More

    ಬಂಗಾಳ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಜಿಗೆ ಕರೊನಾ ಚಿಕಿತ್ಸೆ

    ಕೊಲ್ಕತ : ಕರೊನಾ ಸೋಂಕು ದೃಢಪಟ್ಟ ನಂತರ ಕೊಲ್ಕತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ, ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದು, ಸ್ವಲ್ಪ ನಿದ್ರೆಯ ಮಂಪರಿನಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    77 ವರ್ಷದ ಭಟ್ಟಾಚಾರ್ಜಿ ಅವರಿಗೆ ಮೇ 18 ರಂದು ಕೋವಿಡ್ ಪಾಸಿಟೀವ್ ಬಂದಿತ್ತು. “ಶ್ರೀ ಭಟ್ಟಾಚಾರ್ಜಿ ಸ್ಥಿರವಾಗಿದ್ದಾರೆ. ಆದಾಗ್ಯೂ, ಅವರು ಅರೆನಿದ್ರಾವಸ್ಥೆ ಮತ್ತು ಉಸಿರಾಟದ ತೊಂದರೆ ಹೊಂದಿದ್ದಾರೆ. 3 ಲೀಟರ್ ಆಮ್ಲಜನಕದ ಮಧ್ಯಂತರ ಬೈಪಾಪ್​​ ಚಿಕಿತ್ಸೆಯಲ್ಲಿದ್ದಾರೆ. ಅವರ ಆಕ್ಸಿಜನ್ ಸ್ಯಾಚುರೇಷನ್ ಶೇ.92 ರಷ್ಟಿದೆ. ಸ್ವಲ್ಪ ಒಣಕೆಮ್ಮು ಕಂಡುಬರುತ್ತಿದೆ” ಎಂದು ಆಸ್ಪತ್ರೆ ಹೇಳಿಕೆ ನೀಡಿದೆ. ರೆಮ್​ಡೆಸಿವಿರ್​ ಚುಚ್ಚುಮದ್ದಿನೊಂದಿಗೆ ಅನ್ಯ ಪೂರಕ ಔಷಧಿಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ

    ಭಟ್ಟಾಚಾರ್ಜಿ ಅವರ ಪತ್ನಿ ಮೀರಾ ಅವರಿಗೂ ಕರೊನಾ ಸೋಂಕು ತಗುಲಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಕೆಲವು ದಿನಗಳ ನಂತರ ಪ್ಯಾನಿಕ್​ ಅಟ್ಯಾಕ್​ ಆದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಈಗ ಅವರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿ ಜೂನ್​ 7 ಕ್ಕೂ ಮುಂದಕ್ಕೆ ಲಾಕ್ಡೌನ್ ವಿಸ್ತರಣೆ ? ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು ?

    ರೆಮ್​ಡೆಸಿವಿರ್​ ಚುಚ್ಚುಮದ್ದು : ಬೇಡಿಕೆಗಿಂತ ಹೆಚ್ಚಿದ ಪೂರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts