More

    ರಾತ್ರಿಯಿಂದ ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಜನರ ಪರದಾಟ

    ಬೆಂಗಳೂರು: ಜನತೆಯ ಪಾಲಿಗೆ ತುರ್ತುಪರಿಸ್ಥಿತಿಯ ಆಪದ್ಬಾಂಧವ ಎನಿಸಿಕೊಂಡಿರುವ ಆ್ಯಂಬುಲೆನ್ಸ್​ ಸೇವೆಯು ರಾಜ್ಯಾದ್ಯಂತ ನಿನ್ನೆ (ಸೆ.24) ರಾತ್ರಿಯಿಂದಲೇ ಸೇವೆ ಸ್ಥಗಿತಗೊಳಿಸಿದ್ದು, ಜನರು ಪರದಾಡುವಂತಾಗಿದೆ.

    ಇದು ಆರೋಗ್ಯ ಇಲಾಖೆ ಸೇವೆಯಲ್ಲಿನ ಮಹಾ ಲೋಪವಾಗಿದೆ. ಸಹಾಯವಾಣಿ ನಂಬರ್​ 108ಕ್ಕೆ ಕರೆ ಮಾಡಿದರೂ ಕೂಡ ಯಾರೂ ಕರೆ ಸ್ವೀಕರಿಸುತ್ತಿಲ್ಲ. ಏನಾಗಿದೆ ಎಂಬುದು ಜನರಿಗೂ ಸಹ ತಿಳಿಯುತ್ತಿಲ್ಲ. ಎಷ್ಟೇ ಕರೆ ಮಾಡಿದರೂ ರಿಂಗ್​ ಆಗುತ್ತದೆಯೇ ಹೊರತು ಯಾವುದೇ ಉತ್ತರ ಬರುತ್ತಿಲ್ಲ. ಇದರಿಂದಾಗಿ ತುರ್ತು ಸಮಯದಲ್ಲಿ ಆ್ಯಂಬುಲೆನ್ಸ್​ ಸಿಗದೆ ಜನರು ಪರದಾಡುತ್ತಿದ್ದಾರೆ.

    GVK ಏಜೆನ್ಸಿಯು ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ನಡೆಸುತ್ತಿದೆ. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ ತಾಂತ್ರಿಕ ದೋಷದಿಂದ ತುರ್ತು ಸೇವೆ ಬಂದ್ ಆಗಿದೆ. ಇತ್ತ ತುರ್ತು ಸೇವೆ ವ್ಯತ್ಯಯ ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ಧೋರಣೆ ಹೊಂದಿದೆ. ರಾಜ್ಯಾದ್ಯಂತ ಆ್ಯಂಬುಲೆನ್ಸ್ ತುರ್ತು ಸೇವೆ ಬಂದ್ ಆಗಿದ್ದರೂ ಅದನ್ನು ಆದಷ್ಟು ಬೇಗ ಬಗೆಹರಿಸುವ ಪ್ರಯತ್ನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. 108ಕ್ಕೆ ನಿತ್ಯವೂ ಸುಮಾರು 20 ಸಾವಿರ ಕರೆ ಬರುತ್ತೆ. ಆದರೆ, ಈಗ ಕರೆ ಬಂದ್ರು ಕೂಡ 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ವೀಕರಿಸುತ್ತಿಲ್ಲ.

    ಭಾನುವಾರ ರಜೆ ದಿನ ಹಿನ್ನೆಲೆ ಆರೋಗ್ಯ ಸಿಬ್ಬಂದಿ ತಾಂತ್ರಿಕ ದೋಷವನ್ನು ಸರಿಪಡಿಸುತ್ತಿಲ್ಲ. ರೋಗಿಗಳು ಪರದಾಡುತ್ತಿದ್ರೂ ಸಮಸ್ಯೆ ಸರಿಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿನ್ನೆಯಿಂದ ಬಂದಿರುವ ಒಟ್ಟು 8000 ಕರೆಗಳಲ್ಲಿ 2000 ಸಾವಿರ ಕರೆಗಳು ಗಂಭೀರ ಕರೆಗಳು ಎಂದು ಪರಿಗಣಿಸಲಾಗಿದೆ.

    ತಕ್ಷಣಕ್ಕೆ ಆರಂಭಕ್ಕೆ ಸೂಚನೆ
    108 ಆ್ಯಂಬುಲೆನ್ಸ್ ಸೇವೆ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಇಲಾಖೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಸೇವೆಯನ್ನು ತಕ್ಷಣ ಆರಂಭಿಸುವಂತೆ ಸೂಚನೆ ನೀಡುತ್ತೇನೆ. ಈಗ ಆರೋಗ್ಯ ಸಚಿವರು ಸಹ ಸಿಗುತ್ತಾರೆ. ಅವರಿಗೂ ಸೂಚನೆ ಕೊಡ್ತೀನಿ ಎಂದು ಹೇಳಿದರು.

    ಮಾನಿಟರ್​​ ಮಾಡಲು ಆಗುತ್ತಿಲ್ಲ
    ಜಿವಿಕೆ ರಾಜ್ಯ ಮುಖ್ಯಸ್ಥ ಹನುಮಂತಪ್ಪ ಆರ್. ಜಿ. ಮಾತನಾಡಿ, ಸರ್ವರ್​ನ ಸಾಫ್ಟವೇರ್, ಹಾರ್ಡ್​ವೇರ್ ಹೋಗಿದೆ. ಹೀಗಾಗಿ ಸಾರ್ವಜನಿಕ ಕರೆಯನ್ನು ಮಾನಿಟರ್ ಮಾಡಲು ಸಾಧ್ಯವಾಗುತ್ತಿಲ್ಲ. ಸಾಫ್ಟ್​ವೇರ್ ಸಮಸ್ಯೆಗಳಿಂದ ಮಾನಿಟರ್ ಸಿಸ್ಟಮ್ ಕೆಲಸ ಮಾಡ್ತಿಲ್ಲ. ಕೇವಲ ಕರೆಯನ್ನು ಸ್ವೀಕಾರ ಮಾಡುತ್ತಿದ್ದೇವೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಚೆನ್ನೈನಿಂದ ಸರ್ವರ್ ಹಾರ್ಡ್​ವೇರ್​ಗೆ ಕಾಯುತ್ತಿದ್ದೇವೆ. ಬಂದ ಬಳಿಕ ಟೆಕ್ನಿಕಲ್ ಸಮಸ್ಯೆ ಪರಿಹಾರ ಆಗಲಿದೆ. ತುರ್ತು ಸಂದರ್ಭಕ್ಕಾಗಿ 112 ಕ್ಕೆ ಕರೆ ಮಾಡಬಹುದು. ಅಲ್ಲಿಂದ ಆ್ಯಂಬುಲೆನ್ಸ್ ಸೇವೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಗಂಟೆಗೆ 500 ಕರೆಗಳು ಬರ್ತಾಯಿದೆ. ಇದರಲ್ಲಿ ತುಂಬಾ ತುರ್ತು ಇರುವ ಕರೆಗಳು 100-150 ಬರ್ತಿವೆ. ಸಾರ್ವಜನಿಕ ಕರೆಯನ್ನು ಸ್ವೀಕರಿಸುತ್ತಿದ್ದು 108 ಕರೆ ಕೇಂದ್ರ ಚಾಲ್ತಿಯಲ್ಲಿ ಇದೆ ಎಂದು ತಿಳಿಸಿದ್ದಾರೆ.

    ಖಾಸಗಿ ಆ್ಯಂಬುಲೆನ್ಸ್​ಗಳಿಗೆ ಹಬ್ಬ
    ಸರ್ಕಾರಿ ಆ್ಯಂಬುಲೆನ್ಸ್​ ಸೇವೆ ಸ್ಥಗಿತವಾಗಿರುವುದರಿಂದ ಖಾಸಗಿ ಆ್ಯಂಬುಲೆನ್ಸ್​ಗಳಿಗೆ ಭಾರಿ ಬೇಡಿಕೆ ಬಂದಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆ್ಯಂಬುಲೆನ್ಸ್​ಗಳು ಜನರಿಂದ ದುಪ್ಪಟ್ಟು ಹಣವನ್ನು ದೋಚುತ್ತಿದ್ದಾರೆಂದು ತಿಳಿದುಬಂದಿದೆ.

    ಯಾವನೋ-ಗೀವನೋ ಅಂದ್ರೆ ಸರಿಯಿರಲ್ಲ… ನಾಲಿಗೆ ಹರಿಬಿಟ್ಟ ನಲಪಾಡ್​ಗೆ ರೈತನ ಖಡಕ್ ಎಚ್ಚರಿಕೆ​

    ಅಪಘಾತದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ ಮೃತ್ಯು: ಸಾವಲ್ಲೂ ಸಾರ್ಥಕತೆ ಮೆರೆದ ಪ್ರತಿಭಾವಂತ

    ನೈಸರ್ಗಿಕ ಮೌತ್​ ಫ್ರೆಶ್ನರ್​ಗಳ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಒಮ್ಮೆ ಇಲ್ಲಿ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts