More

    ನಾವು ಬಸ್ ಓಡಿಸಲ್ಲ, ನೀವೆ ಓಡಿಸಿ! ಬಿಎಂಟಿಸಿ ಮತ್ತು ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ

    ಬೆಂಗಳೂರು: ಸರ್ಕಾರಿ ಸಾರಿಗೆ ನೌಕರರ ಪ್ರತಿಭಟನೆ ಆರಂಭವಾದಾಗಿನಿಂದ ಒಂದಲ್ಲ ಒಂದು ಗದ್ದಲ ಗಲಾಟೆಗಳು ನಡೆಯುತ್ತಲೇ ಇದೆ. ಇದೀಗ ಬಿಎಂಟಿಸಿ ಮತ್ತು ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ

    ಬಿಎಂಟಿಸಿ ಬಸ್ ಬಂದಿದ್ದೆ ತಡ ಪ್ರಯಾಣಿಕರು ಓಡೋಡಿ ಬಂದು ಬಸ್ ಹತ್ತುವುದನ್ನು ನೋಡಿದ ಖಾಸಗಿ ಬಸ್​ ಚಾಲಕರು ಮತ್ತು ಕಂಡಕ್ಟರ್​ಗಳು ಸರ್ಕಾರಿ ಸಾರಿಗೆ ನೌಕರರ ಜತೆಗೆ ಜಗಳ ತೆಗೆದರು.

    ಬಿಎಂಟಿಸಿ ಬಸ್​ಗಳಿಗೆ ಪ್ರಯಾಣಿಕರನ್ನು ಹತ್ತಿಸಿದಕ್ಕೆ ಖಾಸಗಿ ಬಸ್​ನವರು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಹತ್ತು ದಿನದಿಂದ ಇಲ್ಲದೆ ಈಗ ಬಂದು ಜನರನ್ನು ಹತ್ತಿಸಿಕೊಳ್ಳುತ್ತಿದ್ದಾರೆಂದು ಖಾಸಗಿ ಬಸ್ ಚಾಲಕ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡ್ತಿದ್ದೀವಿ ನಿನ್ಯಾರೋ ಕೇಳುವುದಕ್ಕೆ ಎಂದು ಸರ್ಕಾರಿ ನೌಕರ ಗದರಿದ್ದಾರೆ.

    ಸರ್ಕಾರದ ಸಂಬಳ ಪಡೆದು ಇಷ್ಟು ದಿ‌ನ ಪ್ರಯಾಣಿಕರಿಗೆ ತೊಂದರೆ ಕೊಟ್ಟು ಈಗ ಬಂದು ಗಲಾಟೆ ಮಾಡ್ತಿದ್ದೀರಾ ಎಂದು ಖಾಸಗಿ ಚಾಲಕ ಪ್ರಶ್ನಿಸಿದ್ದಾರೆ. ಹೀಗಾಗಿ ಕೆಲ ಕಾಲ ಮೆಜಿಸ್ಟಿಕ್​ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

    ಇದನ್ನೂ ಓದಿರಿ: ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತ

    ಬಿಎಂಟಿಸಿ ನೌಕರರು ಮೆಜೆಸ್ಟಿಕ್ ಹೊರ ಭಾಗದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಸದ್ಯ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್​ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಬಿಎಂಟಿಸಿ ಬಸ್​ಗಳು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಒಳಗೆ ಎಂಟ್ರಿ ಕೊಡದೆ ಹೊರ ಭಾಗದಲ್ಲಿರುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದೆ. ಹೀಗಾಗಿ ಖಾಸಗಿ ಚಾಲಕರು ಬಿಎಂಟಿಸಿ ಬಸ್ ತಡೆದು ಆಕ್ರೋಶ ಹೊರಹಾಕಿದ್ದಾರೆ.

    ಘಟನಾ ಸ್ಥಳಕ್ಕೆ ಬಂದ ಪೋಲಿಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ನಾವು ಬಸ್ ಓಡಿಸಲ್ಲ, ನೀವೆ ಓಡಿಸಿ ಎಂದು ವಾಪಸ್ ಹೋಗಲು ಖಾಸಗಿ ಚಾಲಕರು ಮುಂದಾಗಿದ್ದಾರೆ. ಸದ್ಯ ಬೆಂಗಳೂರು, ರಾಯಚೂರು ಸೇರಿದಂತೆ ಹಲವೆಡೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ.

    ಬಾಲ್ಕನಿಯಲ್ಲಿ ಬೆತ್ತಲಾದ ಮಾಡೆಲ್​ಗಳಿಗೆ​ ಶಾಕ್​ ಕೊಟ್ಟ ದುಬೈ: ಮುಂದಿನ 5 ವರ್ಷ ಈ ಷರತ್ತು ಅನ್ವಯ!

    ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ತಮಿಳು ನಟಿ ರಾಧಾ ದೂರು: ಗುಟ್ಟು ರಟ್ಟಾಯ್ತು, ನಟಿ ಬಾಳಲ್ಲಿ ಮತ್ತೆ ಬಿರುಗಾಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts