More

    ಸತತ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಜೇಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಕೆ

    ಬೆಂಗಳೂರು: ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಯಶಸ್ವಿಯಾದ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 5ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿತು. ಭಾನುವಾರ ನಡೆದ ಪಂದ್ಯದಲ್ಲಿ ಪವನ್ ಶೇರಾವತ್ ಪಡೆ 40-29 ಅಂಕಗಳಿಂದ ಪುಣೇರಿ ಪಲ್ಟಾನ್ ತಂಡವನ್ನು ಸೋಲಿಸಿತು. ಕಡೇ ಪಂದ್ಯದಲ್ಲಿ ಟೈಗೆ ತೃಪ್ತಿಪಟ್ಟುಕೊಂಡಿದ್ದ ಬುಲ್ಸ್ ತಂಡ ಗೆಲುವಿನ ಹಳಿಗೇರುವುದರ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರಂಭಿಕ ಹಂತದಲ್ಲಿ ಹಿನ್ನಡೆ ಕಂಡ ಬುಲ್ಸ್ 15ನೇ ನಿಮಿಷದಲ್ಲಿ ಆಲೌಟ್ ಆದ ಪರಿಣಾಮ ಮೊದಲಾರ್ಧದಲ್ಲಿ 13-18 ರಿಂದ ಹಿನ್ನಡೆ ಕಂಡಿತು. 25ನೇ ನಿಮಿಷದಲ್ಲಿ 19-19 ರಿಂದ ಸಮಬಲ ಸಾಧಿಸಿದ ಬುಲ್ಸ್ ತಂಡ ಸತತವಾಗಿ ಪುಣೇರಿ ತಂಡಕ್ಕೆ ಕಡಿವಾಣ ಹೇರುವ ಮೂಲಕ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಎರಡು ಬಾರಿ ಆಲೌಟ್ ಮಾಡುವ ಮೂಲಕ ಅಂಕಗಳ ಅಂತರವನ್ನು ಹಿಗ್ಗಿಸಿಕೊಂಡಿತು.

    * ಹರಿಯಾಣ ತಂಡಕ್ಕೆ ರೋಚಕ ಜಯ
    ದಿನದ ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡ 38-36 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಹರಿಯಾಣ 22-10 ರಿಂದ ಮುನ್ನಡೆ ಸಾಧಿಸಿದರೂ ಬಳಿಕ ಗುಜರಾತ್ ಅಬ್ಬರದ ಎದುರು ಮಂಕಾಯಿತು. ಕಡೇ ಎರಡೂ ನಿಮಿಷಗಳ ಹಣಾಹಣಿಯಲ್ಲಿ ತಿರುಗೇಟು ನೀಡಿದ ಹರಿಯಾಣ ಗೆಲುವಿನ ದಡ ಸೇರಿತು.

    ಇಂದಿನ ಪಂದ್ಯಗಳು
    ಬೆಂಗಾಲ್ ವಾರಿಯರ್ಸ್‌-ಜೈಪುರ ಪಿಂಕ್ ಪ್ಯಾಂಥರ್ಸ್‌
    ಆರಂಭ: ರಾತ್ರಿ7.30
    ತೆಲುಗು ಟೈಟಾನ್ಸ್-ಪಟನಾ ಪೈರೇಟ್ಸ್
    ಆರಂಭ: ರಾತ್ರಿ 8.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts