ಆಪರೇಷನ್​ ಚಿರತೆ; ಅರವಿಳಿಕೆ ವೈದ್ಯರ ಮೇಲೆ ದಾಳಿ ನಡೆಸಿ ಪರಾರಿ

leopard
Published on

ಬೆಂಗಳೂರು: ಆನೇಕಲ್ ಪ್ರಾಂತ್ಯದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನ ವಿಫಲವಾಗಿದೆ. ಚಿರತೆ ಸೆರೆ ಹಿಡಿಯುವ ವೇಳೆ ಅರವಳಿಕೆ ವೈದ್ಯ ಕಿರಣ್ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.

ಆನೇಕಲ್  ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿರುವ ಪಾಳು ಕಟ್ಟಡವೊಂದರಲ್ಲಿ ಚಿರತೆ ಸೇರಿಕೊಂಡಿದೆ ಎಂಬ ಮಾಹಿತಿಯನ್ನಾಧರಿಸಿ ಅರಣ್ಯ ಇಲಾಖೆ ಅ. 31ರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದೆ. ಚಿರತೆ ಪಾಳುಬಿದ್ದ ಕಟ್ಟಡದ ಬೇಸ್​​ಮೆಂಟ್​​ನಲ್ಲಿ ಇರುವುದು ಗೊತ್ತಾಗಿದೆ.  ಅರವಳಿಕೆ ಇಂಜೆಕ್ಷನ್​ ನೀಡಿದ್ದರು, ಚಿರತೆ ಸೆರೆ ವಿಳಂಭವಾಗುತ್ತಿದೆ.

ಅರಣ್ಯಾಧಿಕಾರಿಗಳ ತಂಡದಲ್ಲಿದ್ದ ಅರವಿಳಿಕೆ ತಜ್ಞರಾದ ಡಾ. ಕಿರಣ್ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು ಅವರ ಕತ್ತಿಗೆ ಗಾಯವಾಗಿದೆ. ಶಾರ್ಪ್ ಶೂಟರ್​​ ಧನರಾಜ್​ ಅವರಿಗೂ ಗಾಯವಾಗಿದೆ.  ಸದ್ಯಕ್ಕೆ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net