪುತ್ರ ಕರಣ್ ಅದಾನಿಯಿಂದ 50 ಸಾವಿರ ಕೋಟಿ ರೂ. ಹೂಡಿಕೆ, ಸಜ್ಜನ್ ಜಿಂದಾಲ್ ರಿಂದ ಒಂದು ಲಕ್ಷ ಕೋಟಿ ರೂ., ವೇದಾಂತ್ ಗ್ರೂಪ್​ನ ಅಗರ್ವಾಲ್ ಒಂದು ಲಕ್ಷ ಕೋಟಿ ರೂ., ರಾಜನ್ ಭಾರತ್ ಮಿತ್ತಲ್ ಕಡೆಯಿಂದ 20 ಸಾವಿರ ಕೋಟಿ ರೂ. ಹೂಡಿಕೆಯನ್ನು ಘೋಷಿಸಿದ್ದಾರೆ.

    ಈ ಘೋಷಣೆಗಳು ಮುಂದಿನ ಐದರಿಂದ ಏಳು ವರ್ಷದಲ್ಲಿ ಹೂಡಿಕೆಯಾಗುತ್ತಿದೆ. ವಿಶೇಷ ಎಂದರೆ ಕರ್ನಾಟಕದಲ್ಲಿ ವಿಶ್ವದ ಅತಿದೊಡ್ಡ ಸ್ಟೀಲ್ ಪ್ಲಾಂಟ್ ಸ್ಥಾಪಿಸುತ್ತಿರುವುದಾಗಿ ಸಜ್ಜನ್ ಜಿಂದಾಲ್ ಘೋಷಿಸಿದರು.

    ಉಳಿದಂತೆ ಹಸಿರು ಇಂಧನ ಕ್ಷೇತ್ರಕ್ಕೆ 2.9 ಲಕ್ಷ ಕೋಟಿ ರೂ., ಬ್ಯಾಟರಿ ಕ್ಷೇತ್ರಕ್ಕೆ 47 ಸಾವಿರ ಕೋಟಿ, ಏರೋ ಸ್ಪೇಸ್, ಇ‌ ಮೊಬಿಲಿಟಿಗೆ 22906 ಕೋಟಿ ರೂ. ಹೂಡಿಕೆ ಸಂಬಂಧ ವಿವಿಧ ಒಡಂಬಡಿಕೆಯಲ್ಲಿ ನಡೆಯಿತು. ವಿಪ್ರೋ ಮುಖ್ಯಸ್ಥ ರಿಷದ್ ಪ್ರೇಮ್ ಜೀ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅವಕಾಶಗಳ ಬಗ್ಗೆ ತಿಳಿಸಿದರು.

    ಇಂದಿನಿಂದ 3 ದಿನ ಇನ್ವೆಸ್ಟ್​ ಕರ್ನಾಟಕ ಸಮಾವೇಶ: ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದ ರಾಜ್ಯ ಸರ್ಕಾರ

    ಇನ್ವೆಸ್ಟ್​ ಕರ್ನಾಟಕ ಸಮಾವೇಶಕ್ಕೆ ಪ್ರಧಾನಿ ಚಾಲನೆ: ಬ್ರ್ಯಾಂಡ್ ಬೆಂಗಳೂರು ಎಂದು ಕೊಂಡಾಡಿದ ಮೋದಿ

    VIDEO| ಪ್ರಾಣ ಪಣಕ್ಕಿಟ್ಟು ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಎದೆ ಝಲ್​ ಎನಿಸುವ ವಿಡಿಯೋ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts