More

    VIDEO| ಜನರಿಲ್ಲದ ಬೆಂಗಳೂರನ್ನು ಎಂದಾದರೂ ನೋಡಿದ್ದೀರಾ? ಡ್ರೋನ್​ ಕಣ್ಣಲ್ಲಿ ಸೆರೆಯಾಗಿದೆ ನೋಡಿ…

    ಬೆಂಗಳೂರು: ಸದಾ ಜನರಿಂದ ಗಿಜುಗುಡುತ್ತಿದ್ದ ಹಾಗೂ ಟ್ರಾಫಿಕ್​ ಜಾಮ್​ನಿಂದ ತುಂಬಿ ತುಳುಕುತ್ತಿದ್ದ ಸಿಲಿಕಾನ್​ ಸಿಟಿ ಕರೊನಾ ವೈರಸ್​ ಲಾಕ್​ಡೌನ್​ನಿಂದ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿದೆ. ಈ ಸಮಯದಲ್ಲಿ ಬೆಂದೆಕಾಳೂರು ಹೇಗೆ ಕಾಣುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದನ್ನು ನಗರ ಪೊಲೀಸ್​ ಇಲಾಖೆ ತಣಿಸಿದೆ.

    ಹೌದು, ಲಾಕ್​ಡೌನ್​ನಿಂದ ಜನರ ಒತ್ತಡವಿಲ್ಲದೇ ಶಾಂತವಾಗಿರುವ ನಗರದ ಪ್ರಸ್ತುತ ಸ್ಥಿತಿಯನ್ನು ನಗರ ಪೊಲೀಸರು ಡ್ರೋನ್​​ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಇಂತಹ ವಿಡಿಯೋ ಕಾಣಸಿಗುವುದು ಅಪರೂಪದಲ್ಲಿ ಅತಿ ಅಪರೂಪವಾಗಿದೆ.

    ಇದನ್ನೂ ಓದಿ: ಇನ್ನೆಷ್ಟು ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತೆ ಕರ್ನಾಟಕ? ಕಾರ್ಮಿಕರಿಗೆ ಯಾವತ್ತಿನಿಂದ ಸಿಗುತ್ತೆ ಕೆಲಸ?

    ವಿಡಿಯೋದಲ್ಲಿ ಏನಿದೆ?
    ನಾಡಪ್ರಭು ಕೆಂಪೇಗೌಡರಿಂದ 1537ರಲ್ಲಿ ಸ್ಥಾಪಿತಗೊಂಡ ಬೆಂಗಳೂರು ಬರೋಬ್ಬರಿ 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮಹಾನಗರ. 24 ಗಂಟೆಯೂ ಸಕ್ರೀಯವಾಗಿರುವ ನಗರ ಮಾರ್ಚ್​ 23ರಿಂದ ಕರೊನಾ ಲಾಕ್​ಡೌನ್​​ನಿಂದ ಸ್ತಬ್ಧವಾಗಿದೆ ಎಂಬ ಮಾಹಿತಿಯೊಂದಿಗೆ ಆರಂಭವಾಗುವ 4.9 ನಿಮಿಷದ ವಿಡಿಯೋದಲ್ಲಿ ಬೆಂಗಳೂರಿನ ಟ್ರಾಫಿಕ್​ ಜಾಮ್​ ಹಾಗೂ ಜನಸಂದಣಿಯ ಮೊದಲಿನ ಸ್ಥಿತಿಯನ್ನು ತೋರಿಸಿ, ಲಾಕ್​ಡೌನ್ ಸಮಯದಲ್ಲಿ ವಿಧಾನಸೌಧ, ಮಾರುಕಟ್ಟೆ, ಬೆಂಗಳೂರು ಅರಮನೆ, ಮೆಜೆಸ್ಟಿಕ್​, ರೈಲ್ವೆ ನಿಲ್ದಾಣ, ಜಾಮೀಯ ಮಸೀದಿ, ಎಲೆಕ್ಟ್ರಾನಿಕ್​ ಸಿಟಿಯ ಎಕ್ಸ್​ಪ್ರೆಸ್ ವೇ, ಸಿಲ್ಕ್​ ಬೋರ್ಡ್​ ಜಂಕ್ಸನ್​, ಬ್ರಿಗೇಡ್ ರಸ್ತೆ, ಹೆಬ್ಬಾಳ್​ ಫ್ಲೈ ಓವರ್, ಕೆಂಪೇಗೌಡ ಬಸ್​ ಟರ್ಮಿನಲ್​, ವಿಕಾಸಸೌಧ, ವಿಧಾನಸೌಧ, ಲಾಲ್​ಬಾಗ್​, ರಾಜ್ಯ ಕೇಂದ್ರ ಲೈಬ್ರರಿ, ಚಿನ್ನಸ್ವಾಮಿ ಸ್ಟೇಡಿಯಂ, ಅಶೋಕ ಪಿಲ್ಲರ್​, ಇಸ್ಕಾನ್​ ದೇವಸ್ಥಾನ, ವಿಕ್ಟೋರಿಯಾ ಆಸ್ಪತ್ರೆ, ಯುಟಿಲಿಟಿ ಬಿಲ್ಡಿಂಗ್​, ಎಂ.ಜಿ.ರಸ್ತೆ, ಪೊಲೀಸ್​ ಆಯುಕ್ತರ ಕಚೇರಿ, ಶ್ರೀ ಸರ್ಕಲ್​ ಮಾರಮ್ಮ ದೇವಸ್ಥಾನ, ರೇಸ್​ ಕೊರ್ಸ್​, ನೈಸ್​ ರಸ್ತೆ, ಟಿನ್​ ಫ್ಯಾಕ್ಟರಿ ಜಂಕ್ಸನ್​ ಹಾಗೂ ಹಲಸೂರು ಕೆರೆ ಸೇರಿದಂತೆ ನಗದ ಪ್ರಮುಖ ಸ್ಥಳಗಳ ಹೇಗೆ ಸ್ತಬ್ಧವಾಗಿವೆ ಎಂಬುದನ್ನು ಡ್ರೋನ್​ ಕ್ಯಾಮರಾದಲ್ಲಿ ಮನಮೋಹಕವಾಗಿ ಕಟ್ಟಿಕೊಡಲಾಗಿದೆ.

    ಇದನ್ನೂ ಓದಿ: ಮೇ 3ರ ನಂತರವಾದರೂ ಮದ್ಯದಂಗಡಿ ಓಪನ್​ ಆಗುತ್ತಾ? ಸಿಎಂ ಏನು ಹೇಳ್ತಾರೆ?

    ನಗರ ಪೊಲೀಸರು ವಿಡಿಯೋವನ್ನು ಹರಿಬಿಟ್ಟಿದ್ದು ಯೂಟ್ಯೂಬ್​ನಲ್ಲಿ ಹರಿಬಿಟ್ಟಿದ್ದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಗರವು ಮುಕ್ತವಾಗಿ ಉಸಿರಾಡುತ್ತಿದೆ. ನೀವು ಮನೆಯಲ್ಲೇ ಉಳಿದು ಮಹಾಮಾರಿ ಕರೊನಾ ವಿರುದ್ಧ ಹೋರಾಡಿ ಎಂದು ಸಂದೇಶವನ್ನು ಸಾರಿದ್ದಾರೆ.

    ಜನರಿಲ್ಲದ ಬೆಂಗಳೂರನ್ನು ಎಂದಾದರೂ ನೋಡಿದ್ದೀರಾ? ಡ್ರೋನ್​ ಕಣ್ಣಲ್ಲಿ ಸೆರೆಯಾಗಿದೆ ನೋಡಿ…

    ಬೆಂಗಳೂರು: ಸದಾ ಜನರಿಂದ ಗಿಜುಗುಡುತ್ತಿದ್ದ ಹಾಗೂ ಟ್ರಾಫಿಕ್​ ಜಾಮ್​ನಿಂದ ತುಂಬಿ ತುಳುಕುತ್ತಿದ್ದ ಸಿಲಿಕಾನ್​ ಸಿಟಿ ಕರೊನಾ ವೈರಸ್​ ಲಾಕ್​ಡೌನ್​ನಿಂದ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿದೆ. ಈ ಸಮಯದಲ್ಲಿ ಬೆಂದೆಕಾಳೂರು ಹೇಗೆ ಕಾಣುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದನ್ನು ನಗರ ಪೊಲೀಸ್​ ಇಲಾಖೆ ತಣಿಸಿದೆ.#Bengaluru #Coronavirus #Lockdown #BengaluruCityPolice

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 30, 2020

    VIDEO| ಇಡೀ ಜಿಂಕೆಯ ದೇಹವನ್ನೇ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts