More

    ಮಳೆ ಹಾನಿ ಪ್ರದೇಶಕ್ಕೆ ಬೇಳೂರು ಭೇಟಿ

    ಆನಂದಪುರ: ಮಳೆ ಹಾನಿ ಪ್ರದೇಶಕ್ಕೆ ಸೋಮವಾರ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲಿಸಿದರು.
    ಇಲ್ಲಿನ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಅತ್ಯಂತ ಕೆಸರು ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಕಳೆದ ವಾರ ಸಾರ್ವಜನಿಕರ ದೂರು ಸ್ವೀಕರಿಸಿದ್ದ ಬೇಳೂರು ಕೆಸರಿನ ಜಾಗದಲ್ಲಿ ಜಲ್ಲಿ ತುಂಬುವಂತೆ ಸೂಚಿಸಿದ್ದರು. ಜಲ್ಲಿ ಅಳವಡಿಸಿದ ಕಾಮಗಾರಿ ವೀಕ್ಷಿಸಿ ಬರುವ ಬೇಸಿಗೆಯಲ್ಲಿ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ನಡೆಸುವ ಭರವಸೆ ನೀಡಿದರು.
    ಕಣ್ಣೂರು, ಮಲಂದೂರು, ಗಂಟಿಕೊನಕೊಪ್ಪ ಗ್ರಾಮಗಳಲ್ಲಿ ಮಳೆಯಿಂದ ಗೋಡೆ ಕುಸಿದ ಮನೆ ಮತ್ತು ಕೊಟ್ಟಿಗೆಗೆ ಹಾನಿಯಾಗಿದೆ. ಈ ಬಗ್ಗೆ ಪರಿಹಾರ ಧನ ವಿತರಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಗೌತಮಪುರ ಗ್ರಾಪಂ ವ್ಯಾಪ್ತಿಯ ಮಧ್ಯ ಕಣ್ಣೂರು ಗ್ರಾಮದಲ್ಲಿ ಹಳ್ಳದ ದಂಡೆ ಒಡೆದು ಕೃಷಿ ಜಮೀನು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
    ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಎಲ್ಲ ಬಗೆಯ ಮಳೆ ಹಾನಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಆನಂದಪುರ ಸಮುದಾಯ ಆರೋಗ್ಯ ಕೇಂದ್ರ ಮತ್ತು ರಿಪ್ಪನ್‌ಪೇಟೆ ಆಸ್ಪತ್ರೆಯಲ್ಲಿ ವೈದ್ಯರು ರಾತ್ರಿ ಪಾಳಿಯಲ್ಲಿ ಸಹ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಆನಂದಪುರ ಗ್ರಾಪಂ ಉಪಾಧ್ಯಕ್ಷ ಗಜೇಂದ್ರ, ಹೊಸೂರು ಗ್ರಾಪಂ ಸದಸ್ಯ ಆನಂದ ಹರಟೆ, ಗೌತಮಪುರ ಗ್ರಾಪಂ ಸದಸ್ಯ ದಾಸನ್ ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts