More

    ಕರೊನಾ ಮಣಿಸಲು ಸಾಸಿವೆ ಎಣ್ಣೆ ಅದ್ಭುತ ಮದ್ದು; ಪೊಲೀಸರು ಕಂಡುಕೊಂಡ ಔಷಧಿ ಇದು…

    ಕೋಲ್ಕತ್ತ: ದೇಶಾದ್ಯಂತ ಕರೊನಾ ಮಹಾಮಾರಿ ಹೆಚ್ಚುತ್ತಿದೆ. ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಿಗಂತೂ ವೈರಸ್​​​ನಿಂದ ಪಾರಾಗುವುದೇ ದೊಡ್ಡ ಸವಾಲಾಗಿದೆ.

    ಮಹಾರಾಷ್ಟ್ರ, ಕರ್ನಾಟಕದಲ್ಲಿ ಹಲವು ಪೊಲೀಸ್​ ಸಿಬ್ಬಂದಿ ಸೋಂಕಿನಿಂದ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಖಾಕಿ ಪಡೆಯಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಕೆಲವು ಪೊಲೀಸರು ಕರೊನಾ ವಿರುದ್ಧ ಹೋರಾಟಕ್ಕೆ ಒಂದು ಹೊಸದಾರಿಯನ್ನೇ ಕಂಡುಕೊಂಡಿದ್ದಾರೆ.

    ವೆಸ್ಟ್​ಬೆಂಗಾಲ್​ ಪೊಲೀಸ್​ ಸಿಬ್ಬಂದಿ ಕೊವಿಡ್​-19 ಸೋಂಕನ್ನು ಮಣಿಸಲು ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಸಾಸಿವೆ ಎಣ್ಣೆಯ ಬಳಕೆ, ಲಿಂಬೆಹಣ್ಣಿನ ರಸ ಮಿಶ್ರಿತ ಬಿಸಿ ನೀರು ಕುಡಿಯುವುದರಿಂದ ಕರೊನಾ ಸೋಂಕಿನಿಂದ ಗುಣಮುಖರಾಗಬಹುದು. ವೈರಸ್​​ ವಿರುದ್ಧ ಚಿಕಿತ್ಸೆಗೆ ಇವೆಲ್ಲ ತುಂಬ ಪರಿಣಾಮಕಾರಿ ಎಂದು ಪೊಲೀಸರು ಅಧಿಕೃತ ಪ್ರಕಟಣೆಯನ್ನೇ ಹೊರಡಿಸಿಬಿಟ್ಟಿದ್ದಾರೆ.

    ಸಿಲಿಗುರಿ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯ ಹಲವು ಸಿಬ್ಬಂದಿ ಇದೇ ಮನೆಮದ್ದುಗಳನ್ನು ಅಳವಡಿಸಿಕೊಂಡು ಕರೊನಾದಿಂದ ಪಾರಾಗಿದ್ದಾರೆ ಎಂದೂ ಕೂಡ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

    ಕರೊನಾ ಬಾರದಂತೆ ನಿಯಂತ್ರಣ ಮತ್ತು ಸೋಂಕಿನಿಂದ ಮುಕ್ತರಾಗಲು ತಾವು ಹೇಗೆ ಸಾಸಿವೆ ಎಣ್ಣೆ ಮತ್ತು ಇತರ ಮನೆಮದ್ದುಗಳನ್ನು ಬಳಸುತ್ತಿದ್ದೇವೆ ಎಂಬುದನ್ನು ಪೊಲೀಸ್​ ಸರ್ಕ್ಯುಲರ್​​ನಲ್ಲಿ ಅವರು ತಿಳಿಸಿದ್ದು, ಹೀಗಿದೆ…
    ಬೇಯಿಸಿ ಚೆನ್ನಾಗಿ ಹಿಸುಕಿದ ಆಲೂಗಡ್ಡೆ, ಮೆದುವಾದ ಅನ್ನ ಹಾಗೂ ಸಾಸಿವೆ ಎಣ್ಣೆಯನ್ನು ಜಾಸ್ತಿ ಬಳಕೆ ಮಾಡಿದ ಸಲಾಡ್​ಗಳನ್ನು ಸೇವಿಸಬೇಕು.

    • ದಿನಕ್ಕೆ ಮೂರು ಬಾರಿ ಇಯರ್​ ಬಡ್​ಗಳ ಸಹಾಯದಿಂದ ಮೂಗಿನ ಹೊಳ್ಳೆಗಳ ಒಳಗೆ ಸಾಸಿವೆ ಎಣ್ಣೆಯನ್ನು ಲೇಪಿಸಬೇಕು.
    • ದಿನಕ್ಕೆ ನಾಲ್ಕರಿಂದ ಐದು ಬಾರಿ ಸ್ಟೀಮ್​ ತೆಗೆದುಕೊಳ್ಳಬೇಕು.
    • ದಿನಕ್ಕೆ ನಾಲ್ಕು ಬಾರಿ ಬಿಸಿ ನೀರಿಗೆ ಲಿಂಬೆ ರಸ ಬೆರೆಸಿ ಕುಡಿಯಬೇಕು.
    • ಹಾಗೇ ದಿನಕ್ಕೆ ನಾಲ್ಕು ಬಾರಿ ಬಿಸಿ ನೀರಿಗೆ ಉಪ್ಪು ಬೆರೆಸಿ ಗಾರ್ಗ್ಲಿಂಗ್​ ಮಾಡಬೇಕು.
    • ಪ್ರತಿದಿನ ಅರಿಶಿಣ ಮಿಶ್ರಿತ ಹಾಲನ್ನು ಕುಡಿಯಬೇಕು.

    ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಹಿಂದಿನ ಕಾಲದಿಂದಲೂ ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿ ಮನೆ ಮದ್ದಾಗಿ ಉಪಯೋಗಿಸಲಾಗುತ್ತದೆ. ಈಗ ಅದೇ ಪದ್ಧತಿಯನ್ನು ಕರೊನಾ ವಿರುದ್ಧ ಹೋರಾಟದಲ್ಲೂ ಅಳವಡಿಸಿಕೊಂಡಿದ್ದೇವೆ ಎಂದು ಸಿಲಿಗುರಿ ಪೊಲೀಸ್​ ಕಮಿಷನರೇಟ್​ ತಿಳಿಸಿದೆ. ಇದನ್ನೂ ಓದಿ: ಅಕ್ಟೋಬರ್​ವರೆಗೂ ಬದಲಾಗೋಲ್ಲ ಪಾಕಿಸ್ತಾನದ ಬಣ್ಣ…

    ಸಿಲಿಗುರಿ ಪೊಲೀಸ್​ ಆಯುಕ್ತ ತ್ರಿಪುರಾರಿ ಅರ್ಥವ್​ ಅವರು ಕೂಡ ಕರೊನಾ ವಿರುದ್ಧ ಹೋರಾಟಕ್ಕೆ ಇದೇ ದಾರಿಯನ್ನು ಕಂಡುಕೊಂಡಿದ್ದಾರೆ.

    ಉತ್ತರ ಬಂಗಾಳ ಡೆಪ್ಯೂಟಿ ಕಮಿಷನರ್​ ಅವರ ಸಂಬಂಧಿ, ಶ್ವಾನದಳ ನಿರ್ವಹಣಾ ಸಿಬ್ಬಂದಿ ಹಾಗೂ ಅವರ ಪತ್ನಿಗೆ ಕೊವಿಡ್​-19 ಕಾಣಿಸಿಕೊಂಡಿತ್ತು. ಅವರೂ ಕೂಡ ಈ ಮೇಲಿನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​) ಇದನ್ನೂ ಓದಿ: ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts