More

    ಬಂಗಾಳದಲ್ಲಿ ಬಂಗಾಳಿಗಳ ಆಡಳಿತವಿರಬೇಕೆ ಹೊರತು ಗುಜರಾತಿಗಳದ್ದಲ್ಲ…!

    ಕೋಲ್ಕತ್ತ: ಬೇರೆ ಪಕ್ಷಗಳ ಆಡಳಿತದಲ್ಲಿರುವ ಸರ್ಕಾರಗಳನ್ನು ಅಸ್ಥಿರಗೊಳಿಸುವುದು ಹಾಗೂ ಇದಕ್ಕಾಗಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ.

    1993ರಲ್ಲಿ 13 ಜನರು ಪೊಲೀಸರ ಗುಂಡಿಗೆ ಬಲಿಯಾದ ದಿನದ ನೆನಪಿಗಾಗಿ ನಡೆಸಲಾಗುವ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ವರ್ಚುವಲ್​ ರ್ಯಾಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದೆಲ್ಲೆಡೆ ಕೇಂದ್ರ ಸರ್ಕಾರ ಆತಂಕದ ವಾತಾವರಣವನ್ನು ನಿರ್ಮಿಸಿದೆ. ಹೀಗಾಗಿ ಸರ್ಕಾರದ ವಿರುದ್ಧ ಮಾತನಾಡಲು ಜನರು ಭಯಪಡುತ್ತಿದ್ದಾರೆ ಎಂದರು.

    ಅಧಿಕಾರಕ್ಕಾಗಿ ಬಿಜೆಪಿ ತಹತಹಿಸುತ್ತಿದೆ. ಮಧ್ಯಪ್ರದೇಶದ ಬಳಿಕ ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಲ್ಲೂ ಸರ್ಕಾರ ಅಸ್ಥಿರಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ಆದರೆ, ಇದಕ್ಕೆ ತೃಣಮೂಲ ಕಾಂಗ್ರೆಸ್​ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.

    ಇದನ್ನೂ ಓದಿ; ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​..! 

    ಅಧಿಕಾರಕ್ಕಾಗಿ ಅವರು ಇಷ್ಟೆಲ್ಲ ಕೀಳು ರಾಜಕಾರಣ ಮಾಡುವುದಾದರೆ, ಚುನಾವಣೆಯಾದರೂ ಏಕೆ ಬೇಕು? ಕರಾಳ ಕಾನೂನನ್ನು ಜಾರಿಗೊಳಿಸಲಿ, ಎಲ್ಲ ರಾಜ್ಯಗಳಲ್ಲೂ ರಾಷ್ಟ್ರಪತಿ ಆಳ್ವಿಕೆ ಘೋಷಿಸಲಿ. ಒಂದು ದೇಶ ಒಂದು ರಾಜಕೀಯ ಪಕ್ಷ ಎಂಬ ಸೂತ್ರವನ್ನೇ ಅನುಷ್ಠಾನಗೊಳಿಸಲಿಎಂದು ಸವಾಲು ಹಾಕಿದರು.

    ಬಿಜೆಪಿ ಪ್ರತಿದಿನ ತನ್ನನ್ನು ಅವಮಾನಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇನೆ. ಹೊರಗಿನವರನ್ನು ಬಂಗಾಳವನ್ನು ಆಳಲು ಬಿಡುವುದಿಲ್ಲ. ಬಂಗಾಳದ ಆಡಳಿತವನ್ನು ಬಂಗಾಳಿಗಳೇ ನಡೆಸಬೇಕೇ ಹೊರತು ಗುಜರಾತಿಗಳಲ್ಲ ಎಂದು ಕಿಡಿ ಕಾರಿದರು.

    ಇದನ್ನೂ ಓದಿ; ಅಂತಿಮ ಪರೀಕ್ಷೆ ಬೇಕಿಲ್ಲ; ಸುಪ್ರೀಂಕೋರ್ಟ್​ ಮೊರೆ ಹೋಗಿದ್ಯಾರು? ದೇಶಾದ್ಯಂತ ರದ್ದಾಗುತ್ತಾ ಎಕ್ಸಾಂ?

    ಕೋವಿಡ್​ ಸಂಕಷ್ಟದ ಕಾಲ ಇದಾಗಿದ್ದು, ಜನರು ಸಿಎಎ ಹಾಗೂ ಎನ್​ಆರ್​ಸಿಗಳಿಂದ ಅನುಭವಿಸಿದ ಕಷ್ಟ ಮರೆತಿಲ್ಲ. ರಾಜಕೀಯ ಅನುಭವವೇ ಇಲ್ಲದ ಜನರು ಬಂಗಾಳದ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

    ttps://www.vijayavani.net/sii-will-start-clinical-trial-of-oxford-vaccine/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts