More

    ಮತ್ತೆ ಮುಂದಕ್ಕೆ ಹೋಯ್ತು ‘ಬೆಲ್​ ಬಾಟಂ’ ಬಿಡುಗಡೆ … ಈ ಬಾರಿ ಕಾರಣವೇನು?

    ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೊದಲಿಗೆ ಚಿತ್ರ ಇದೇ ವರ್ಷ ಏಪ್ರಿಲ್​ 08ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಇದ್ದ ಕಾರಣ, ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿ, ಜುಲೈ 27ಕ್ಕೆ ಬಿಡುಗಡೆ ಎಂದು ಘೋಷಿಸಲಾಯಿತು. ಈಗ ಮತ್ತೆ ಚಿತ್ರ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಪುಷ್ಕರ್ ಬಿಜಿನೆಸ್ ಫ್ರೆಂಡ್ ಅಲ್ಲ; ಒಡಕಿನ ಬಗ್ಗೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಈ ಬಾರಿ ಚಿತ್ರ ಮುಂದಕ್ಕೆ ಹೋಗಲು ಕಾರಣವೇನು? ಎಂಬ ಪ್ರಶ್ನೆ ಸಹಜ. ಈ ಬಾರಿಯೂ ಕರೊನಾನೇ ಕಾರಣ. ಮಹಾರಾಷ್ಟ್ರದಲ್ಲಿ ಇದೀಗ ಕರೊನಾ ಮೂರನೆಯ ಅಲೆ ಬೀಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲಿಗೆ ಜುಲೈ ಮಧ್ಯಭಾಗದ ಹೊತ್ತಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಮತ್ತು ಚಿತ್ರಪ್ರದರ್ಶನ ಪ್ರಾರಂಭವಾಗಬಹುದು ಎಂಬ ಅಂದಾಜಿನಿಂದ ಚಿತ್ರತಂಡವು ಜುಲೈ 27ಕ್ಕೆ ಚಿತ್ರ ಬಿಡುಗಡೆಯನ್ನು ಘೋಷಿಸಿತ್ತು.

    ಆದರೆ, ಇದೀಗ ನೋಡಿದರೆ ಮಹಾರಾಷ್ಟ್ರದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುತ್ತಿದೆ. ಬರೀ ಮಹಾರಾಷ್ಟ್ರ ಅಷ್ಟೇ ಅಲ್ಲ,ಬೇರೆ ರಾಜ್ಯಗಳಲ್ಲೂ ಇನ್ನೂ ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುತ್ತಿಲ್ಲ. ಸದ್ಯ ಪ್ರಾರಂಭವಾಗುವ ಹಾಗೆಯೂ ಕಾಣುತ್ತಿಲ್ಲ. ಹೀಗಿರುವಾಗ ಚಿತ್ರ ಬಿಡುಗಡೆ ಮಾಡಿ ಏನು ಮಾಡುವುದು ಎಂದು ಚಿತ್ರತಂಡವು, ಚಿತ್ರಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಹಾಗಾದರೆ, ಚಿತ್ರ ಬಿಡುಗಡೆ ಯಾವಾಗ? ಈ ಪ್ರಶ್ನೆಗೆ ಚಿತ್ರತಂಡದ ಬಳಿಯೂ ಉತ್ತರವಿಲ್ಲ. ಇದೆಲ್ಲ ಸಮಸ್ಯೆ ಸ್ವಲ್ಪ ತಣ್ಣಗಾಗಲೀ, ಆ ನಂತರ ಮುಂದೆ ನೋಡುವ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದ್ದು, ಸದ್ಯ ಯಾವುದೇ ದಿನಾಂಕವನ್ನೂ ಘೋಷಿಸಿಲ್ಲ.

    ಇದನ್ನೂ ಓದಿ: ಹೊಸ ದೃಶ್ಯ ಶುರು: ರವಿಚಂದ್ರನ್ ಜತೆ ಅನಂತನಾಗ್..

    ‘ಬೆಲ್​ ಬಾಟಂ’ ಚಿತ್ರವನ್ನು ರಂಜಿತ್​ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಕಥೆಯಾಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.

    ಬೈರಾಗಿ ಶಿವಪ್ಪ: ಶಿವಣ್ಣ ಸಿನಿಮಾಗೆ ಮರುನಾಮಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts